Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಟೆಕ್ಕಿ ದಟ್ಟ ಮಂಜಿನ ಕಾರಣ, ತಡೆಗೋಡೆ ಇಲ್ಲದ ಅಸಮರ್ಪಕ ರಸ್ತೆ ಹಾಗೂ ನಿರ್ಮಾಣ ಕಾಮಗಾರಿಯಿಂದ ಸೃಷ್ಟಿಯಾದ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಭಾರಿ ಚರ್ಚೆಯಾಗಿದೆ. ಇದೀಗ ಟೆಕ್ಕಿಯ ಕೊನೆಯ ವಿಡಿಯೋ ಬಹಿರಂಗವಾಗಿದೆ. ಜೀವ ಉಳಿಸಲು ಟೆಕ್ಕಿ ಅಂಗಲಾಚುತ್ತಿರುವ ಕೊನೆಯ ವಿಡಿಯೋ ಇದು.
27 ವರ್ಷದ ಯುವರಾಜ್ ಮೆಹ್ತಾ ಜನವರಿ 16ರಂದು ಕೆಲಸ ಮುಗಿಸಿ ಮುಂಜಾನೆ ಮನೆಗೆ ಮರಳುವಾಗ ಈ ಘಟನೆ ನಡೆದಿತ್ತು. ಟೆಕ್ಕಿಯ ಕೊನೆಯ ವಿಡಿಯೋ ಇದೀಗ ಬಹಿರಂಗವಾಗಿದೆ. ಕಾರು ಅಪಘಾತವಾಗಿ ನಿರ್ಮಾಣ ಹಂತದ ಗುಂಡಿಗೆ ಬಿದ್ದಿದೆ. ಕೆಸರು ತುಂಬಿದ್ದ ಈ ಗುಂಡಿಯಲ್ಲಿ ಕಾರು ಮುಳುಗಲು ಆರಂಭಿಸಿದೆ. ಈ ವೇಳೆ ಕಾರಿನಿಂದ ಹೊರಬರಲು ಆಗದೆ, ತನ್ನ ಮೊಬೈಲ್ ಫ್ಲಾಶ್ ಆನ್ ಮಾಡಿ ಸಹಾಯಕ್ಕಾಗಿ ಕೂಗಿ ಕೊಂಡಿದ್ದಾನೆ.
ಅಪಘಾತವಾದ ಬಳಿಕ ಸಾವರಿಸಿಕೊಂಡ ಟೆಕ್ಕಿ ತಾನು ಗುಂಡಿಯಲ್ಲಿ ಬಿದ್ದು ಸಿಲಕಿದ್ದೇನೆ ಅನ್ನೋದು ಗೊತ್ತಾಗಿದೆ. ದಟ್ಟ ಮಂಜಿನ ಕಾರಣ ಯಾವುದು ಗೊತ್ತಾಗದ ಪರಿಸ್ಥಿತಿ, ತನ್ನ ಮೊಬೈಲ್ ಮೂಲಕ ತಂದೆ ಕರೆ ಮಾಡಿ ಅಪಘಾತವಾಗಿದೆ, ಗುಂಡಿಗೆ ಬಿದ್ದಿದ್ದೇನೆ. ನನಗೆ ಸಾಯಲು ಇಷ್ಟ ಇಲ್ಲ ಅಪ್ಪ, ಹೇಗಾದರು ಮಾಡಿ ನನ್ನ ಬದುಕಿಸು ಎಂದು ಅಂಗಲಾಚಿದ್ದಾನೆ. ಮಗನ ಕರೆಯಿಂದ ಆಘಾತಗೊಂಡ ತಂದೆ ಪೊಲೀಸರಿಗೆ ಫೋನ್ ಮಾಡುತ್ತಾ, ಸ್ಥಳಕ್ಕೆ ಧಾವಿಸಿದ್ದಾರೆ.
ಮಗ ಕೂಗಿ ಹೇಳುತ್ತಿದ್ದರೆ, ಇತ್ತ ತಂದೆ, ಧೈರ್ಯವಾಗಿ ಇರು ಎಂದು ಧೈರ್ಯ ತುಂಬದ್ದಾರೆ. ಆದರೆ ಮಗನ ಪ್ರಾಣ ಹೋಗುತ್ತಿದ್ದರೆ ತಂದೆ ಅಸಹಾಯಕರಾಗಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಪೊಲೀಸರು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸುವ ವೇಳೆಗೆ ಟೆಕ್ಕಿ ದುರಂತ ಅಂತ್ಯಕಂಡಿದ್ದಾನೆ. ಆದರೆ ಟೆಕ್ಕಿ ದುರಂತ ಸಾವಿನಿಂದ ತಂದೆ ಮಗನ ಉಳಿಸಲು ಸಾಧ್ಯವಾಗಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.
https://www.newsics.com/2026/01/24/german-beauty-poses-in-a-saree-netizens-are-in-awe-of-her-beauty/