Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತಮಗೆ ಪ್ರೀತಿ ತೋರಿದವರಿಗಾಗಿ ಕಾಗೆಗಳು ಗಿಫ್ಟ್ ಕೊಡುತ್ತವಂತೆ. ಹೌದು, ಕಾಗೆಗಳಿಗೆ ಒಂದು ಉನ್ನತ ಸ್ವಭಾವವಿದ್ದು ಅದು ತನಗೆ ಅನ್ನ ಹಾಕಿದವರಿಗೆ ಹಾಗೂ ತನ್ನ ಮೇಲೆ ಕರುಣೆ ತೋರಿದವರಿಗೆ ಬಹುಮಾನವನ್ನು ನೀಡುತ್ತವಂತೆ.
ತಮಗೆ ಪ್ರೀತಿ ತೋರಿದವರಿಗಾಗಿ ಅವು ಸಣ್ಣದಾದ ಆಭರಣಗಳನ್ನು ಬಿಟ್ಟು ಹೋಗುತ್ತವೆ ಎಂದು ಅನೇಕರು ತಮ್ಮ ಸ್ವಂತ ಅನುಭವಗಳನ್ನು ಹೇಳಿದ್ದಾರೆ. ಮಿನುಗುವ ಲೋಹ, ಬೆಣಚುಕಲ್ಲು, ಬಾಟಲಿಯ ಮುಚ್ಚಳ, ಬಟನ್ಗಳು, ಉಂಗುರಗಳು ಈ ಬಹುಮಾನಗಳಲ್ಲಿ ಸೇರಿಕೊಂಡಿವೆ. ಇದನ್ನು ಕಾಗೆ ಅವರಿಗೆ ದೊರೆಯುವಂತಹ ಸ್ಥಳದಲ್ಲಿಯೇ ಇರಿಸುತ್ತದೆ. ತಮ್ಮ ಮೇಲೆ ದಯೆ, ಕರುಣೆ ತೋರಿದವರ ಮೇಲೆ ಕಾಗೆಗಳು ಈ ರೀತಿ ತಮ್ಮ ಪ್ರೀತಿಯನ್ನು ತೋರಿಸುತ್ತವೆ ಎನ್ನಲಾಗಿದೆ.
ವಿಜ್ಞಾನಿಗಳು ಕೂಡ ಇದರ ಹಿಂದಿರುವ ಆಸಕ್ತಿಕರ ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದು, ಅವು ಮನುಷ್ಯರೊಂದಿಗೆ ಹೇಗೆ ಸಂವಹನ ನಡೆಸುತ್ತವೆ? ಅವರಂತೆ ಹೇಗೆ ಯೋಚಿಸುತ್ತವೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ ಹಾಗೂ ಈ ವಿಷಯದ ಹಿಂದೆ ಆಕರ್ಷಕ ಅರಿವಿನ ಪ್ರಕ್ರಿಯೆಗಳಿವೆ ಎಂಬುದನ್ನು ಕಂಡುಕೊಂಡಿದ್ದಾರೆ.
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಪ್ರಕಟವಾದ ಪೀರ್-ರಿವ್ಯೂಡ್ ಅಧ್ಯಯನವು ಅಮೇರಿಕನ್ ಕಾಗೆಗಳು ಹಲವಾರು ವರ್ಷಗಳ ಕಾಲ ತನಗೆ ಅಪಾಯವನ್ನುಂಟು ಮಾಡಿದ ಇಲ್ಲವೇ ತನ್ನೊಂದಿಗೆ ದಯೆಯಿಂದ ನಡೆದುಕೊಂಡ ವ್ಯಕ್ತಿಯ ಮುಖಗಳನ್ನು ನೆನಪಿಸಿಕೊಳ್ಳಬಲ್ಲವು ಎಂದು ತೋರಿಸಿದೆ.
ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಕ್ರೌರ್ಯ: ಮನಸೋಇಚ್ಛೆ ಥಳಿಸಿ ಖಾರದಪುಡಿ ಎರಚಿ ಶಿಕ್ಷಕ ದಂಪತಿ ದೌರ್ಜನ್ಯ