newsics.com
ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ಮಹಿಳೆ ರಸ್ತೆ ಬದಿಯಲ್ಲಿ ನಿಂತು ತಲೆಯನ್ನ ಬಾಚಿಕೊಳ್ತಾ ಇದ್ದಳು. ಅದೇ ಸಮಯಕ್ಕೆ ಓರ್ವ ಯುವಕ ಹೇಗೆ ಕೈ ಬೀಸ್ತಾ ಬೀಸ್ತಾ, ಅತ್ತಿಂದಿತ್ತ ನೋಡ್ತಾ ಇದ್ದ. ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕ್ತಾ ಎಂಟ್ರಿ ಕೊಟ್ಟಿದ್ದಾನೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡೋಕು ಭಯಪಡುವಂತೆ ವಾತಾವರಣ ನಿರ್ಮಾಣವಾಗಿದೆ. ಅಂದಾಗೆ ಈ ಘಟನೆ ನಡೆದಿರೋದು ಇದು ಕಳೆದ ಶುಕ್ರವಾರ ಬೆಳಂಬೆಳಗ್ಗೆ. ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ರಸ್ತೆ ಬದಿ ವಾಕ್ ಮಾಡಲು ನಿಂತಿದ್ದ ಮಹಿಳೆ ಕಾಮುಕನೊಬ್ಬ ಕಾಟಕೊಟ್ಟಿದ್ದಾನೆ. ಮಹಿಳೆಗೆ ಗೊತ್ತಾಗದಂತೆ ಆಕೆಯ ಬಳಿ ತನ್ನ ವಿಕೃತಿ ತೋರಿದ್ದಾನೆ. ಕಾಮುಕನ ಕೈಯಿಂದ ತಪ್ಪಿಸಿಕೊಂಡ ಮಹಿಳೆ ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಈ ವೇಳೆ ಕಾಮುಕ ಸ್ಥಳದಿಂದ ಎಸ್ಕೇಪ್ ಆಗ್ಬಿಟ್ಟಿದ್ದಾನೆ.
ಕಳೆದ ಶುಕ್ರವಾರವೇ ಈ ಘಟನೆ ನಡೆದಿದ್ರೂ ಮಹಿಳೆ ದೂರು ನೀಡಿರಲಿಲ್ಲ. ಸಿಸಿಟಿವಿ ದೃಶ್ಯ ಯಾವಾಗ ಮಾಧ್ಯಮಗಳಲ್ಲಿ ಪ್ರಸಾರವಾಯ್ತೋ ಆಗ ನೊಂದ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಡಿವಿಆರ್ ಅನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.