Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಳಿಗಾಲ ಜೋರಾಗಿದೆ, ಯಾರ್ ನೋಡಿದರೂ ಅಯ್ಯೋ ಶೀತ, ಜ್ವರ, ತಲೆನೋವು, ಗಂಟಲು ನೋವು ಅಂತಾ ಒದ್ದಾಡ್ತಿದ್ದಾರೆ. ದಿನೇ ದಿನೇ ಈ ರೋಗಗಳ ಸಂಖ್ಯೆ ಹೆಚ್ಚಾಗ್ತಿದ್ದು, ಚಳಿಗಾಲವನ್ನು ದೂರತ್ತಾ, ಆಸ್ಪತ್ರೆಗೆ ಹೋಗ್ತಿದ್ದಾರೆ. ಈ ಲಕ್ಷಣಗಳು ಸಾಮಾನ್ಯವಾಗಿ ನೆಗಡಿಯಾದಾಗ ಕಂಡುಬರುವ ಲಕ್ಷಣಗಳಂತೆಯೇ ಇರುತ್ತವೆ, ಆದ್ರೆ ಇದು ಶೀತವಲ್ಲ ಸೈನಸ್ ಅಥವಾ ಸೈನುಟಿಸ್.
ಸೈನಸ್ ಎಂದರೆ ಮೂಗಿನ ಸುತ್ತ ಇರುವ ಗಾಳಿ ತುಂಬಿದ ಕುಳಿಗಳಾದ ಸೈನಸ್‌ಗಳಲ್ಲಿ ಉಂಟಾಗುವ ಉರಿಯೂತ ಅಥವಾ ಊತವಾಗಿದೆ.
ಇದು ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಅಥವಾ ಅಲರ್ಜಿಗಳಿಂದ ಉಂಟಾಗುತ್ತದೆ. ಇದರಿಂದ ಮೂಗಿನ ದಟ್ಟಣೆ, ಮುಖದ ನೋವು, ತಲೆನೋವಿನಂತಹ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಒಂದು ದಿನ ಬಂದು ಹಾಗೇ ಹೋಗುವ ಸಮಸ್ಯೆಯಲ್ಲ. ಇದು ಕಾಣಿಸಿಕೊಂಡರೆ ತಲೆ ಭಾರ ಆಗುತ್ತದೆ, ನಿದ್ರೆ ಮಾಡೋಕೆ ಆಗಲ್ಲ, ಓಡಾಡೋದಕ್ಕೂ ಕಷ್ಟ ಎನಿಸುತ್ತದೆ, ಒಟ್ಟಿನಲ್ಲಿ ಇದು ನಮ್ಮಲ್ಲಿ ಕಿರಿಕಿರಿ ಭಾವನೆಯನ್ನು ಉಂಟು ಮಾಡುತ್ತದೆ.
ಸೈನಸ್ ಸಮಸ್ಯೆಯನ್ನು ತಡೆಯುವುದು ಹೇಗೆ?
ಹೊರಗಡೆ ಹೋಗುವಾಗ ಗಾಳಿ ಇದ್ದಲ್ಲಿ ಮೂಗು ಮತ್ತು ಕಿವಿಯನ್ನು ಮುಚ್ಚಿಕೊಳ್ಳುವ ಮೂಲಕ ಬೆಚ್ಚಗಿಟ್ಟುಕೊಳ್ಳಿ.
ಲೋಳೆಯು ತೆಳುವಾಗಿಡಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
ಧೂಳು ಇತ್ಯಾದಿ ಅಲರ್ಜಿ ಉಂಟುಮಾಡುವ ಅಂಶಗಳಿಂದ ದೂರವಿರಿ.
ಮೂಗಿನ ದಟ್ಟಣೆ, ಕಿವಿ ನೋವು ಅಥವಾ ತಲೆತಿರುಗುವಿಕೆ ಕೆಲವು ದಿನಗಳವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ.
https://www.newsics.com/2026/01/23/serum-company-ceo-offers-to-buy-rcb/