newsics.com
ಬೆಂಗಳೂರು: ಕೇರಳದ ವಯಾನಾಡ್ ದುರಂತಕ್ಕೆ ನಟಿ ರಶ್ಮಿಕಾ ಮಂದಣ್ಣ ಕಣ್ಣೀರಾಗಿದ್ದಾರೆ. ದುರಂತ ಮಿಡಿದ ರಶ್ಮಿಕಾ ಮಂದಣ್ಣ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಘಟನೆಗೆ ಮಿಡಿದ ರಶ್ಮಿಕಾ ಮಂದಣ್ಣ ಸದ್ದಿಲ್ಲದೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತಾವು ದೇಣಿಗೆ ನೀಡಿರುವ ಮಾಹಿತಿಯನ್ನು ರಶ್ಮಿಕಾ ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲೂ ಬಹಿರಂಗಪಡಿಸಿಲ್ಲ.
ರಶ್ಮಿಕಾ ಮಂದಣ್ಣ ಖಾಸಗಿ ಕಾರ್ಯಕ್ರಮ ನಿಮಿತ್ತ ಕೇರಳದ ಕುರಂಗಪಲ್ಲಿಗೆ ಭೇಟಿ ನೀಡಿದ್ದರು. ಈ ವೇಳೆ ಕಿಕ್ಕಿರಿದು ಅಭಿಮಾನಿಳು ತುಂಬಿದ್ದರು. ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ರಶ್ಮಿಕಾ ಮಂದಣ್ಣ ಬೆರಗಾಗಿದ್ದರು. ಕೇರಳ ಜನತೆಯ ಪ್ರೀತಿ, ಆತಿಥ್ಯವನ್ನು ರಶ್ಮಿಕಾ ಮಂದಣ್ಣ ಕೊಂಡಾಡಿದ್ದರು. ಜುಲೈ 25ರಂದು ರಶ್ಮಿಕಾ ಮಂದಣ್ಣ ಕೇರಳಕ್ಕೆ ಬೇಟಿ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ವಯಾನಡು ದುರಂತ ಸಂಭವಿಸಿದೆ. ಇದೀಗ ಪರಿಹಾರಕ್ಕೆ ಸಹಾಯಹಸ್ತ ಚಾಚುವ ಮೂಲಕ ಕೇರಳ ಮಾತ್ರವಲ್ಲ ಎಲ್ಲರ ಮನಗೆದ್ದಿದ್ದಾರೆ.