Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Mysuru Dasara ಚಿನ್ನದಂಬಾರಿಯಲ್ಲಿ ಚಾಮುಂಡೇಶ್ವರಿ ವೈಭವ, ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆಗೆ ಮನಸೋತ ಜನ
ಕರ್ನಾಟಕದೇಶಪ್ರಮುಖ

Mysuru Dasara ಚಿನ್ನದಂಬಾರಿಯಲ್ಲಿ ಚಾಮುಂಡೇಶ್ವರಿ ವೈಭವ, ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆಗೆ ಮನಸೋತ ಜನ

Share
1 Min Read
SHARE

newsics.com

ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು 750 ಕೆಜಿ ತೂಕದ ಚಿನ್ನದಂಬಾರಿಯಲ್ಲಿ ಹೊತ್ತು ಕಿಣಿಕಿಣಿ ಗೆಜ್ಜೆಯ ಸದ್ದಿನೊಂದಿಗೆ ಗಜಗಾಂಭೀರ್ಯದಿಂದ ಅಭಿಮನ್ಯು ಹೆಜ್ಜೆ ಹಾಕಿದಾಗ ಅಲ್ಲಿ ಸೇರಿದ್ದ ಅಪಾರ ಜನಸ್ತೋಮ ಹರ್ಷೋದ್ಗಾರಗೈದಿತು.

ಮೈಸೂರು ದಸರಾದ ಪ್ರಮುಖ ಆಕರ್ಷಣೆಯೆನಿಸಿರುವ ವಿಶ್ವವಿಖ್ಯಾತ ಜಂಬೂಸವಾರಿ ಹಲವರ ಮನಸೂರೆಗೊಂಡಿತು. ದೇವಿಗೆ ನಮಿಸಿ ಪುನೀತ ಭಾವ ಹೊಂದಿದರು. ಜೈಕಾರ ಹಾಕಿ ಜನರು ಸಂಭ್ರಮಿಸಿದರು.

ಜಗತ್ ಪ್ರಸಿದ್ಧ ಮೈಸೂರು ದಸರಾದ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಸಂಜೆ 4.42ರಿಂದ 5.06 ವರೆಗಿನ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ, ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡೇಶ್ವರಿ ತಾಯಿಗೆ ಸಿಎಂ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಆರಂಭಗೊಂಡಿತು.

ಜಂಬೂ ಸವಾರಿಗೆ ಚಾಲನೆ ನೀಡುವ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಂಸದ ಯದುವೀರ್ ಒಡೆಯರ್, ಬಸವರಾಜ ಹೊರಟ್ಟಿ ಮೊದಲಾದವರಿದ್ದರು.
6ನೇ ಬಾರಿಗೆ ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನು ಹೊತ್ತಿದ್ದು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆಯಿತು. ಅಭಿಮನ್ಯುಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಸಾಥ್ ನೀಡಿವೆ.

ಜಂಬೂ ಸವಾರಿ ವೀಕ್ಷಣೆಗಾಗಿ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಸುಮಾರು 45 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಗುರುವಾರ ಸಂಜೆ ನಡೆಯುವ ಪಂಜಿನ ಕವಾಯತಿನ ಮೂಲಕ ಮೈಸೂರು ದಸರಾದ ಆಕರ್ಷಣೆ ಜಂಬೂ ಸವಾರಿಗೆ ಅಧಿಕೃತ ತೆರೆ ಬೀಳಲಿದೆ.

ಕಾಳಸಂತೆಯಲ್ಲಿ ದಸರಾ ಪಾಸ್ ಮಾರಾಟ; ಎಲ್ಲೆಡೆ ಜನರ ಪರದಾಟ, ನೂಕುನುಗ್ಗಲು, ಯುವತಿ ಅಸ್ವಸ್ಥ, ಓರ್ವ ಪೊಲೀಸ್ ವಶಕ್ಕೆ

TAGGED:People are mesmerized by the splendor of Chamundeshwari in Shinambarithe majestic steps of Abhimanyu
Share This Article
Facebook Twitter Copy Link Print
Previous Article ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಸಿಎಂ ಚಾಲನೆ;ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹೊತ್ತು ಸಾಗಿದ ಅಭಿಮನ್ಯು
Next Article Pakistan unrest ಪಾಕ್ ಪ್ರಧಾನಿ ನೀಡಿದ್ದ ಚೆಕ್ ಬೌನ್ಸ್: ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್ ಸ್ಫೋಟಕ ಹೇಳಿಕೆ, ವೀಡಿಯೊ ನೋಡಿ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?