Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕರೀಂನಗರ: ಪಾಪಿ ಪತಿಯೋರ್ವ ತನ್ನ ಪತ್ನಿ ಮೂಲಕವೇ ಬರೊಬ್ಬರಿ 150ಕ್ಕೂ ಹೆಚ್ಚು ಯುವಕರ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಬ್ಲಾಕ್ ಮೇಲ್ ಮಾಡಿ ಬರೊಬ್ಬರಿ 3 ಕೋಟಿ ರೂಗೂ ಅಧಿಕ ಹಣ ಸುಲಿಗೆ ಮಾಡಿರುವ ಘಟನೆಆಂಧ್ರಪ್ರದೇಶದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.
ಮಂಚೇರಿಯಲ್ ಜಿಲ್ಲೆಯ ಈ ದಂಪತಿಗಳು ಕೆಲವು ಸಮಯದಿಂದ ಕರೀಂನಗರ ಗ್ರಾಮೀಣ ವ್ಯಾಪ್ತಿಯ ಅರೆಪಲ್ಲಿ ಶ್ರೀ ಸಾಯಿ ನಿವಾಸ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಪತಿ ಮಾರ್ಬಲ್ ಮತ್ತು ಒಳಾಂಗಣ ವ್ಯವಹಾರ ನಡೆಸುತ್ತಿದ್ದರೆ, ಪತ್ನಿ ಸಾಮಾಜಿಕ ಮಾಧ್ಯಮದ ಮೂಲಕ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. Karimnagar Pilla 143 (instagram) LallyDimplequeen ಎಂಬ ಖಾತೆಗಳನ್ನು ಹೊಂದಿದ್ದರು. ಆದಾಗ್ಯೂ, ವ್ಯವಹಾರದಲ್ಲಿ ಉಂಟಾದ ನಷ್ಟಗಳು, ಹೆಚ್ಚಿದ ಸಾಲಗಳು ಮತ್ತು ಇಎಂಐಗಳಿಂದಾಗಿ ಆರ್ಥಿಕ ಹೊರೆ ನಿಭಾಯಿಸಲಾಗದೇ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಹನಿಟ್ರ್ಯಾಪ್ ಗೆ ಮುಂದಾಗಿದ್ದಾರೆ.
ಈ ದಂಪತಿ ಯುವಕರು ಮತ್ತು ಪುರುಷರನ್ನು ಪುಸಲಾಯಿಸಿ ಅವರನ್ನು ಹನಿಟ್ರ್ಪಾಪ್ ಗೆ ಬಳಸಿಕೊಂಡಿದ್ದಾರೆ. ತನ್ನನ್ನು ಸಂಪರ್ಕಿಸುವವರೊಂದಿಗೆ ಒಪ್ಪಂದ ಮಾತನಾಡಿಕೊಂಡು ಅವರನ್ನು ತನ್ನ ನಿವಾಸಕ್ಕೆ ಆಹ್ವಾನಿಸುತ್ತಿದ್ದಳು. ಅವರು ಏಕಾಂತದಲ್ಲಿರುವಾಗ ಆಕೆಯ ಪತಿ ತನ್ನ ಮೊಬೈಲ್ ಫೋನ್‌ನಲ್ಲಿ ರಹಸ್ಯವಾಗಿ ನಗ್ನ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದ. ಬಳಿಕ ಅದರ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ಹೀಗೇ ಈ ಜೋಡಿ ಸಂತ್ರಸ್ಥರಿಂದ ಸುಮಾರು ಕೋಟ್ಯಂತರ ಹಣ ಸುಲಿಗೆ ಮಾಡಿದೆ.
ದಂಪತಿಗಳು ಕಳೆದ ಮೂರು ವರ್ಷಗಳಿಂದ ನೂರಕ್ಕೂ ಹೆಚ್ಚು ಉದ್ಯಮಿಗಳು, ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
https://www.newsics.com/2026/01/19/instagram-reels-will-now-be-translated-into-five-languages/