Subscribe ನ್ಯೂಸಿಕ್ಸ್ ಕನ್ನಡ NewsicsKannada /YouTubenewsics.com
ಯುವಕನೋರ್ವ ವಿದೇಶಿ ಮಹಿಳೆಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ನ್ಯೂಜಿಲೆಂಡ್ ನಿಂದ ಬಂದ ವಿದೇಶಿ ಮಹಿಳೆಗೆ ಈತ ಕಿರುಕುಳ ನೀಡಿದ್ದು, ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.
ನ್ಯೂಜಿಲೆಂಡ್ನ ಮಹಿಳಾ ಪ್ರವಾಸಿಯೊಬ್ಬರು ಏಕಾಂಗಿ ಪ್ರವಾಸದ ಸಮಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಅನುಭವವನ್ನು ವಿವರಿಸಿದ್ದಾರೆ.
ರಿಕ್ಷಾ ಶೈಲಿಯ ವಾಹನದಲ್ಲಿ ಶ್ರೀಲಂಕಾದ ಮೂಲಕ ಪ್ರಯಾಣಿಸುತ್ತಿದ್ದ ಮಹಿಳೆ, ಅರುಗಮ್ ಕೊಲ್ಲಿಯಿಂದ ಪಾಸಿಕುಡಾ ಕಡೆಗೆ ಪ್ರಯಾಣಿಸುತ್ತಿದ್ದರು. ಇತ್ತ ವ್ಯಕ್ತಿಯೊರ್ವ ಸ್ಕೂಟರ್ನಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದನು. ಆರಂಭದಲ್ಲಿ ಅವನನ್ನು ನಿರ್ಲಕ್ಷಿಸಿ ತನ್ನ ಪ್ರಯಾಣವನ್ನು ಮುಂದುವರಿಸಿದರೂ, ಅವಳು ಸ್ವಲ್ಪ ವಿರಾಮಕ್ಕಾಗಿ ನಿಲ್ಲಿಸಿದಾಗ ಆ ವ್ಯಕ್ತಿ ಮತ್ತೆ ಕಾಣಿಸಿಕೊಂಡನು. ಅವನು ತನ್ನ ಸ್ಕೂಟರ್ ನಿಲ್ಲಿಸಿ, ಅವಳ ಬಳಿಗೆ ಹೋಗಿ ಮಾತನಾಡಲು ಶುರು ಮಾಡಿದ್ದಾನೆ.
ಆ ವ್ಯಕ್ತಿ ಆರಂಭದಲ್ಲಿ ಪರಿಚಯ ಇರುವನ ರೀತಿ ಮಾತನಾಡಿದ. ಆದರೆ ಲೈಂಗಿಕವಾಗಿ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ ಮತ್ತು ಇದ್ದಕ್ಕಿದ್ದಂತೆ ಅಸಭ್ಯವಾಗಿ ವರ್ತಿಸಿದ್ದಾನೆ. ಕೂಡಲೇ ಭಯಗೊಂಡ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಈ ಘಟನೆಯು ತನ್ನನ್ನು ತುಂಬಾ ನಡುಗಿಸಿದೆ ಎಂದು ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
Shocking case ಜೂಜಿನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಪತಿಯೆದುರೇ ಮಾವ, ಮೈದುನರಿಂದಲೇ ಸಾಮೂಹಿಕ ಅ*ತ್ಯಾಚಾರ! ನದಿಗೆಸೆದು ಕೊಲ್ಲಲು ಯತ್ನ