newsics.com
ತುಮಕೂರು: ದೆಹಲಿಯಲ್ಲಿ ಕಾರು ಸ್ಫೋಟ ಪ್ರಕರಣ ಇಡೀ ದೇಶದ ಜನತೆಯನ್ನು ಬೆಚ್ಚಿಬೀಳಿಸಿದ್ದು, ಈ ಪ್ರಕರಣದ ಬಳಿಕ ರಾಜ್ಯಕ್ಕೂ ರಾಷ್ಟ್ರ ರಾಜಧಾನಿ ದೆಹಲಿಗೂ ನಂಟು ಇದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ತುಮಕೂರಿನಲ್ಲಿ ಶಂಕಿತ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಕಳುಹಿಸಿರುವ ಘಟನೆ ವರದಿಯಾಗಿದೆ.
ದೆಹಲಿ ಸ್ಫೋಟದ ಬಳಿಕ ತುಮಕೂರಿನಲ್ಲಿ ವ್ಯಕ್ತಿಯ ವಿಚಾರಣೆ ನಡೆಸಲಾಗುತ್ತಿದೆ. ಉಗ್ರ ಸಂಘಟನೆ ಜತೆಗೆ ಈ ಹಿಂದೆ ಈ ವ್ಯಕ್ತಿ ಉಗ್ರ ಸಂಘಟನೆಯ ಸಂಪರ್ಕದಲ್ಲಿ ಇದ್ದ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತುಮಕೂರಿನ ಪಿ ಎಚ್ ಕಾಲೋನಿ ನಿವಾಸಿಯ ವಿಚಾರಣೆ ನಡೆಸಲಾಗುತ್ತಿದೆ.
ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿಚಾರಣೆ ನಡೆದಿದೆ. ASI ಪುರುಷೋತ್ತಮ್ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ. ಸುಮಾರು 2 ಗಂಟೆ ವಿಚಾರಣೆ ನಡೆಸಿ ನಂತರ ವ್ಯಕ್ತಿಯನ್ನು ಬಿಟ್ಟು ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವ್ಯಕ್ತಿಗೆ ಆರು ಹೆಂಡತಿಯರು! 6 ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿ – ವೈರಲ್ ವಿಡಿಯೋ ನೋಡಿ
ರಶ್ಮಿಕಾ ಮಂದಣ್ಣ ಕೈ ಹಿಡಿದು ಮುತ್ತಿಟ್ಟ ವಿಜಯ್ ದೇವರಕೊಂಡ – ವಿಡಿಯೋ ನೋಡಿ