Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಟ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಪ್ರಸಾರ ನಿಲ್ಲಿಸುವಂತೆ ಅಥವಾ ಗೈಡ್‌ಲೈನ್ಸ್ ಸಮೇತ ಟೀಸರ್ ಪ್ರಸಾರ ಮಾಡಿ ಎಂದು ವಕೀಲ ಲೋಹಿತ್ ಅವರು ಸೆನ್ಸಾರ್ ಮಂಡಳಿಗೆ ದೂರ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ, ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆಯಲು ರೆಡಿಯಿದ್ದಾರೆ.

ಈ ಬಗ್ಗೆ ಮಾತನಾಡಿದ ಲೋಹಿತ್ “ಸೆನ್ಸಾರ್ ಮಂಡಳಿವು A, U ಸೆರ್ಟಿಫಿಕೇಟ್ ಕೊಡ್ತಾರೆ. ಥಿಯೇಟರ್‌ನಲ್ಲಿ ಆಧಾರ್ ಕಾರ್ಡ್ ತೋರಿಸಿ ಸಿನಿಮಾ ನೋಡಲು ಹೋಗಬೇಕು. ನಾನು ಯಶ್ ಅಥವಾ ಚಿತ್ರರಂಗದ ವಿರುದ್ಧ ಇಲ್ಲ. ಟಾಕ್ಸಿಕ್ ಸಿನಿಮಾವನ್ನು ಕುಟುಂಬದ ಸಮೇತ ನೋಡಲು ಆಗೋದಿಲ್ಲ ಎಂದು ಹೇಳಿದ್ದಾರೆ.
ಇದು ಕುಟುಂಬ ಸಮೇತ ನೋಡುವ ಸಿನಿಮಾವಲ್ಲ, ಚಿಕ್ಕ ಮಕ್ಕಳಿಗೆ ಸಿನಿಮಾ ತೋರಿಸಲೇಬಾರದು ಎಂದು ಮುನ್ನಚ್ಚೆರಿಕೆಯಿಂದ ಹೇಳಬೇಕು. ಮಕ್ಕಳ ಜೊತೆಗೆ ಕುಟುಂಬದ ಜೊತೆಗೆ ಟೀಸರ್ ನೋಡಿದೆ ಎಂದು ಎಷ್ಟೋ ಜನರು ಬೇಸರ ಹೊರಹಾಕಿದ್ದಾರೆ” ಎಂದು ಲೋಹಿತ್ ಹೇಳಿದ್ದಾರೆ.ಟಾಕ್ಸಿಕ್ ಚಿತ್ರದ 2 ನಿಮಿಷ 51 ಸೆಕೆಂಡುಗಳ ಟೀಸರ್‌ನಲ್ಲಿನ ಒಂದು ಆತ್ಮೀಯ ದೃಶ್ಯವಿದೆ.. ಈ ಸೀನ್ ಇದೀಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇದೀಗ ವಕೀಲರೊಬ್ಬರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅಂತಹ ಚಿತ್ರ ಕುಟುಂಬ ವೀಕ್ಷಣೆಗೆ ಸೂಕ್ತವಲ್ಲ ಎಂದು ಆರೋಪಿಸಿದ್ದಾರೆ.
ಟಾಕ್ಸಿಕ್ ಚಿತ್ರದ ಟೀಸರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಕೀಲ ಲೋಹಿತ್ ಕುಮಾರ್ ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ಟೀಸರ್‌ನಲ್ಲಿ ಚಿತ್ರಿಸಲಾದ ದೃಶ್ಯಗಳನ್ನು ನೋಡಿದರೆ, ಚಿತ್ರವು ಕುಟುಂಬ ವೀಕ್ಷಣೆಗೆ ಸೂಕ್ತವಲ್ಲ ಎಂದು ವಕೀಲರು ಹೇಳಿದ್ದಾರೆ. ಅಲ್ಲದೆ, ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟೀಸರ್‌ಗಳಿಗೆ ಯಾವುದೇ ಮಾರ್ಗಸೂಚಿಗಳಿಲ್ಲದಿರುವುದು ಸಮಸ್ಯೆಯಾಗಿದೆ. ಟೀಸರ್‌ಗಳಿಗೆ ಸೆನ್ಸಾರ್ ಮಂಡಳಿಯು ಸ್ಪಷ್ಟ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯ ರಾಜಕಾರಣಕ್ಕೆ ಮತ್ತೆ H.D ಕುಮಾರಸ್ವಾಮಿ ಎಂಟ್ರಿ! : ಟಾಕ್ಸಿಕ್ ಟೀಸರ್ ರೀಮೇಕ್