Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸೂರಜ್ ಸಿಂಗ್ ದೊಡ್ಮನೆಯಿಂದ ಔಟ್ ಆದ ಬೆನ್ನಲ್ಲೇ ಇದೀಗ ಮತ್ತೊಬ್ಬ ಸ್ಪರ್ಧಿ ಹೊರ ನಡೆದಿದ್ದಾರೆ.
ಡಬಲ್ ಎಲಿಮಿನೇಶನ್ ಎಂದು ಶಾಕ್ ನೀಡಿದ್ದ ಬಿಗ್‌ಬಾಸ್ ಶನಿವಾರದ ಎಪಿಸೋಡ್‌ನಲ್ಲಿ ಸೂರಜ್ ಎಲಿಮಿನೇಟ್ ಆದರು. ಇದೀಗ ಇಂದಿನ ಎಪಿಸೋಡ್‌ನಲ್ಲಿ ಮಾಳು ಹಾಗೂ ಸ್ಪಂದನಾ ಪೈಕಿ ಒಬ್ಬರು ದೊಡ್ಮನೆಯಿಂದ ಹೊರನಡೆಯುವುದು ಪಕ್ಕಾ ಆಗಿದೆ.
ಇಂದಿನ ಎಲಿಮಿನೇಶನ್ ಪ್ರಕ್ರಿಯೆಗೆ ಎರಡು ವಾಹನಗಳು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದೆ. ನಿನ್ನೆ ಸೇವ್ ಆಗಿದ್ದ ಮಾಳು ಹಾಗೂ ಸ್ಪಂದನಾ ಅವರಲ್ಲಿ ಒಬ್ಬರು ಮನೆಯಿಂದ ಕರೆದುಕೊಂಡು ಹೋಗಲು ಎರಡು ವಾಹನ ಬಿಗ್‌ಬಾಸ್ ಮನೆಯೊಳಗೆ ಬಂದಿದೆ. ಎರಡು ವಾಹನದಲ್ಲಿ ಇಬ್ಬರು ಕುಳಿತಿದ್ದು, ಸೇವ್ ಆಗಿರುವ ಒಬ್ಬ ಸ್ಪರ್ಧಿ ಮತ್ತೇ ದೊಡ್ಮನೆಯಲ್ಲಿ ಆಟವನ್ನು ಮುಂದುವರೆಸಲಿದ್ದಾರೆ.
ಈ ವಾರ ಧನುಷ್, ಧ್ರುವಂತ್, ಸೂರಜ್, ರಾಷಿಕಾ, ರಕ್ಷಿತಾ, ಮಾಳು, ಸ್ಪಂದನಾ ಎಲಿಮಿನೇಷನ್ ರೌಂಡ್‌ನಲ್ಲಿದ್ದರು.