Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಬಂಗಾರದ ದರ ಮಾರುಕಟ್ಟೆಯಲ್ಲಿ ಓಡ್ತಾನೆ ಇದ್ದು, ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಭರ್ಜರಿಯಾಗಿ ಏರಿವೆ. ಎರಡೂ ಕೂಡ ಹೊಸ ದಾಖಲೆ ಬರೆದಿವೆ. ಚಿನ್ನದ ಬೆಲೆ ಗ್ರಾಮ್ಗೆ 175 ರೂ ಏರಿದೆ. ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ (ಜನವರಿ 19ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,569 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,355 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,927 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 305 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,569 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,355 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 305 ರೂ
ಅಮೆರಿಕಾ-ಇರಾನ್ ನಡುವಿನ ತೀವ್ರ ಉದ್ವಿಗ್ನತೆ ನಡುವೆ, ಅತ್ತ ಟ್ರಂಪ್ ಆಡಳಿತದ ಗ್ರೀನ್‌ಲ್ಯಾಂಡ್ ಸಂಬಂಧಿತ ನಿಲುವಿಗೆ ವಿರೋಧಿಸಿದ ಯುರೋಪ್ ದೇಶಗಳ ಮೇಲೆ ಟ್ಯಾರಿಫ್ ವಿಧಿಸಿದ ಹಿನ್ನೆಲೆ ಅತ್ತ ಚಿನ್ನದ ಬೆಲೆಯೂ ಏರಿಕೆ ಕಂಡಿದೆ.ಇನ್ನು ಗಾಜಾದಲ್ಲಿ ಶಾಂತಿ ಮತ್ತು ಆಡಳಿತ ಪುನರ್ ನಿರ್ಮಾಣಕ್ಕಾಗಿ ಟ್ರಂಪ್ ಹೊಸ ನಿರ್ಧಾರ ಕೈಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಭಾರತದಲ್ಲಿ ಚಿನ್ನ-ಬೆಳ್ಳಿ ದರ ಭಾರೀ ಏರಿಕೆ ಕಂಡಿದೆ.https://www.newsics.com/2026/01/19/why-did-cm-siddaramaiah-reject-the-photo-of-roy-given-by-a-fan-r-ashok-kidi/