newsics.com
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಮೊಬೈಲ್ ಫೋನ್ಗಳನ್ನು ಬಳಸುವವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಗಲು ರಾತ್ರಿ ಎನ್ನದೇ ಹೆಚ್ಚಿನ ಸಮಯವನ್ನು ಮೊಬೈಲ್ನಲ್ಲೇ ಕಳೆಯುತ್ತಿದ್ದಾರೆ. ಇದು ಮಕ್ಕಳ ಬೆಳವಣಿಗೆ ಮೇಲೆ ತೀವ್ರವಾದ ಪರಿಣಾಮ ಬೀರುವುದರ ಜತೆಗೆ ಕಣ್ಣುಗಳಿಗೂ ಹಾನಿಯನ್ನುಂಟು ಮಾಡುತ್ತದೆ.
ಮಕ್ಕಳ ಮೇಲೆ ಸ್ಮಾರ್ಟ್ ಫೋನ್ ಬಳಕೆಯಿಂದ ಉಂಟಾಗುವ ಅಪಾಯಕಾರಿ ಪರಿಣಾಮಗಳು ..
ಒಂದು ಅಧ್ಯಯನದ ಪ್ರಕಾರ, 8 ರಿಂದ 12 ವರ್ಷ ವಯಸ್ಸಿನ ಮಕ್ಕಳು ಪ್ರತಿದಿನ ಸುಮಾರು 6 ಗಂಟೆಯವರೆಗೆ ಮೊಬೈಲ್ ಪರದೆಯ ಮುಂದಿರುತ್ತಾರೆ. ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಅನೇಕ ಅಪಾಯಕಾರಿ ಅಡ್ಡಪರಿಣಾಮ ಉಂಟು ಮಾಡುತ್ತದೆ.
ವರ್ತನೆಯ ಸಮಸ್ಯೆಗಳು
– ವ್ಯಸನ
– ಖಿನ್ನತೆ
– ನಿದ್ರಿಸಲು ತೊಂದರೆ
– ಸ್ಥೂಲಕಾಯತೆ
– ಸಾಮಾಜಿಕ ಬೆಳವಣಿಗೆಯಲ್ಲಿ ವಿಳಂಬ
ಏಕಾಗ್ರತೆ ಮತ್ತು ಶ್ರವಣದಲ್ಲಿ ತೊಂದರೆ
– ನರಮಂಡಲದ ತೊಂದರೆಗಳು
ಮಕ್ಕಳಲ್ಲಿ ಶಕ್ತಿ ಇರುತ್ತದೆ. ಅದನ್ನು ಸರಿಯಾಗಿ ಬಳಸುವುದು ಅವಶ್ಯಕ. ನಿಮ್ಮ ಮಗು ಖಾಲಿ ಕುಳಿತುಕೊಳ್ಳುವ ಬದಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಿ. ನಿಮ್ಮ ಮಗು ತನ್ನ ಮನೆಕೆಲಸ, ಅಧ್ಯಯನ ಮತ್ತು ಇತರ ಎಲ್ಲಾ ಪ್ರಮುಖ ಕೆಲಸಗಳನ್ನು ಸ್ಮಾರ್ಟ್‌ಫೋನ್ ಹಿಡಿದು ಕೂರುವ ಮೊದಲೇ ಪೂರ್ಣಗೊಳಿಸಿದೆಯೇ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ.