Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗಷ್ಟೇ ನಿರ್ದೇಶಕ ರಾಜ್ ನಿಡಿಮೋರು ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ಸಮಂತಾರ ಮದುವೆ ಲುಕ್ ಗಮನಸೆಳೆದಿದೆ.
ಮದುವೆಯ ದಿನ ಸಮಂತಾ ಅವರು ಕೆಂಪು ಬಣ್ಣದ ಕಾಂಚೀವರಂ ಸೀರೆ ಜತೆಗೆ ಡೀಟೈಲ್ ಬಾರ್ಡರ್, ದಕ್ಷಿಣ ಭಾರತದ ಸಂಪ್ರದಾಯಕ್ಕೆ ಸೇರಿ ಹೊಂದುವ ಟೆಂಪಲ್ ಜ್ಯೂವೆಲರಿ, ಲಕ್ಷ್ಮೀ ದೇವಿ ಇರುವ ಮಂಗಳಸೂತ್ರ, ಸಿಂಪಲ್ ಮೆಹಂದಿ, ಹೇರ್ ಬನ್ ಜತೆಗೆ ಮಲ್ಲಿಗೆ ಹೂವು. ಹೀಗೆ ಸಮಂತಾ ತಮ್ಮ ಮದುವೆ ದಿನ ಸಿಂಪಲ್ ಲುಕ್‌ನಲ್ಲಿ ತುಂಬಾನೇ ಎಲಿಗೆಂಟ್ ಆಗಿ ಕಾಣುತ್ತಿದ್ದರು. ಅವರ ಒಟ್ಟಾರೆ ಲುಕ್ ಸಂಪ್ರದಾಯ ಜತೆ ಜತೆಗೆ ಮಾಡರ್ನ್ ಎನ್ನುವಂತೆ ಇತ್ತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.
ಸಮಂತಾ ಮತ್ತು ರಾಜ್ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. 2017ರಲ್ಲಿ ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು.
ಕೇವಲ ಆತ್ಮೀಯರ ಸಮ್ಮುಖದಲ್ಲಿ ಕೊಯಮತ್ತೂರಿನ ಈಶಾ ಫೌಂಡೇಷನ್‌ನಲ್ಲಿರುವ ಲಿಂಗ ಭೈರವಿ ದೇವಿ ಆಲಯದಲ್ಲಿ ಸರಳವಾಗಿ ಸಮಂತಾ-ರಾಜ್ ವಿವಾಹವಾಗಿದ್ದರು.
ವಿವಾಹ ಸಮಾರಂಭವು ಯಾವುದೇ ಮಾಧ್ಯಮ ಪ್ರಚಾರವಿಲ್ಲದೆ, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ, ಕೇವಲ 30 ಅತಿಥಿಗಳೊಂದಿಗೆ ನಡೆಯಿತು. ಈ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸಮಂತಾ ಅವರ ಫೋಟೋಗಳಲ್ಲಿ, ಅವರು ಧರಿಸಿದ್ದ ಉಂಗುರವು ಹೈಲೈಟ್ ಆಗಿದೆ. ಮದುವೆಯಲ್ಲಿ ಕೆಂಪು ರೇಷ್ಮೆ ಸೀರೆಯಲ್ಲಿ ಸಮಂತಾ ಸುಂದರವಾಗಿ ಕಾಣುತ್ತಿದ್ದರು.
ಹಸಿವು ತಡೆಯಬಲ್ಲೆ, ಆದ್ರೆ ಅದಿಲ್ಲದೇ ಇರಲಾರೆʼ; ಸಮಂತಾ ಬೋಲ್ಡ್ ಹೇಳಿಕೆ ವೈರಲ್