Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಭಾರತ ತಂಡವು 93 ವರ್ಷಗಳಲ್ಲಿ ಹಲವು ಏಳು ಬೀಳುಗಳನ್ನು ಕಂಡಿದೆ. ಆದ್ರೆ ಏಳು ಬೀಳುಗಳ ನಡುವೆ ಇದೀಗ ಭಾರತ ತಂಡವು ಸೋತು ಭಾರೀ ಮುಖಭಂಗ ಅನುಭವಿಸಿದೆ.
ಸ್ಪಿನ್ನರ್ ಗಳ ಬಲೆಗೆ ಬಿದ್ದ ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ 93 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿದೆ. ಮೊದಲ ಟೆಸ್ಟ್ ಪಂದ್ಯವನ್ನು 30 ರನ್ ನೊಂದಿಗೆ ಗೆದ್ದ ದಕ್ಷಿಣ ಆಫ್ರಿಕಾ ತಂಡ ಭಾರತದ ನೆಲದಲ್ಲಿ 15 ವರ್ಷಗಳ ನಂತರ ಇದೇ ಮೊದಲ ಬಾರಿ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ 7 ವಿಕೆಟ್ ಗೆ 93 ರನ್ ಗೆ ಎರಡನೇ ಇನಿಂಗ್ಸ್ ಮುಕ್ತಾಯಗೊಂಡಿತು.
ಮೊದಲ ಇನಿಂಗ್ಸ್ ನಲ್ಲಿ 30 ರನ್ ಗಳ ಮುನ್ನಡೆ ಪಡೆದಿದ್ದ ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ 93 ರನ್ ಗೆ ಪತನಗೊಂಡು 30 ರನ್ ಗಳಿಂದ ಸೋಲುಂಡಿತು. ಗಾಯಗೊಂಡಿದ್ದ ಶುಭಮನ್ ಗಿಲ್ ಕಣಕ್ಕಿಳಿಯಲಿಲ್ಲ.
ದಕ್ಷಿಣ ಆಫ್ರಿಕಾ ತಂಡ 15 ವರ್ಷಗಳ ನಂತರ ಭಾರತದ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಗೆದ್ದು ಇತಿಹಾಸ ಬರೆಯಿತು. ಅಲ್ಲದೇ ಟೆಂಬು ಭವುಮಾ ನೇತೃತ್ವದಲ್ಲಿ ಹರಿಣಗಳ ತಂಡ ಕಳೆದ 11 ಟೆಸ್ಟ್ ಗಳಲ್ಲಿ 10 ರಲ್ಲಿ ಜಯ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನ ಪಡೆದರೆ, ಭಾರತ ತಂಡ ೪ನೇ ಸ್ಥಾನಕ್ಕೆ ಕುಸಿಯಿತು.
ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಲೈಂಗಿಕ ಕಿರುಕುಳ ನೀಡಿದ ಕಾಮುಕ!