newsics.com
ಕಣ್ಣು ಹೊಡೆದು ಚುಡಾಯಿಸಿದ ಕುಡುಕನಿಗೆ ಮಹಿಳೆಯೋರ್ವಳು ನಡುರಸ್ತೆಯಲ್ಲೇ ಚಪ್ಪಲಿಯಿಂದ ಅಟ್ಟಾಡಿಸಿದ ಘಟನೆ ವಿಜಯಪುರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ನಿಲ್ದಾಣದ ಎದುರು ನಿಂತು ಬಸ್ನಲ್ಲಿ ಹೋಗುವ ಬರುವ ಮಹಿಳಾ ಪ್ರಯಾಣಿಕರಿಗೆ ಈ ಕುಡುಕ ಕಣ್ಣು ಹೊಡೆದು ಚುಡಾಯಿಸುತ್ತಿದ್ದ. ಅದೇ ರೀತಿ ಮಹಿಳೆಗೆ ಕಣ್ಣು ಹೊಡೆದಿದ್ದಾನೆ.
ಮಹಿಳೆ ಕೋಪಕೊಳ್ಳುತ್ತಿದಂತೆ ಕಣ್ಣು ಹೊಡೆದು ಕುಡುಕ ಓಡಿಹೋಗುತ್ತಿದ್ದ , ಈ ವೇಳೆ ರೊಚ್ಚಿಗೆದ್ದ ಮಹಿಳೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.
ಸದ್ಯ ಕುಡುಕನಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.