newsics.com
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರೋ ದರ್ಶನ್ ಅವರಿಗೆ ಕಂಬಿ ಹಿಂದಿನ ಸೆರೆವಾಸಕ್ಕಿಂತ ಜೈಲೂಟವೇ ದೊಡ್ಡ ಶಿಕ್ಷೆಯಾಗಿದೆ. ಪ್ರತಿ ದಿನ ಜೈಲೂಟದಿಂದ ಪಾರಾದ್ರೆ ಸಾಕು ಅನ್ನೋ ಭಜನೆ ಮಾಡುತ್ತಿದ್ದಾರೆ. ಈ ಮಧ್ಯೆ ಇಂದು ಜೈಲಿಗೆ ಭೇಟಿ ಕೊಟ್ಟ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್, ದರ್ಶನ್ ಅವರಿಗೆ ದೇವರ ಪ್ರಸಾದ ನೀಡಿ ಧೈರ್ಯ ತುಂಬಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ ದರ್ಶನ್ ಕುಟುಂಬಸ್ಥರು ಕೆಲ ಕಾಲ ಚರ್ಚೆ ಮಾಡಿದ್ದಾರೆ.
ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಗಂಡನ ಸಂಕಷ್ಟ ದೂರವಾಗಿ ಜೈಲಿನಿಂದ ಬೇಗ ಬಿಡುಗಡೆಗೊಳ್ಳಲಿ ಎಂದು ನವಚಂಡಿಕಾ ಯಾಗ ಮಾಡಿಸಿದ್ದರು. ಪತಿಗೆ ಒಳಿತಾಗಲಿ ಎಂದು ದೇವತೆಯ ಬಳಿ ಕೇಳಿ ಕೊಂಡ ವಿಜಯಲಕ್ಷ್ಮಿ ಅವರು ದೇವರ ಪ್ರಸಾದ ಕೊಟ್ಟಿದ್ದಾರೆ. ದರ್ಶನ್ಗೆ ದೇವರ ಪ್ರಸಾದ ನೀಡಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಅವರು ಸಮಾಧಾನ ಮಾಡಿದ್ದಾರೆ.