Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ನಕಲಿ ಔಷಧಿಗಳಿಗೆ ಕಡಿವಾಣ ಹಾಕುವುದಕ್ಕೆ ಹೊಸ ರೂಲ್ಸ್ ಜಾರಿ
ಕರ್ನಾಟಕದೇಶಪ್ರಮುಖ

ನಕಲಿ ಔಷಧಿಗಳಿಗೆ ಕಡಿವಾಣ ಹಾಕುವುದಕ್ಕೆ ಹೊಸ ರೂಲ್ಸ್ ಜಾರಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಪದಾರ್ಥಗಳಿಂದ ಹಿಡಿದು ಪ್ರತಿ ವಸ್ತುಗಳಲ್ಲಿಯು ಕೂಡ ಕಲಬೆರಕೆ, ನಕಲಿ ವಸ್ತುಗಳು ಮಾರುಕಟ್ಟೆಗೆ ಪ್ರವೇಶಿಸಿ ಜನರ ಮನೆ ಸೇರುತ್ತಿವೆ. ಜನರಿಗೆ ನಕಲಿಯಾದ ವಸ್ತುವಿನ ಬಗ್ಗೆ ತಿಳಿಯದೆ ಸೇವಿಸಿ ಅನಾಹುತ ಸಂಭವಿಸಿದರೂ ಅಚ್ಚರಿಯಿಲ್ಲ.

ಇದೀಗ ದೇಶದಲ್ಲಿ ನಕಲಿ ಔಷಧಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಔಷಧಗಳ ಪ್ಯಾಕ್‌ ಮೇಲೆ ಅದರ ಕುರಿತ ಸಂಪೂರ್ಣ ವಿವರ ನೀಡುವ ಬಾರ್‌ಕೋಡ್‌, ಕ್ಯೂಆರ್‌ ಕೋಡ್‌  ವ್ಯವಸ್ಥೆಯನ್ನು ಜಾರಿಗೆ ತರಲು  ಆರೋಗ್ಯ ಇಲಾಖೆ ಮುಂದಾಗಿದೆ.

ಮೆಡಿಕಲ್ ಫೀಲ್ಡ್‌ನಲ್ಲಿ ಫೇಕ್ ಹಾಗೂ ಕಳಪೆ ಗುಣಮಟ್ಟದ ಔಷಧಿಗಳ ಉತ್ಪಾದನೆ ಹಾಗೂ ಮಾರಾಟದ ಪ್ರಕರಣಗಳು ಹೆಚ್ಚಾಗಿವೆ. ಈಗಾಗಲೇ ಆರೋಗ್ಯ ಇಲಾಖೆಯಿಂದ‌ ಫೇಕ್ ಹಾಗೂ ಕಳಪೆ ಗುಣಮಟ್ಟದ ಔಷಧಗಳನ್ನ ಪತ್ತೆ ಹಚ್ಚಿ ಅವುಗಳ ಬ್ಯಾಚ್ ನಂಬರ್ ಸಹಿತವಾಗಿ ಬ್ಯಾನ್ ಮಾಡಲಾಗುತ್ತಿದ್ದರೂ ಹೊಸ ಫೇಕ್ ಔಷಧಗಳು ತಲೆ ಎತ್ತುತ್ತಲಿವೆ. ಈ ಬೆನ್ನಲ್ಲೇ ಇದೀಗ ಮತ್ತಷ್ಟು ಔಷಧಗಳ ಬಳಕೆಯಲ್ಲಿ ಅನೇಕ ಬದಲಾವಣೆ ತರುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

ಫೇಕ್‌ ಔಷಧಗಳನ್ನ ಪತ್ತೆ ಹಚ್ಚಲು ಕ್ಯೂಆರ್​ ಕೋಡ್ ಮೊರೆ ಹೋಗುತ್ತಿದೆ. ಆರೋಗ್ಯ ಇಲಾಖೆ ನಕಲಿ ಔಷಧಿಗಳ ಪತ್ತೆಹಚ್ಚಲು ಹಾಗೂ ಬ್ರೇಕ್ ಹಾಕಲು ನಯಾ ಪ್ಲಾನ್ ಮಾಡಿದೆ. ಔಷಧಗಳ ಪ್ಯಾಕ್‌ ಮೇಲೆ ಬಾರ್‌ಕೋಡ್‌ ಮತ್ತು ಕ್ಯೂಆರ್ ಕೋಡ್‌ಗಳನ್ನು ಮುದ್ರಿಸಲು ಮುಂದಾಗಿದೆ. ಆ ಮೂಲಕ ಟ್ರ್ಯಾಕ್ ಮತ್ತು ಟ್ರೇಸ್ ಮಾಡಲು ಮುಂದಾಗಿದೆ. ಔಷಧಿಗಳನ್ನು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯಾಪ್ತಿಯಲ್ಲಿ ತಂದು ನಕಲಿ ಔಷಧಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ್ತಿದ್ದಂತೆಯೇ ಔಷಧಿಗಳ ಬ್ಯಾಚ್, ಇದು ಯಾವಾಗ ತಯಾರಿಸಿದ್ದು, ಯಾವ ಕಂಪನಿ, ಇದರಲ್ಲಿ ಬಳಕೆ ಮಾಡಿರುವ ವಸ್ತುಗಳು ಎಷ್ಟು ಪ್ರಮಾಣದಲ್ಲಿದೆ ಹಾಗೂ ಎಕ್ಸ್ಪೆರಿ ಡೇಟ್ ಮತ್ತು ಇದರ ಬಳಕೆಯ ಉಪಯೋಗಗಳು ಹಾಗೂ ಸೈಡ್ ಎಫೆಕ್ಟ್ ಏನಿದೆ ಎಂಬುದನ್ನ ಸಂಪೂರ್ಣವಾಗಿ ಮಾಹಿತಿ ದೊರೆಯುತ್ತದೆ.

 

ಅಷ್ಟೇ ಅಲ್ಲದೆ ಪ್ರತಿ ಔಷಧಗಳಿಗೂ ಬಾರ್ ಕೋಡ್ ಹಾಕುವುದರಿಂದ ಪ್ರತಿಯೊಬ್ಬರು ಸುಲಭವಾಗಿ ಔಷಧಗಳ ಉತ್ಪಾದಕ ಕಂಪನಿಯ ಮಾಹಿತಿ ಪಡೆಯಬಹುದಾಗಿದೆ. ಪ್ರಾರಂಭ ಹಂತದಲ್ಲಿ ಔಷಧಿಗಳಿಗೆ ಕ್ಯೂಆರ್​​​​ ಕೋಡ್ ಬಳಸಿ ನಂತರ ಇಡೀ ಫಾರ್ಮಾ ಕ್ಷೇತ್ರಕ್ಕೆ ಕೋಡಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಯಿಂದ ಈ ಬಗ್ಗೆ ಮಾಹಿತಿಯನ್ನ ಕೂಡ ಪಡೆಯಲು ಮುಂದಾಗಿದೆ.

https://www.newsics.com/2026/01/23/why-do-sinus-infections-increase-when-winter-comes/

TAGGED:New rules implemented to curb counterfeit medicines
Share This Article
Facebook Twitter Copy Link Print
Previous Article Sinusitis Season: ಚಳಿಗಾಲ ಬಂತು ಅಂದ್ರೆ ಸೈನಸ್ ಸೋಂಕುಗಳು ಹೆಚ್ಚಾಗೋದೇಕೆ? ಈ ಸಮಸ್ಯೆಯನ್ನು ತಡೆಯುವುದು ಹೇಗೆ?
Next Article ಕಾಸರಗೋಡು-ಮಂಗಳೂರು KSRTC ಪ್ರಯಾಣಿಕರಿಗೆ ಬಿಗ್​​ ಶಾಕ್ -ಟಿಕೆಟ್ ದರ ಹೆಚ್ಚಳ ಬರೆ

Popular Posts

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

You Might Also Like

ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?