Subscribe NewsicsKannada/YouTube
newsics.com
ತಲೆಯಲ್ಲಿ ಹೊಟ್ಟು ಅಥವಾ ಧೂಳು ಹೆಚ್ಚಿದಂತೆ ನಿಮ್ಮ ಬಾಚಣಿಗೆ ಕೊಳಕಾಗುವುದು ಹೆಚ್ಚುತ್ತದೆ. ಹಾಗಾಗಿ ಕನಿಷ್ಠ ವಾರಕ್ಕೊಮ್ಮೆಯಾದರೂ ನಿಮ್ಮ ಬಾಚಣಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಬಾಚಣಿಗೆಯಲ್ಲಿರುವ ಕೊಳೆ ಮತ್ತೆ ನಿಮ್ಮ ತಲೆಗೇ ಅಂಟಿಕೊಂಡು ಕೂದಲು ಉದುರುವಿಕೆ, ತುರಿಕೆ ಮೊದಲಾದ ಸಮಸ್ಯೆಗಳನ್ನು ತಂದೊಡ್ಡಬಹುದು.
ಹಾಗಾಗಿ ಬಾಚಣಿಗೆಯನ್ನು ಅರ್ಧ ಗಂಟೆ ಹೊತ್ತು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬಳಿಕ ಸೋಪು ನೀರಿನಲ್ಲಿ ಅದ್ದಿ ತೊಳೆದರೆ ಅದರ ಕೊಳೆ ದೂರವಾಗುತ್ತದೆ.
ಬಳಸಿ ಎಸೆಯುವ ಟೂತ್ ಬ್ರಶ್ ನಿಂದಲೂ ಬಾಚಣಿಗೆಯನ್ನು ಸ್ವಚ್ಛ ಮಾಡಬಹುದು. ಬ್ರಶ್ ಗೆ ಒಂದು ಡ್ರಾಪ್ ಹ್ಯಾಂಡ್ ವಾಶ್ ಹಾಕಿ ಅದನ್ನು ಬಾಚಣಿಗೆಯ ಎಳೆಗಳ ಮಧ್ಯೆ ಉಜ್ಜಿ. ಇದರಿಂದ ಆ ಭಾಗದಲ್ಲಿ ಅಂಟಿರುವ ಸಣ್ಣ ಕೂದಲು ಹಾಗೂ ಧೂಳು ದೂರವಾಗುತ್ತದೆ.
ಕೊಳೆ ತುಂಬಿರುವ ಬಾಚಣಿಗೆ ಸ್ವಚ್ಛಗೊಳಿಸಲು ಬೇಕಿಂಗ್ ಸೋಡಾಗೆ ಎರಡು ಚಮಚ ಶ್ಯಾಂಪೂ ಬೆರೆಸಿ. ಅರ್ಧ ಗಂಟೆ ಹೊತ್ತು ಅದರಲ್ಲಿ ನೆನೆಸಿಡಿ. ಬಳಿಕ ಹಳೆಯ ಟೂತ್ ಬ್ರಶ್ ನಿಂದ ತಿಕ್ಕಿ ತೊಳೆದರೆ ಬಾಚಣಿಗೆ ಹೊಸದರಂತಾಗುತ್ತದೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ