Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಾಯಿ ಮುದ್ದು ಮಾಡುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಬಳಿ ನಡೆದಿದೆ.
ಹೌದು ಬೆಂಗಳೂರಲ್ಲಿ ವಾಕಿಂಗ್ ಗೆ ಎಂದು ಯುವತಿ ತನ್ನ ಮುದ್ದಿನ ನಾಯಿಯೊಂದಿಗೆ ತೆರಳಿದ್ದಾಳೆ ಈ ವೇಳೆ ಅಪಚಿತ ಕಾಮುಕನೊಬ್ಬ ಬಂದು ನಾಯಿಯನ್ನು ಮುಟ್ಟಬಹುದಾ ಎಂದು ಕೇಳಿ ಯುವತಿಯ ಮೈಕೈ ಮುಟ್ಟಿಯ ಅಸಭ್ಯ ವರ್ತನೆ ತೋರಿದ್ದಾನೆ.
ಇದರಿಂದ ಯುವತಿ ಆತನ ಕಪಾಳಕ್ಕೆ ಬಾರಿಸಿದ್ದಾಳೆ, ಆದರೂ ಕೂಡ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಭಯಗೊಂಡು ಯುವತಿ ಓಡಿದ್ದಾಳೆ. ಓಡುವ ವೇಳೆ ಆಕೆಯ ಬಳಿದಂತಹ ಮೊಬೈಲ್ ಅನ್ನು ಕಸಿದು ಕಾಮುಕ ಪರಾರಿಯಾಗಿದ್ದಾನೆ.
ಈ ಎಲ್ಲಾ ಗಲಾಟೆಯ ನಡುವೆ ಮಹಿಳೆಯ ಫೋನ್ ರಸ್ತೆಗೆ ಬಿದ್ದಿದ್ದು, ಮಹಿಳೆ ಜೋರಾಗಿ ಕಿರುಚಿದ್ದಾರೆ. ಈ ಸಂದರ್ಭದಲ್ಲಿ ಕೆಳಗೆ ಬಿದ್ದ, ಸುಮಾರು 25,000 ರೂ. ಬೆಲೆಯ ಮೊಬೈಲ್ ತೆಗೆದುಕೊಂಡ ವ್ಯಕ್ತಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಾರ್ವಜನಿಕರು ಸೇರುವಷ್ಟರಲ್ಲಿ ಕಾಮುಕ ಪರಾರಿಯಾಗಿದ್ದು, ಲೈಂಗಿಕ ಕಿರುಕುಳ ನೀಡಿದ ಹಿನ್ನಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
Teacher punished student ತಡವಾಗಿ ಬಂದಿದ್ದಕ್ಕೆ ಸಿಟಪ್ಸ್ ಶಿಕ್ಷೆ ನೀಡಿದ ಶಿಕ್ಷಕಿ: ಆರನೇ ಕ್ಲಾಸ್ ವಿದ್ಯಾರ್ಥಿನಿ ಸಾವು