Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಭಾರತದ ಪುರುಷರಿಗೆ ರೊಮ್ಯಾನ್ಸೇ ಗೊತ್ತಿಲ್ಲ, ಅದಕ್ಕೇ ಅವರ ಜತೆ ನಾನು ಡೇಟಿಂಗ್ ಮಾಡಲ್ಲ ಎಂದ ಚೇತನಾ ಚಕ್ರವರ್ತಿ! ವೈರಲ್ ವಿಡಿಯೊ ನೋಡಿ
ದೇಶಪ್ರಮುಖರಿಲೇಷನ್‌ಶಿಪ್ವೈರಲ್

ಭಾರತದ ಪುರುಷರಿಗೆ ರೊಮ್ಯಾನ್ಸೇ ಗೊತ್ತಿಲ್ಲ, ಅದಕ್ಕೇ ಅವರ ಜತೆ ನಾನು ಡೇಟಿಂಗ್ ಮಾಡಲ್ಲ ಎಂದ ಚೇತನಾ ಚಕ್ರವರ್ತಿ! ವೈರಲ್ ವಿಡಿಯೊ ನೋಡಿ

Share
3 Min Read
SHARE

newsics.com

ಭಾರತೀಯ ಯುವಕರಿಗೆ ಡೇಟಿಂಗ್, ರೊಮ್ಯಾನ್ಸ್, ಮನೆ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಏನೂ ತಿಳಿಯುವುದಿಲ್ಲ, ಹೀಗಾಗಿ ನಾನು ಭಾರತೀಯ ಪುರುಷರ ಜತೆ ಡೇಟಿಂಗ್ ಮಾಡುವುದಿಲ್ಲ ಎಂದು ಸಂಬಂಧ ಮತ್ತು ಜೀವನ ತರಬೇತುದಾರಳೆಂದು ಕರೆಸಿಕೊಂಡಿರುವ ಚೇತನಾ ಚಕ್ರವರ್ತಿ ಹೇಳಿದ್ದಾರೆ.

ಚೇತನಾ ಚಕ್ರವರ್ತಿಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಚೇತನಾ ಮಾತಿನಿಂದ ರೊಚ್ಚಿಗೆದ್ದಿರುವ ಯುವಕರು ಸೋಷಿಯಲ್ ಮೀಡಿಯಾದಲ್ಲಿ ಚೇತನಾ ವಿರುದ್ಧ ಬಗೆ ಬಗೆಯ ಕಮೆಂಟ್ ಹಾಕುತ್ತಿದ್ದಾರೆ.

ಈ ಯುವತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದ ಯುವಕರ ಜತೆ ತಾವೇಕೆ ಡೇಟಿಂಗ್ ಮಾಡುವುದಿಲ್ಲ ಎಂಬ ಶೀರ್ಷಿಕೆ ಕೊಟ್ಟು ಮಾತನಾಡಿದ್ದಾರೆ. ಅದರಲ್ಲಿ ಭಾರತದ ಯುವಕರ ವಿರುದ್ಧ ಕೆಲವೊಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಯುವತಿಯ ವಿರುದ್ಧ ಭಾರತದ ಹಲವರು ಓಪನ್ ಚಾಲೆಂಜ್ ಕೊಡುತ್ತಿದ್ದಾರೆ.

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಇಷ್ಟ ಮತ್ತು ಕಷ್ಟಗಳು ಇರುತ್ತವೆ. ಕೆಲವೊಂದನ್ನು ಅವರು ಇಷ್ಟಪಡುತ್ತಾರೆ, ಕೆಲವೊಂದನ್ನು ಇಷ್ಟಪಡದೇ ಇರಬಹುದು. ತಮ್ಮ ಇಷ್ಟಾನಿಷ್ಟಕ್ಕೆ ತಕ್ಕಂತೆ ಅವರಿಗೆ ಬೇಕಾದಂತೆ ಜೀವನಶೈಲಿ ರೂಪಿಸಿಕೊಳ್ಳುತ್ತಾರೆ. ಅದು ಸರಿಯಾದರೂ, ನಾವು ಸಮಾಜ, ವ್ಯಕ್ತಿಗಳು ಅಥವಾ ದೇಶವಾಸಿಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಾಗ, ಇಂಥ ವಿಷಯಗಳು ಕೂಡ ಖಂಡಿತವಾಗಿಯೂ ಚರ್ಚೆಗೆ ಕಾರಣವಾಗುತ್ತವೆ ಎನ್ನುವ ಮೂಲಕ ತಾನು ಭಾರತೀಯ ಹುಡುಗರೊಂದಿಗೆ ಏಕೆ ಡೇಟ್ ಮಾಡುವುದಿಲ್ಲ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ.

ಭಾರತದ ಯುವಕರ ಜತೆ ಡೇಟಿಂಗ್ ಮಾಡದೇ ಇರುವುದಕ್ಕೆ ಮೂರು ಪ್ರಮುಖ ಕಾರಣಗಳನ್ನು ಚೇತನಾ ಕೊಟ್ಟಿದ್ದಾರೆ.

ಭಾರತೀಯ ಪುರುಷರಿಗೆ ಹೇಗೆ ಮಾತನಾಡಬೇಕೆಂದೇ ತಿಳಿದಿಲ್ಲ. ಬಹುಶಃ ಅವರಿಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಸಲಾಗಿಲ್ಲ ಎಂದು ತೋರುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಯುವಕರಿಗೆ ಹೇಗೆ ಮಾತನಾಡಬೇಕು ಎನ್ನುವುದು ತಿಳಿಯದ ಪರಿಸ್ಥಿತಿ ತಲೆದೋರಿದೆಯಾ ಅಥವಾ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಅವರು ಅಸಮರ್ಥರಾದಾಗ ಅವರು ತಮ್ಮ ಎದುರು ಇರುವ ಮಹಿಳೆಯರ ಮೇಲೆ ಗೂಬೆ ಕೂರಿಸಲು ಶುರು ಮಾಡುತ್ತಾರೆ. ತಮ್ಮ ಮುಂದೆ ಇರುವ ಮಹಿಳೆಯನ್ನು ಅತಾರ್ಕಿಕ ಮತ್ತು ಆಕ್ರಮಣಕಾರಿ ಎಂದು ಕರೆಯಲು ಆರಂಭಿಸುತ್ತಾರೆ. ಜತೆಗೆ, ತಮಗೆ ಏನೂ ಹೇಳಲು ತೋಚದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದೂ ಚೇತನಾ ಚಕ್ರವರ್ತಿ ಆರೋಪಿಸಿದ್ದಾರೆ.

ಅಲ್ಲದೆ, ಭಾರತದ ಪುರುಷರಿಗೆ ರೊಮ್ಯಾನ್ಸ್, ಡೇಟಿಂಗ್ ಎಲ್ಲಾ ಏನು ಎನ್ನುವುದೇ ಗೊತ್ತಿಲ್ಲ ಎನ್ನುವುದು ಅವರ ಅಭಿಪ್ರಾಯ. ಭಾರತೀಯ ಪುರುಷರಿಗೆ ಪ್ರಣಯ ಅರ್ಥವಾಗುವುದಿಲ್ಲ ಎಂದು ಚೇತನಾ ಹೇಳಿದ್ದಾರೆ. ಭಾರತೀಯ ಪುರುಷರಿಗೆ ಪ್ರಣಯ ಎಂದರೆ ತಿಂಗಳಿಗೊಮ್ಮೆ ಊಟಕ್ಕೆಂದು ಹೊರಗೆ ಹೋಗುವುದು ಅಷ್ಟೇ. ಆದರೆ ರೊಮ್ಯಾನ್ಸ್ ಎನ್ನುವುದು ಪ್ರತಿದಿನವೂ ನಡೆಯುತ್ತದೆ. ಚಿಕ್ಕ ಪುಟ್ಟ ಸನ್ನೆಗಳಿಂದಲೂ ರೊಮ್ಯಾನ್ಸ್ ಮಾಡಬಹುದು ಎನ್ನುವುದು ಅವರಿಗೆ ಗೊತ್ತೇ ಇಲ್ಲ. ಇದು ಭಾರತೀಯ ಹುಡುಗರಿಗೆ ಅರ್ಥವಾಗುವುದಿಲ್ಲ ಎಂದಿದ್ದಾರೆ!

ರೊಮ್ಯಾನ್ಸ್ ಎಂದರೆ ಮಹಿಳೆಯನ್ನು ಪ್ರತಿ ಕ್ಷಣವೂ ಕೇರ್ ಮಾಡುವುದು ಎಂದು ಭಾರತೀಯರಿಗೆ ತಿಳಿದಿಲ್ಲ. ಭಾರೀ ಉಡುಗೊರೆಗಳನ್ನು ತಂದುಕೊಟ್ಟು ತಾವು ಶ್ರೀಮಂತ ಎಂದು ತೋರಿಸಿಕೊಳ್ಳುವುದು ರೊಮ್ಯಾನ್ಸ್ ಅಲ್ಲ ಎಂದಿದ್ದಾರೆ.

ಇಷ್ಟೇ ಅಲ್ಲ, ಭಾರತದ ಪುರುಷರಿಗೆ ಮನೆಯನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದೂ ತಿಳಿದಿಲ್ಲ. ಮನೆಯ ನಿರ್ವಹಣೆ ಮಾಡುವುದು ಎಂದರೆ ಅರ್ಧಂಬರ್ಧ ಏನೇನೋ ಮಾಡಿದಂತಲ್ಲ. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಆದರೆ ಇದು ಭಾರತದ ಪುರುಷರಿಗೆ ತಿಳಿದಿಲ್ಲ. ನೀವೂ ಆ ಮನೆಯಲ್ಲಿಯೇ ಇದ್ದೀರಿ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಏನೋ ಕೆಲಸ ಮಾಡಿ ನಿಮ್ಮ ಪಾರ್ಟ್‌ನರ್‌ಗೆ ಫೇವರ್ ಮಾಡುತ್ತಿದ್ದೇನೆ ಎಂದುಕೊಳ್ಳುವುದು ಮನೆಯ ಜವಾಬ್ದಾರಿ ಹೊತ್ತುಕೊಂಡಂತೆ ಅಲ್ಲ ಎಂದಿದ್ದಾರೆ.
ಚೇತನಾ ಚಕ್ರವರ್ತಿ ಅಭಿಪ್ರಾಯಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರು ನೀವು ಹೇಳಿದ ರೀತಿಯಲ್ಲಿ ಇರಬಹುದು. ಆದರೆ ಒಂದಷ್ಟು ಜನರನ್ನು ನೋಡಿ ಇಡೀ ಭಾರತದ ಯುವಕರು, ಪುರುಷರು ಸರಿಯಿಲ್ಲ ಎಂದು ಸಾರಾಸಗಟಾಗಿ ಭಾರತದ ಹೆಸರನ್ನು ಹಾಳು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ರೊಮ್ಯಾನ್ಸ್ ವಿಷಯದಲ್ಲಿ ಯುವಕರು ಈ ಯುವತಿಗೆ ಚಾಲೆಂಜನ್ನೂ ಹಾಕಿದ್ದಾರೆ.

https://www.instagram.com/reel/C9UusSCyE_Y/?utm_source=ig_web_button_share_sheet

ಬಿಕಿನಿಯಲ್ಲಿ ಸಖತ್ ಮಿಂಚಿದ ನಟಿ ಲಕ್ಷ್ಮೀ ರೈ!

ನಿಮ್ಮ ಮಗು ಮೊಬೈಲ್ ಫೋನ್ ಗೆ ಅಡಿಕ್ಟ್ ಆಗಿದ್ಯಾ!?, ಹಾಗಿದ್ರೆ ಹುಷಾರಾಗಿ!

ಗರ್ಭಿಣಿಯರು ಲೈಂಗಿಕ ಸಂಪರ್ಕ ಹೊಂದಬಹುದಾ? ಯಾವ ಸಮಯ ಸೂಕ್ತ?

TAGGED:Indian men don't know romancesays Chetana Chakraborty!that's why I don't date them
Share This Article
Facebook Twitter Copy Link Print
Previous Article ಎರಡನೇ ರೌಂಡ್’; ಫ್ಯಾನ್ಸ್ ಗೆ ಮತ್ತೆ ಸಿಹಿಸುದ್ದಿ ಕೊಟ್ಟ ಪ್ರಣಿತಾ
Next Article ವಿನಾಶದತ್ತ ಪ್ರಪಂಚ..?; ಭೂಮಿಯತ್ತ ಸಾಗಿದ ಕ್ಷುದ್ರಗ್ರಹ!

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

0 Min Read
ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

3 Min Read
ಪ್ರಮುಖಮನರಂಜನೆ

ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀ‌ರ್ ಖಾನ್ ಮದುವೆ!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?