Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಗರ್ಭಿಣಿಯರು ಲೈಂಗಿಕ ಸಂಪರ್ಕ ಹೊಂದಬಹುದಾ? ಯಾವ ಸಮಯ ಸೂಕ್ತ?
ಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

ಗರ್ಭಿಣಿಯರು ಲೈಂಗಿಕ ಸಂಪರ್ಕ ಹೊಂದಬಹುದಾ? ಯಾವ ಸಮಯ ಸೂಕ್ತ?

Share
2 Min Read
SHARE

newsics.com
ಗರ್ಭಾವಸ್ಥೆ ಎನ್ನುವುದು ಪ್ರತಿ‌ ಹೆಣ್ಣಿಗೂ ಸುಮಧುರ ಭಾವದ ಸಮಯ. ಅಷ್ಟೇ ಅಲ್ಲ, ಬದುಕಿನ ಮುಖ್ಯ ಘಟ್ಟಗಳಲ್ಲಿ ಒಂದು. ತಾಯಿಯಾಗಬೇಕೆಂಬುದು ಪ್ರತಿ ಹೆಣ್ಣಿನ ಅದಮ್ಯ ಬಯಕೆ.

ಗರ್ಭಾವಸ್ಥೆಯ ಸಮಯದಲ್ಲಿ ಎಷ್ಟು ಆರೈಕೆ ಮಾಡಿದರೂ ಸಾಲುವುದಿಲ್ಲ. ಗರ್ಭ ಧರಿಸಿದ ಮೊದಲ ಮೂರು ತಿಂಗಳು ಆಕೆಯ ದೇಹ ಭ್ರೂಣದ ಬೆಳವಣಿಗೆಯ ಜತೆ ಹೊಂದಿಕೊಳ್ಳಬೇಕಾಗುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಹಲವು ಬದಲಾವಣೆಗಳಾಗುತ್ತವೆ. ಅದ್ದರಿಂದ ಗರ್ಭಿಣಿಯ ಕಾಳಜಿ ಬಹಳ ಮುಖ್ಯವಾಗುತ್ತದೆ. ಗರ್ಭಾವಸ್ಥೆಯ ಅವಧಿಯಲ್ಲಿ ಲೈಂಗಿಕತೆ ನಡೆಸಬಹುದಾ? ಅಥವಾ ಇಲ್ಲವಾ ಎನ್ನುವ ಗೊಂದಲ ಹಲವರದು.

ಸೂಕ್ತ ಭಂಗಿ ಅವಶ್ಯ:

ವೈದ್ಯರ ಪ್ರಕಾರ, ಗರ್ಭ ಧರಿಸಿದ ಮೇಲೆಯೂ ಲೈಂಗಿಕತೆ ನಡೆಸಬಹುದು. 9 ತಿಂಗಳಲ್ಲಿ ಯಾವಾಗ ಬೇಕಾದರೂ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆದರೆ ವೈದ್ಯರ ಸಲಹೆ ಮತ್ತು ಸೂಕ್ತ ಭಂಗಿಗಳಲ್ಲಿ ನಡೆಸಿದರೆ ತಾಯಿ ಮತ್ತು ಮಗು ಯಾರಿಗೂ ಹಾನಿಯಾಗುವುದಿಲ್ಲ.

ಆದರೆ, ಗರ್ಭಪಾತ ಅಥವಾ ಗರ್ಭದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಈ ವೇಳೆ ಮಿಲನಕ್ರಿಯೆ ನಡೆಸುವುದು ಒಳ್ಳೆಯದಲ್ಲ.

ಮೊದಲ 4 ತಿಂಗಳು ಜಾಗ್ರತೆಯಿರಲಿ:

ಮುಂಜಾಗ್ರತೆಯ ದೃಷ್ಟಿಯಿಂದ ಗರ್ಭಿಣಿ ತನ್ನ ಮೊದಲ 16 ವಾರ (4 ತಿಂಗಳು) ಶಾರೀರಿಕ ಸಂಬಂಧ ಇಟ್ಟುಕೊಳ್ಳದಿರುವುದೇ ಒಳ್ಳೆಯದು. ಸಹಜ ಮಿಲನ ಕ್ರಿಯೆಗಾಗಿ 16 ವಾರದ ಬಳಿಕ ಗರ್ಭಿಣಿ ಆರೋಗ್ಯ ಗಮನಿಸಿ ವೈದ್ಯರ ಸಲಹೆ ಪಡೆದು ಮಿಲನ ಕ್ರಿಯೆ ನಡೆಸಬಹುದು. ಗರ್ಭದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಗರ್ಭಿಣಿ ಹಾಗೂ ಮಗು ಸುರಕ್ಷಿತವಾಗಿರಲು ಲೈಂಗಿಕ ಕ್ರಿಯೆ ಮಾಡದಿರುವುದೇ ಸೂಕ್ತ.

ಗರ್ಭಿಣಿ ಗರ್ಭಕಂಠದ ಸಮಸ್ಯೆ ಹೊಂದಿದ್ದರೆ ಅಥವಾ ಈ ಹಿಂದೆ ಮಗುವಿನ ಅಕಾಲಿಕ ಜನನದಂತಹ ಸಂದರ್ಭ ಇಂತಹ ಸಮಸ್ಯೆ ಎದುರಿಸಿದ್ದರೆ ಮತ್ತೆ ಗರ್ಭ ಧರಿಸಿದ ವೇಳೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಡಿ ಎನ್ನುತ್ತಾರೆ ವೈದ್ಯರು.

ಗರ್ಭಿಣಿಯ ಜನನಾಂಗದಲ್ಲಿ ನೀರಿನ ಡಿಸ್ಚಾರ್ಜ್‌ ಹೆಚ್ಚಿರುವ ಸಂದರ್ಭದಲ್ಲಿ ಅಥವಾ ಜರಾಯುವಿನಲ್ಲಿ ಸಮಸ್ಯೆ ಇದ್ದಾಗ ಗರ್ಭ ಧರಿಸಿದಾಗ ಲೈಂಗಿಕ ಕ್ರಿಯೆ ಒಳ್ಳೆಯದಲ್ಲ.

ಯಾವ ತಿಂಗಳಿನಲ್ಲಾದರೂ ಲೈಂಗಿಕ ಕ್ರಿಯೆ ನಡೆಸಬಹುದು. ಆದರೆ ಭಂಗಿಗಳ ಅರಿವಿರಬೇಕು. ಏಕೆಂದರೆ ಮಗುವಿಗೆ ಮತ್ತು ತಾಯಿಗೆ ಕಷ್ಟವಾಗದ ರೀತಿಯಲ್ಲಿ ಮಿಲನ ಕ್ರಿಯೆ ನಡೆಸುವುದು ಮುಖ್ಯವಾಗಿರುತ್ತದೆ. ಇದಕ್ಕೆ ವೈದ್ಯರ ಸಲಹೆ ಅವಶ್ಯವಾಗಿರುತ್ತದೆ.

ಮಿಲನ ಕ್ರಿಯೆಯಿಂದ ಲಾಭ:

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ರೋಗನಿರೋಧಕ ಶಕ್ತಿ ಬಲಪಡಿಸುವಲ್ಲಿ ಲೈಂಗಿಕತೆಯು ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಾವಸ್ಥೆಯಲ್ಲಿ ಲೈಂಗಿಕತೆಯು ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಮಗುವಿಗೆ ಮತ್ತು ತಾಯಿಗೆ ಆರೋಗ್ಯಕರ ವಾತಾವರಣವನ್ನು ಒದಗಿಸುತ್ತದೆ. ಆದರೆ ಮಿಲನಕ್ಕೂ ಮೊದಲು ವೈದ್ಯರ ಸಲಹೆ ಅತ್ಯವಶ್ಯ.

TAGGED:Can pregnant women participate in Milanamahotsava? What time is appropriate?
Share This Article
Facebook Twitter Copy Link Print
Previous Article ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡ ಹೃದಯಾಘಾತದಿಂದ ಸಾವು
Next Article ಶುಭೋದಯ… ಕ್ರೋಧಿ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ತೃತೀಯ/ ಚತುರ್ಥಿ, ಬುಧವಾರ, 24-07-2024 ಸಂಕಷ್ಟಹರ ಚತುರ್ಥಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?