Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಬಿಹಾರ ವಿಧಾನಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಆರ್ ಜೆಡಿ ಪಕ್ಷದ ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸೋದರಿ ಸೋದರಿ ಯಾದವ್ ಮೇಲೆ ತೇಜಸ್ವಿ ಯಾದವ್ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ ಜೆಡಿ ಪಕ್ಷದ ಮುಖಂಡ ಹಾಗೂ ಪ್ರತಿಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್ ಶನಿವಾರ ನಡೆದ ಮಾತುಕತೆ ವೇಳೆ ಸೋಲಿಗೆ ರೋಹಿಣಿ ಆಚಾರ್ಯ ಕಾರಣ ಎಂದು ಆರೋಪಿಸಿ ನಿಂದಿಸಿದ್ದೂ ಅಲ್ಲದೇ ಕೋಪದ ಭರದಲ್ಲಿ ಆಕೆಯ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಈ ಕುಟುಂಬವೂ ಬೇಡ, ರಾಜಕಾರಣವೂ ಬೇಡ ಎಂದು ನೋವು ತೋಡಿಕೊಂಡ ರೋಹಿಣಿ ಆಚಾರ್ಯ, ಇದೀಗ ಲಾಲು ಪ್ರಸಾದ್ ಯಾದವ್ ಕುಟುಂಬದ ಮನಸ್ತಾಪ ಹಾಗೂ ಜಗಳದ ತೀವ್ರತೆ ಬಯಲಾಗಿದೆ. ಮನೆಯಿಂದ ನನ್ನನ್ನು ಹೊರಹಾಕಲಿದೆ. ನನಗೆ ಸ್ವಾಭಿಮಾನ ಇದೆ, ಆದರೆ ಅಭಿಮಾನ ಬೀದಿಯಲ್ಲಿ ಹರಾಜಹಾಕುವಂತೆ ಮಾಡಿದ್ದಾರೆ. ನನಗೆ ಅವಾಮಾನ ಮಾಡಿದ್ದಾರೆ. ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ಅನಾಥರನ್ನಾಗಿ ಮಾಡಿದರು. ಯಾರು ನನ್ನ ಹಾದಿಯಲ್ಲಿ ನಡೆದಿಲ್ಲ. ಯಾರಿಗೂ ನನ್ನಂತ ಮಗಳು ಸಹದೋರಿ ಸಿಗ್ಗಲ ಎಂದು ರೋಹಿಣಿ ಆಚಾರ್ಯ ಹೇಳಿದ್ದಾರೆ.
ತಂದೆಯ ಕಷ್ಟ, ಆರೋಗ್ಯ ನೋಡಿ ನಾನು ನನ್ನ ಕುಟುಂಬವನ್ನು, ಪತಿ, ಅತ್ತೆ ಮಾವ ಯಾರನ್ನೂ ಕೇಳದೆ ತಂದೆಗೆ ನನ್ನ ಕಿಡ್ನಿ ನೀಡಿದೆ. ಇದರ ನೋವು ತ್ಯಾಗ ಯಾರಿಗೂ ಗೊತ್ತಾಗುತ್ತಿಲ್ಲ. ಆದರೆ ಕೊಳಕು ಕಿಡ್ನಿಯನ್ನು ತಂದೆಗೆ ನೀಡಿ ಕೋಟಿ ಕೋಟಿ ರೂಪಾಯಿ ಲಾಭ ಮಾಡಿದ್ದಾರೆ ಎಂದು ನನ್ನ ವಿರುದ್ದ ಆರೋಪ ಮಾಡಿದ್ದಾರೆ. ಕೊಳಕು ಕಿಡ್ನಿ ಲಾಲು ಪ್ರಸಾದ್ ಯಾದವ್‌ಗೆ ನೀಡಿ ಕೋಟಿ ರೂಪಾಯಿ ಪಡೆದಿದ್ದು ಮಾತ್ರವಲ್ಲ,ಜೊತೆಗೆ ಚನಾವಣಾ ಟಿಕೆಟ್ ಕೂಡ ಪೆಡೆಯಲಾಗಿದೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ನೇರವಾಗಿ ರೋಹಣಿ ಆಚಾರ್ಯ ಸಹೋದರ ತೇಜಸ್ವಿ ಯಾದವ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನಿಂದಾಗಿ ನಾವು ಚುನಾವಣೆಯಲ್ಲಿ ಸೋತೆವು. ನಿನ್ನಿಂದಾಗಿ ನಾವು ಮಣ್ಣುಮುಕ್ಕಿದೆವು ಎಂದು ತೇಜಸ್ವಿ ಸೋದರಿ ರೋಹಿಣಿ ಆಚಾರ್ಯ ಮೇಲೆ ನೇರ ಆರೋಪ ಮಾಡಿದ್ದಾರೆ.
ರೋಹಿಣಿ ಆಚಾರ್ಯ ತಂದೆ ಲಾಲೂ ಪ್ರಸಾದ್ ಯಾದವ್ ಗೆ ಕಿಡ್ನಿ ದಾನ ಮಾಡಿದ್ದು, ಇದು ಕೊಳಕು ಕಿಡ್ನಿ ಎಂದು ತೇಜಸ್ವಿ ಕಿಡಿಕಾರಿದ್ದಾರೆ. ಕಳೆದ ಬಾರಿ ಸರನ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ರೋಹಿಣಿ ಸೋಲಿಗೆ ನೈತಿಕ ಹೊಣೆ ಹೊತ್ತಿದ್ದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ 243ಸ್ಥಾನಗಳಲ್ಲಿ ಕೇವಲ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
93 ವರ್ಷಗಳ ಇತಿಹಾಸದಲ್ಲೇ ಟೀಮ್ ಇಂಡಿಯಾಗೆ ಹೀನಾಯ ಸೋಲು