Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಂಗಳೂರು-ಕಾಸರಗೋಡು ಮಾರ್ಗದ ಕುಂಬಳೆಯಲ್ಲಿ ಅಧಿಕೃತ ಟೋಲ್ ವಸೂಲಿ ಆರಂಭವಾಗುವ ಮುನ್ನವೇ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ.
ಜ. 20ರಿಂದ ಅಂದರೆ ಮಂಗಳವಾರದಿಂದ ಈ ಟೋಲ್ ಮೊತ್ತವನ್ನು ಸೇರಿಸುವ ಮೂಲಕ ಪರಿಷ್ಕೃತ ದರವನ್ನು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಗ್ರಹ ಮಾಡಲು ಶುರು ಮಾಡಿದೆ. ಇದರ ಜತೆಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೂಡ ಟಿಕೆಟ್ ದರದಲ್ಲಿ ಬದಲಾವಣೆಗಳನ್ನು ತಂದಿದೆ. ಕುಂಬಳದಿಂದ ಮಂಗಳೂರಿಗೆ ಈ ಹಿಂದೆ 67 ರೂ. ಇದ್ದ ಪ್ರಯಾಣ ದರವನ್ನು ಈಗ 75 ರೂ.ಗೆ ಹೆಚ್ಚಿಸಿದೆ.
ರಾಜಹಂಸ ಬಸ್ಗಳ ದರವನ್ನು ಕೂಡ 10 ರೂ. ವರೆಗೆ ಹೆಚ್ಚಿಸಿದೆ. 80 ರೂ.ನಿಂದ 90 ರೂ.ಗೆ ಏರಿಕೆಯಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳು ಟಿಕೆಟ್ ದರವನ್ನು 7 ರೂ. ಹೆಚ್ಚಿಸಿದ್ದು ಈಗಾಗಲೇ ಈ ದರ ಜಾರಿಯಲ್ಲಿದೆ. ಇನ್ನು ಟೋಲ್ ಪಾವತಿಯಿಂದ ವಿನಾಯಿತಿ ನೀಡುವಂತೆ ಕೋರಿ ಕರ್ನಾಟಕ ಸಾರಿಗೆ ಇಲಾಖೆಯ ಮಂಗಳೂರು ವಿಭಾಗದ ಅಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಾಸರಗೋಡು- ಮಂಗಳೂರು ರೂಟಿನಲ್ಲಿ ಕರ್ನಾಟಕ ಸಾರಿಗೆ ಬಸ್ ಗಳು ಪರಿಪೂರ್ಣ ಸರ್ವೀಸ್ ರೂಟಿನಲ್ಲೇ ಸಂಚರಿಸುತ್ತಿದ್ದು, ಎಲ್ಲಿಯೂ ಹೆದ್ದಾರಿ ಬಳಸುತ್ತಿಲ್ಲ. ಕೇವಲ ಕುಂಬಳೆ ಟೋಲ್ ಗೇಟಿನಲ್ಲಷ್ಟೇ ಹೆದ್ದಾರಿ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೋಲ್ ವಿನಾಯಿತಿ ನೀಡಬೇಕು. ನೀಡದಿದ್ದರೆ ಹೆಚ್ಚುವರಿ ಬಾಧ್ಯತೆಯಾಗುವ ಹೊರೆಯನ್ನು ನಾವು ಟಿಕೆಟ್ ಮೂಲಕ ಪ್ರಯಾಣಿಕರಿಗೆ ಹೇರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಕರ್ನಾಟಕ ಕೆಎಸ್ಸಾರ್ಟಿಸಿ ಉಲ್ಲೇಖಿಸಿದೆ.
https://www.newsics.com/2026/01/23/new-rules-implemented-to-curb-counterfeit-medicines/