newsics.com
ತೆಲುಗು ಇಂಡಸ್ಟ್ರಿಯ ನಿರ್ಮಾಪಕ ಕಮ್ ನಿರ್ದೇಶಕ ಕೊಮಾರಿ ಜನಯ್ಯ ನಾಯ್ಡು (44) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಕಟ್‌ಪಲ್ಲಿಯ ಭಾಗ್ಯನಗರದಲ್ಲಿನ ಹೋಟೆಲ್‌ನಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಭಾಗ್ಯನಗರದಲ್ಲಿನ ಹೋಟೆಲ್ ರೂಮ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿರ್ದೇಶಕ ಕೊಮಾರಿ ಜನಯ್ಯ ನಾಯ್ಡು ಶವ ಪತ್ತೆಯಾಗಿದೆ. ಇದನ್ನು ಕಂಡ ಹೋಟೆಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಿರ್ದೇಶಕ ಕೊಮಾರಿ ಜನಯ್ಯ ನಾಯ್ಡು ಹಲವಾರು ತೆಲುಗು ಮೂವಿಗಳನ್ನು ನಿರ್ದೇಶನ ಮಾಡಿದ್ದಾರೆ.