Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Shocking case ಜೂಜಿನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಪತಿಯೆದುರೇ ಮಾವ, ಮೈದುನರಿಂದಲೇ ಸಾಮೂಹಿಕ ಅ*ತ್ಯಾಚಾರ! ನದಿಗೆಸೆದು ಕೊಲ್ಲಲು ಯತ್ನ
ದೇಶಪ್ರಮುಖ

Shocking case ಜೂಜಿನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಪತಿಯೆದುರೇ ಮಾವ, ಮೈದುನರಿಂದಲೇ ಸಾಮೂಹಿಕ ಅ*ತ್ಯಾಚಾರ! ನದಿಗೆಸೆದು ಕೊಲ್ಲಲು ಯತ್ನ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube

newsics.com

ಪತ್ನಿಯನ್ನು ಜೂಜಿನಲ್ಲಿ ಪಣಕ್ಕಿಟ್ಟ ಪತಿ ಮಹಾಶಯ ಸೋತಿದ್ದರಿಂದ ಮಾವ, ಮೈದುನ ಸೇರಿದಂತೆ ಆಕೆಯ ಮೇಲೆ ಸಾಮೂಹಿಕ ಅ*ತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಸಮುದ್ರಕ್ಕೆ ಎಸೆದ ಅತ್ಯಂತ ಹೀನಾಯ ಘಟನೆಯೊಂದು ಬೆಳಕಿಗೆ ಬಂದಿದೆ.

ಇಷ್ಟಾದರೂ ಆಕೆಯನ್ನು ಕಾಪಾಡಲು ಯಾರೂ ಬರಲಿಲ್ಲ. ಹೇಗೋ ಜೀವ ಉಳಿಸಿಕೊಂಡಿರುವ ಮಹಿಳೆ ಈಗ ಸಹಾಯಕ್ಕಾಗಿ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾಳೆ.

ಇಂಥದ್ದೊಂದು ಕರಾಳ, ಭಯಾನಕ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ. ಇಂಥ ನೀಚ ಕೃತ್ಯ ಮಾಡಿರುವ ಪತಿ ಡ್ಯಾನಿಶ್, ಗಂಡನ ಅಣ್ಣ ಶಾಹಿದ್, ಅತ್ತಿಗೆಯ ಪತಿ ಶೌಕೀನ್, ಮಾವ ಯಾಮಿನ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಸಂತ್ರಸ್ತೆ ದೂರು ದಾಖಲು ಮಾಡಿದ್ದಾಳೆ.

ಕಳೆದ ವರ್ಷ ಅಕ್ಟೋಬರ್ 24 ರಂದು ಸಂತ್ರಸ್ತೆಯ ಮದುವೆ ಜೂಜುಕೋರ ಕುಟುಂಬದ ಜತೆ ನಡೆದಿದೆ. ಮದುವೆಯ ಆರಂಭದಿಂದಲೂ ಕುಡಿತ, ಜೂಜಿನಿಂದಾಗಿ ಪತಿಯಿಂದ ಹಿಂಸೆ ಅನುಭವಿಸುತ್ತಲೇ ಬಂದಿದ್ದಾಳೆ ಮಹಿಳೆ. ಆದರೆ ಆಕೆಯ ರಕ್ಷಣೆಗೆ ಯಾರೂ ಬಾರದ ಕಾರಣ ಅದನ್ನು ಅನುಭವಿಸುತ್ತಲೇ ಇದ್ದಾಳೆ.

ಆದರೆ, ಈಚೆಗೆ ಜೂಜಿನಲ್ಲಿ ಅದೂ ತನ್ನ ತಂದೆಯ ಎದುರೇ ಪತ್ನಿಯನ್ನು ಡ್ಯಾನಿಷ್ ಪಣಕ್ಕಿಟ್ಟಿದ್ದಾನೆ. ಸೊಸೆಯನ್ನೇ ಪಣಕ್ಕಿಟ್ಟಿದ್ದನ್ನು ಒಪ್ಪಿಕೊಂಡಿರೋ ಈ ಕಾಮುಕ ಕುಟುಂಬಸ್ಥರು ಆಕೆಯನ್ನು ಮುರಿದು ಮುಕ್ಕಿದ್ದಾರೆ!

‘ಜೂಜಿನಲ್ಲಿ ಪಣಕ್ಕೆ ಇಡುವ ಮೊದಲು ನನ್ನ ಗಂಡ ಹಣಕ್ಕಾಗಿ ಇತರ ಪುರುಷರೊಂದಿಗೆ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದ. ಅದನ್ನು ನಾನು ನಿರಾಕರಿಸಿದ್ದೆ. ಆದರೆ, ಜೂಜಿನಲ್ಲಿಯೇ ಪಣಕ್ಕಿಟ್ಟ, ಸೋತ. ಆಗ ಮಾವ, ಮೈದುನ ಸೇರಿ ಎಂಟು ಮಂದಿ ನನ್ನ ಮೇಲೆ ಪದೇ ಪದೇ ಅ*ತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ನನ್ನ ಮಾವ ಯಾಮಿನ್, ನೀನು ವರದಕ್ಷಿಣೆ ತರಲಿಲ್ಲ, ಆದ್ದರಿಂದ ನಾವು ಹೇಳುವ ಎಲ್ಲವನ್ನೂ ನೀನು ಪಾಲಿಸಬೇಕು. ನಮ್ಮನ್ನು ಸಂತೋಷವಾಗಿಡಬೇಕು ಎಂದು ಹೇಳುತ್ತಲೇ ರೇ* ಮಾಡುತ್ತಿದ್ದ. ಇದನ್ನು ಸಹಿಸಿಕೊಳ್ಳಲು ಆಗದೇ ತಪ್ಪಿಸಿಕೊಂಡು ಬಂದು ದೂರು ನೀಡುತ್ತಿದ್ದೇನೆ ಎಂದಿದ್ದಾಳೆ!

ನದಿಗೆ ಎಸೆದರು…
ನನ್ನ ಮದುವೆಯಿಂದಲೂ ವರದಕ್ಷಿಣೆಗಾಗಿ ನಾನು ಹಿಂಸೆ ಅನುಭವಿಸುತ್ತಿದ್ದೆ. ನನ್ನ ಗಂಡ ಜೂಜಾಟಕ್ಕೆ ವ್ಯಸನಿಯಾಗಿದ್ದ. ಅವರೆಲ್ಲ ಅ*ತ್ಯಾಚಾರ ಮಾಡಿದ್ದರಿಂದ ಗರ್ಭಿಣಿಯೂ ಆದೆ. ಅದನ್ನು ತೆಗೆಸಿದರು. ನಾನು ಅವರಿಗೆ ಸಹಕರಿಸಲಿಲ್ಲ ಎನ್ನುವ ಕಾರಣಕ್ಕೆ ಕಾಲಿಗೆ ಆ್ಯಸಿಡ್ ಸುರಿದರು. ನದಿಗೆ ಎಸೆದರು. ದಾರಿಹೋಕರು ನನ್ನನ್ನು ಉಳಿಸಿದರು. ಈಗ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ನನಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಮಹಿಳೆ ಕಣ್ಣೀರಿದ್ದಾಳೆ.

ಬಿನೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ವಿಷಯ ತನಿಖೆಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

TAGGED:gang-raped by father-in-law and relativesHusband loses gambling gameloses wife
Share This Article
Facebook Twitter Copy Link Print
Previous Article ಕಾರು ತೊಳೆಯುವ ವೇಳೆ ಕಾಲುವೆಯಲ್ಲಿ ಕೊಚ್ಚಿ ಹೋದ ಕಾರು
Next Article ವಿದೇಶಿ ಮಹಿಳೆಗೆ ಖಾಸಗಿ ಅಂಗ ತೋರಿಸಿದ ಯುವಕ: ವೈರಲ್ ವಿಡಿಯೋ ನೋಡಿ

Popular Posts

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

You Might Also Like

ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read
ಪ್ರಮುಖಮನರಂಜನೆ

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read
ಪ್ರಮುಖ

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?