Subscribe ನ್ಯೂಸಿಕ್ಸ್ ಕನ್ನಡ
NewsicsKannada
newsics.com
ಮೊಸರು ಆರೋಗ್ಯಕ್ಕೆ ತುಂಬಾನೆ ಉತ್ತಮವಾದ ಆಹಾರ. ನಮ್ಮಲ್ಲಿ ಹಲವರು ಊಟದ ಜೊತೆ ಮೊಸರು ತಿನ್ನಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಈ ಮೊಸರು ತುಂಬಾ ಹುಳಿಯಾಗಿರುತ್ತದೆ, ಅದನ್ನು ತಿನ್ನಲು ಸಹ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಎಸೆಯುವುದನ್ನು ಬಿಟ್ಟು ಬೇರೆ ದಾರಿಯಿರೋದಿಲ್ಲ
ಆದರೆ ಹುಳಿಯಾದ ಮೊಸರನ್ನು ಬಿಸಾಕುವ ಬದಲು, ಅದರಲ್ಲಿನ ಹುಳಿಯನ್ನು ನಿವಾರಿಸಬಹುದು. ಇಂದು ನಾವು ನಿಮಗೆ ಒಂದು ಉಪಾಯವನ್ನು ಹೇಳುತ್ತೇವೆ, ಅದರ ಸಹಾಯದಿಂದ ನೀವು ಅದರ ಹುಳಿಯನ್ನು ತೆಗೆದುಹಾಕಬಹುದು.
ಮೊದಲನೆಯದಾಗಿ, ಮೊಸರನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇರಿಸಿ. ಮೊಸರು ತಂಪಾದ ಸ್ಥಳದಲ್ಲಿ ಇದ್ದರೆ ಅದು ಬೇಗನೆ ಹುಳಿಯಾಗೋದಿಲ್ಲ. ನೀವು ಅದನ್ನು ಹೊರಗೆ ಇಟ್ಟರೆ ಅದು ಬೇಗನೆ ಹುಳಿಯಾಗುತ್ತೆ. ಹಾಗಾಗಿ ಸಾಧ್ಯವಾದಷ್ಟು ಅದನ್ನು ಫ್ರಿಜ್ ನಲ್ಲಿಡಿ.
ಇನ್ನು ನೀವು ಇಟ್ಟಂತಹ ಮೊಸರು ಹುಳಿಯಾಗಿದ್ದರೆ, ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ, ಇದು ಹುಳಿಯನ್ನು ತೆಗೆದುಹಾಕಬಹುದು. ತಿನ್ನಲು ಕೂಡ ಇದು ತುಂಬಾನೆ ರುಚಿಯಾಗಿರುತ್ತದೆ.
ಇದಲ್ಲದೇ ಮೊಸರಿನೊಂದಿಗೆ ಬೇವು ಮತ್ತು ತುಳಸಿ ಎಲೆಗಳನ್ನು ಸೇರಿಸುವುದರಿಂದ ಬ್ಯಾಕ್ಟೀರಿಯಾವನ್ನು ನಿಯಂತ್ರಿಸುತ್ತದೆ, ಹೀಗಾಗಿ ಹುಳಿ ಕಡಿಮೆಯಾಗುತ್ತದೆ. ನೀವು ಅವುಗಳನ್ನು ಪೇಸ್ಟ್ ಮಾಡಿ ಸಹ ನೀವು ಮೊಸರಿನಲ್ಲಿ ಬೆರೆಸಬಹುದು. ಆದರೆ ಹೆಚ್ಚು ಬೇವು ಬಳಕೆ ಮಾಡಬೇಡಿ.
ಮತ್ತೊಂದು ಸಿಂಪಲ್ ವಿಧಾನ ಎಂದರೆ ಮೊಸರಿಗೆ ಸ್ವಲ್ಪ ಉಪ್ಪು ಸೇರಿಸುವುದರಿಂದ ಅದರ ಹುಳಿ ಕಡಿಮೆಯಾಗುತ್ತದೆ. ಅಥವಾ ಮೊಸರಿಗೆ ಬಹಳ ಕಡಿಮೆ ಪ್ರಮಾಣದಲ್ಲಿ ಅಡುಗೆ ಸೋಡಾ ಸೇರಿಸುವುದರಿಂದ ಮೊಸರು ಹಾಳಾಗುವುದಿಲ್ಲ.
ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ