Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Special class ದಸರಾ ರಜೆ ವಿಸ್ತರಣೆ: ತರಗತಿ ಕೊರತೆ ಸರಿದೂಗಿಸಲು ಸ್ಪೆಷಲ್ ಕ್ಲಾಸ್‌ಗೆ ಸೂಚನೆ
ಕರ್ನಾಟಕಪ್ರಮುಖ

Special class ದಸರಾ ರಜೆ ವಿಸ್ತರಣೆ: ತರಗತಿ ಕೊರತೆ ಸರಿದೂಗಿಸಲು ಸ್ಪೆಷಲ್ ಕ್ಲಾಸ್‌ಗೆ ಸೂಚನೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ದಸರಾ ರಜೆ ವಿಸ್ತರಣೆಯಿಂದ ಕೊರತೆಯಾಗಿರುವ ಕಲಿಕಾ ಅವಧಿ ಸರಿದೂಗಿಸಲು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಉಳಿದಿರುವ ಶಾಲಾ ದಿನಗಳಲ್ಲಿ ನಿತ್ಯ ಒಂದು ಹೆಚ್ಚುವರಿ ಅವಧಿ ತರಗತಿ ಬೋಧನೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ.

ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೊರತೆಯಾಗುವ ಶಾಲಾ ದಿನಗಳ ಬೋಧನಾ ಕಲಿಕೆ ಸರಿದೂಗಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

2025-26 ನೇ ಸಾಲಿನಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳನ್ನು ಒಳಗೊಂಡ ಶೈಕ್ಷಣಿಕ ಮಾರ್ಗಸೂಚಿ ನೀಡಲಾಗಿದೆ. ಈ ಮಾರ್ಗಸೂಚಿಯಲ್ಲಿ 2025-26 ನೇ ಸಾಲಿನ ದಸರಾ ರಜೆ ಅವಧಿಯನ್ನು ದಿನಾಂಕ: 22/09/2025 ರಿಂದ 07/10/2025 ರ ವರೆಗೆ ನಿಗದಿಗೊಳಿಸಲಾಗಿತ್ತು.

ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಈ ಅವಧಿಯಲ್ಲಿ ಕಳೆದುಕೊಳ್ಳುವ ಶಾಲಾ ದಿನಗಳು (ಕಾರ್ಯನಿರತ ದಿನಗಳು) 8,9,10,11,13 ರಿಂದ 18 ಆಗಿದ್ದು, ಒಟ್ಟಾರೆ 10 ಶಾಲಾ ದಿನಗಳ ಕೊರತೆಯಾಗಿದೆ. ಇದರಲ್ಲಿ 8 ಪೂರ್ಣದಿನ ಮತ್ತು 2 ಅರ್ಧದಿನಗಳಾಗಿರುತ್ತದೆ.

(ಎ) ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ 8 ಪೂರ್ಣ ದಿನ & 2 ಅರ್ಧ ದಿನಗಳು, ಪ್ರತಿ ಅವಧಿಯ ಸಮಯ 45 ನಿಮಿಷಗಳು ಆಗಿದೆ.

8 ಪೂರ್ಣ ದಿನಗಳು 8*7-56 ಅವಧಿಗಳು

2 ಅರ್ಧ ದಿನಗಳು- 2*5=10 ಅವಧಿಗಳು. ಒಟ್ಟು 66 ಅವಧಿಗಳು.

ಕೊರತೆಯಾಗುವ ಕಲಿಕಾ ಅವಧಿಗಳನ್ನು ಸರಿದೂಗಿಸಲು ಹಾಗೂ ಕಲಿಕಾ ಕೊರತೆಯನ್ನು ಸರಿದೂಗಿಸಲು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕ್ರಮ ಕೈಗೊಳ್ಳಲು ತಿಳಿಸಿದೆ.

07.11.2025 ರಿಂದ 24.01.2026 ರ ಅವಧಿಯಲ್ಲಿ ಒಟ್ಟು 66 ಕರ್ತವ್ಯದ ದಿನಗಳಂದು ಪ್ರತಿ ದಿನ ಹೆಚ್ಚುವರಿ ಅವಧಿಯನ್ನು ನಿರ್ವಹಿಸಿ ಕಲಿಕಾ ಅವಧಿಗಳನ್ನು ಸರಿದೂಗಿಸಿಕೊಳ್ಳಲು ಸೂಚಿಸಿದೆ.

ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ 8.9.10 ನೇ ತರಗತಿಗಳಿಗೆ ಈ ದಿನಗಳಲ್ಲಿ ಒಂದು ಹೆಚ್ಚುವರಿ ಅವಧಿಯನ್ನು ಶಾಲಾ ಪ್ರಾರಂಭದಲ್ಲಿ ಅಥವಾ ಶಾಲಾ ಅವಧಿ ನಂತರದಲ್ಲಿ ಆಯಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವುದು.

ಜನವರಿ 2026ರಿಂದ ಮಾರ್ಚ್ 2026(ಪರೀಕ್ಷೆವರೆಗೆ) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದು.

10ನೇ ತರಗತಿ (ಎಸ್.ಎಸ್.ಎಲ್.ಸಿ) ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ವಿಶೇಷ ಗಮನಹರಿಸಿ ಕ್ರಮ ವಹಿಸಲು ಸೂಚಿಸಿದೆ.

ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ 8 ಪೂರ್ಣ ದಿನ & 2 ಅರ್ಧ ದಿನಗಳು, ಪ್ರತಿ ಅವಧಿಯ ಸಮಯ 40 ನಿಮಿಷಗಳು ಆಗಿದೆ. ಒಟ್ಟು 74 ಅವಧಿಗಳನ್ನು 07.11.2025 ರಿಂದ 05.02.2026 ರವರೆಗೆ ಒಟ್ಟು 74 ಕರ್ತವ್ಯದ ದಿನಗಳಂದು ಪ್ರತಿ ದಿನ ಹೆಚ್ಚುವರಿ ಅವಧಿಯನ್ನು ನಿರ್ವಹಿಸಿ ಕಲಿಕಾ ಅವಧಿಗಳನ್ನು ಸರಿದೂಗಿಸಿಕೊಳ್ಳುವುದು.

ಇದಕ್ಕಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 7/8 ನೇ ತರಗತಿಗಳಿಗೆ ಈ ದಿನಗಳಲ್ಲಿ ಒಂದು ಹೆಚ್ಚುವರಿ ಅವಧಿಯನ್ನು ಶಾಲಾ ಪ್ರಾರಂಭದಲ್ಲಿ ಅಥವಾ ಶಾಲಾ ಅವಧಿ ನಂತರದಲ್ಲಿ ಆಯಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವುದು.

ಜನವರಿ 2026 ರಿಂದ ಮಾರ್ಚ್ 2026 (ಪರೀಕ್ಷೆವರೆಗೆ) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದು ಎಂದು ಸೂಚನೆ ನೀಡಲಾಗಿದೆ.

Weather forecast ರಾಜ್ಯದಲ್ಲಿ ಚಳಿ ವಾತಾವರಣ, ಎಲ್ಲೆಡೆ ಇಬ್ಬನಿ ಜೋರು, ಅಲ್ಲಲ್ಲಿ ಮಳೆ

Weather forecast ರಾಜ್ಯದಲ್ಲಿ ಚಳಿ ವಾತಾವರಣ, ಎಲ್ಲೆಡೆ ಇಬ್ಬನಿ ಜೋರು, ಅಲ್ಲಲ್ಲಿ ಮಳೆ

Surprising phenomenon ಆರು ಗಂಟೆಯ ಆಪರೇಷನ್ ಬಳಿಕ ಮೃತಪಟ್ಟ ವ್ಯಕ್ತಿ ಅಂತ್ಯಸಂಸ್ಕಾರ ವೇಳೆ ಕಣ್ಣುಬಿಟ್ಟ! ಅಚ್ಚರಿಯ ವಿದ್ಯಮಾನ

Lifestyle ಈಗ ಅರಳು‌ ಮರುಳು ಅರವತ್ತಕ್ಕಲ್ಲ, 40ಕ್ಕೇ ನೆನಪಿನ ಶಕ್ತಿ ಕ್ಷೀಣ! ಯುವಜನರಲ್ಲೇ ಹೆಚ್ಚುತ್ತಿದೆ ಮರೆವು!

TAGGED:Extension of Dussehra vacation: Special classes instructed to make up class shortage
Share This Article
Facebook Twitter Copy Link Print
Previous Article US VISA ಶುಗರ್, ಹಾರ್ಟ್ ಸಮಸ್ಯೆ, ಬೊಜ್ಜಿದ್ದರೆ ಅಮೆರಿಕ ವೀಸಾ ಸಿಗದು!
Next Article ನಿನ್ನ ತೂಕ ಎಷ್ಟು?, ಯೂಟ್ಯೂಬರ್‌ ಪ್ರಶ್ನೆಗೆ ರೊಚ್ಚಿಗೆದ್ದ ನಟಿ ಗೌರಿ ಕಿಶನ್‍!; ಗೌರಿ ಬೆಂಬಲಕ್ಕೆ ನಿಂತ ಚಿತ್ರೋದ್ಯಮ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?