Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಶಿವಮೊಗ್ಗ : ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆಶಿವಮೊಗ್ಗದ ಗೊಂದಿ ಚಟ್ನಹಳ್ಳಿ ಬಳಿ ನಡೆದಿದೆ.
ಮೃತರನ್ನು ಅಸಾದುಲ್ಲಾ (35) ಸಾದಿಕ್ (31) ಫೈರೋಜ್ (33) ಎಂದು ಗುರುತಿಸಲಾಗಿದೆ. ಚಾಲಕ ಇರ್ಫಾನ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಳೆಹೊನ್ನೂರಿನಲ್ಲಿ ಕೆಲಸ ಮುಗಿಸಿ ವಾಪಸ್ ಶಿವಮೊಗ್ಗಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ. ನಿದ್ದೆ ಮಂಪರಿನಲ್ಲಿ ಚಾಲಕ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://www.newsics.com/2025/10/30/mallamma-did-you-suddenly-leave-the-big-house-is-this-true/