Subscribe Newsics Kannada/YouTube
newsics.com
2000ರಲ್ಲಿ ‘ಮಿಸ್ ಚೆನ್ನೈ’ ಪ್ರಶಸ್ತಿ ಗೆದ್ದ ತ್ರಿಷಾ, ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಂತರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಸದ್ಯ ಈಗ ಬೇಡಿಕೆಯ ನಟಿ ಆಗಿದ್ದಾರೆ.
ಇನ್ನು ತ್ರಿಶಾ ಮದುವೆ ವಿಚಾರ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಈಗ ಅವರು ವಿವಾಹದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ತ್ರಿಶಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಚಂಡೀಗಢದ ಉದ್ಯಮಿಯನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಡಿತು. ಬಹುತೇಕ ಎಲ್ಲಾ ಸುದ್ದಿ ಸಂಸ್ಥೆಗಳು ಈ ಬಗ್ಗೆ ವರದಿ ಮಾಡಿದ್ದವು. ಸಾಮಾನ್ಯವಾಗಿ ತ್ರಿಷಾ ಈ ವಿಚಾರಗಳಿಗೆ ಸ್ಪಷ್ಟನೆ ನೀಡೋಕೆ ಹೋಗೋದಿಲ್ಲ. ಆದರೆ, ಅವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ತ್ರಿಷಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಅವರು ಖಡಕ್ ಆಗಿ ಉತ್ತರಿಸಿದ್ದಾರೆ. ‘ಕೆಲವರು ನನ್ನ ಜೀವನದ ಬಗ್ಗೆ ಪ್ಲ್ಯಾನ್ ಮಾಡಲು ಇಷ್ಟಪಡುತ್ತಾರೆ. ಅವರು ನನ್ನ ಹನಿಮೂನ್ ಅನ್ನು ಸಹ ಯೋಜಿಸುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ತ್ರಿಶಾ ತಮ್ಮ ಮದುವೆಯ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.
ತ್ರಿಷಾ ಸುಮಾರು 20 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಪ್ರಮುಖ ನಾಯಕಿಯಾಗಿದ್ದಾರೆ. ಅವರ ಅಭಿಮಾನಿಗಳು ಅವರನ್ನು ತುಂಬಾನೇ ಇಷ್ಟಪಡುತ್ತಾರೆ. ಅವರು ಪ್ರಸ್ತುತ ಸೂರ್ಯ ಜೊತೆ ‘ಕರುಪ್ಪು’ ಮತ್ತು ತೆಲುಗಿನಲ್ಲಿ ಚಿರಂಜೀವಿ ಜೊತೆ ‘ವಿಶ್ವಂಬರ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ನಿರ್ಮಾಪಕ ವರುಣ್ ಮಣಿಯನ್ ಜೊತೆ ತ್ರಿಷಾ 2014ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಕೆಲವು ಕಾರಣಗಳಿಂದ ಅವರ ಮದುವೆ ನಡೆಯಲಿಲ್ಲ. ಇದಕ್ಕೆ ಅವರು ಯಾವುದೇ ವಿವರಣೆಯನ್ನು ನೀಡಲಿಲ್ಲ. ಈ ಪರಿಸ್ಥಿತಿಯಲ್ಲಿ ಅವರ ಮದುವೆಯ ಬಗ್ಗೆ ಮತ್ತೆ ವದಂತಿಗಳು ಹರಡುತ್ತಿವೆ.
ನೀವು ಕೂತಲ್ಲಿಂದ ಎದ್ದಾಗ ಸಡನ್ ತಲೆ ತಿರುಗುತ್ತಾ?; ಹಾಗಾದ್ರೇ ಈ ರೀತಿ ಮಾಡಿ