Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಇತ್ತೀಚೆಗೆ ಎರಡನೇ ಮದುವೆ ಮಾಡಿಕೊಂಡಿದ್ದು ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ಸ್ಯಾಮ್ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಕೆಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿ ಡಿಸೆಂಬರ್ 1 ರಂದು ವಿವಾಹವಾದರು. ಇಬ್ಬರೂ ಪ್ರಸ್ತುತ ತಮ್ಮ ಹನಿಮೂನ್ ಆನಂದಿಸುತ್ತಿರುವಾಗ ಪ್ರಣಯದ ಬಗ್ಗೆ ಸಮಂತಾ ಈ ಹಿಂದೆ ಮಾಡಿರುವ ಕಾಮೆಂಟ್ಗಳು ಸಂಚಲನ ಮೂಡಿಸುತ್ತಿವೆ.
ಆಹಾರ ಮತ್ತು ದೈಹಿಕ ಸಂಪರ್ಕದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ನಿರೂಪಕಿಯೊಬ್ಬರು ಸಮಂತಾ ಅವರನ್ನು ಕೇಳಿದಾಗ, ಅವರು ಧೈರ್ಯದಿಂದ.. ʼನಾನು ಆಹಾರವಿಲ್ಲದೆ ಬದುಕಬಲ್ಲೆ, ಆದರೆ ನಾನು ದೈಹಿಕ ಸಂಪರ್ಕವಿಲ್ಲದೇ ಬದುಕಲು ಸಾಧ್ಯವಿಲ್ಲ..ʼ ಎಂದಿದ್ದರು.. ಅವರ ಈ ಕಾಮೆಂಟ್ಗಳು ಸದ್ಯ ವೈರಲ್ ಆಗಿವೆ.
ಚಿತ್ರರಂಗದಲ್ಲಿ, ಒಬ್ಬ ತಾರೆಯರ ಮದುವೆ ನಡೆದಾಗ, ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಚರ್ಚೆಗಳು ಪ್ರಾರಂಭವಾಗುತ್ತವೆ. ವಿವಾಹ ಸಂಭ್ರಮದ ಸದ್ದುಗಳನ್ನು ಬದಿಗಿಟ್ಟು, ನೆಟಿಜನ್ಗಳು ಯಾವಾಗಲೂ ಸೆಲೆಬ್ರಿಟಿಗಳ ಹಿಂದಿನ ಬಗ್ಗೆ ಕುತೂಹಲದಿಂದಿರುತ್ತಾರೆ. ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ವಿವಾಹವಾವು ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ದೃಶ್ಯವನ್ನು ಪುನರಾವರ್ತಿಸುತ್ತದೆ. ಅವರ ಡೇಟಿಂಗ್ ಮತ್ತು ಮದುವೆ ಹಾಟ್ ಟಾಪಿಕ್ ಆಗಿದೆ ಎಂದರೇ ಅತಿಶಯೋಕ್ತಿಯಲ್ಲ..
ಡಿಸೆಂಬರ್ 1 ರಂದು ಕೊಯಮತ್ತೂರಿನ ಇಶಾ ಫೌಂಡೇಶನ್ನಲ್ಲಿ ಸಮಂತಾ ಮತ್ತು ರಾಜ್ ನಿಧಿಮೋರು ಅತ್ಯಂತ ಸರಳ ರೀತಿಯಲ್ಲಿ ವಿವಾಹವಾದರು.