Subscribe NewsicsKannada/YouTube
newsics.com
ಗುಲಾಬಿ ನಂತರ ಅತ್ಯಂತ ಜನಪ್ರಿಯ ಹೂವೆಂದರೆ ಅದು ಮಲ್ಲಿಗೆ. ಮೃದುತ್ವ, ಅಂದ, ಬಿಳಿ ಬಣ್ಣ ಹಾಗೂ ಅದ್ಭುತ ಪರಿಮಳದಿಂದ ಮಲ್ಲಿಗೆ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತದೆ.
ವಿಶೇಷವಾಗಿ ಮಹಿಳೆಯರಿಗೆ ಇದು ಅಚ್ಚುಮೆಚ್ಚು. ಕೇವಲ ಅಲಂಕಾರಕ್ಕೆ ಮಾತ್ರವಲ್ಲ, ಮಲ್ಲಿಗೆಯ ಸುವಾಸನೆಯು ಆರೋಗ್ಯಕ್ಕೂ, ಮನಃಶಾಂತಿಗೂ ಮತ್ತು ದಾಂಪತ್ಯ ಜೀವನಕ್ಕೂ ಇದು ಅತ್ಯುತ್ತಮ.
ಇದೇ ಕಾರಣದಿಂದಲೇ ಮದುವೆಯ ಮೊದಲ ರಾತ್ರಿ ಮಲ್ಲಿಗೆ ಹೂವಿನ ಅಲಂಕಾರಕ್ಕೆ ವಿಶೇಷ ಮಹತ್ವವಿದೆ.

ಮೊದಲ ರಾತ್ರಿಯಂದು ಮಲ್ಲಿಗೆಯನ್ನು ಹಾಸಿಗೆ ಕೋಣೆಯಲ್ಲಿ ಬಳಸಲು ಹಲವು ವಿಶೇಷ ಕಾರಣಗಳಿವೆ. ಮಲ್ಲಿಗೆ ಹೂವು ಪ್ರೀತಿ, ಪರಿಮಳ ಮತ್ತು ಸೌಂದರ್ಯದ ಸಂಕೇತವಾಗಿ ಗುರುತಿಸಲ್ಪಟ್ಟಿದೆ. ಈ ಹೂವು ಕೇವಲ ಸುವಾಸನೆಗಾಗಿ ಅಷ್ಟೇ ಅಲ್ಲ, ಆರೋಗ್ಯಕ್ಕೆ ನೀಡುವ ಪ್ರಯೋಜನಗಳಿಗಾಗಿಯೂ ಪ್ರಸಿದ್ಧವಾಗಿದೆ.
ಮಲ್ಲಿಗೆ ಹೂವುಗಳು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.
ಹೆಣ್ಮಕ್ಕಳಿಗೆ ಇಷ್ಟ
ಮಲ್ಲಿಗೆ ಹೂವೆಂದರೆ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ಅಚ್ಚುಮೆಚ್ಚು. ಗುಲಾಬಿ ಹೂವಿನ ನಂತರ, ಮಲ್ಲಿಗೆ ಎಲ್ಲರ ಆಯ್ಕೆಯಾಗಿದೆ ಎಂದರೆ ತಪ್ಪಾಗಲಾರದು. ಮಲ್ಲಿಗೆ ಹೂವಿನ ಸೌಂದರ್ಯ ಮತ್ತು ಸುವಾಸನೆ ಮಹಿಳೆಯರ ಅಲಂಕಾರಕ್ಕೆ ವಿಶೇಷ ಮೆರುಗು ನೀಡುತ್ತದೆ. ವಿವಾಹ, ಹಬ್ಬಗಳು, ಉತ್ಸವಗಳು ಅಥವಾ ದೈನಂದಿನ ಜೀವನದಲ್ಲಿ ಮಹಿಳೆಯರು ತಮ್ಮ ತಲೆಗೆ ಮಲ್ಲಿಗೆ ಹೂವನ್ನು ಮುಡಿಯುವುದು ಸಾಮಾನ್ಯವಾಗಿದೆ. ಇದು ಕೇವಲ ಅಲಂಕಾರಿಕ ವಸ್ತುವಾಗಿ ಮಾತ್ರವಲ್ಲದೆ, ದೇಹ ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ನೈಸರ್ಗಿಕ ವಿಧಾನವಾಗಿಯೂ ಕಾರ್ಯನಿರ್ವಹಿಸುತ್ತದೆ.
ಮಲ್ಲಿಗೆ ಹೂವು ಶೃಂಗಾರಕ್ಕೆ ಹೆಸರುವಾಸಿ. ಮಲ್ಲಿಗೆ ಹೂವು ಮಹಿಳೆಯರ ಸೌಂದರ್ಯವರ್ಧನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದರ ಆಹ್ಲಾದಕರ ಪರಿಮಳವು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ, ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮಲ್ಲಿಗೆ ಹೂವನ್ನು ತಲೆಗೆ ಮುಡಿಯುವುದರಿಂದ ದೇಹ ತಂಪಾಗಿ, ನೆತ್ತಿಯ ಉಷ್ಣತೆ ಕಡಿಮೆಯಾಗುತ್ತದೆ. ಇದು ಉತ್ತಮ ನಿದ್ರೆಗೆ ಸಹಕಾರಿಯಾಗಿದ್ದು, ಸೌಂದರ್ಯದ ಜತೆ ಆರೋಗ್ಯವನ್ನೂ ವೃದ್ಧಿಸುತ್ತದೆ.
ದೇಹಕ್ಕೆ ರಿಲ್ಯಾಕ್ಸ್
ಮಲ್ಲಿಗೆ ಹೂವಿನ ಸುವಾಸನೆಯು ಮನಸ್ಸನ್ನು ಶಾಂತವಾಗಿಡಲು ಸಹಕಾರಿಯಾಗಿದೆ. ಇದು ಆಯಾಸಗೊಂಡ ದೇಹಕ್ಕೆ ರಿಲ್ಯಾಕ್ಸ್ ನೀಡಿ, ಉಲ್ಲಾಸ ನೀಡುತ್ತದೆ. ದಂಪತಿಯ ಮನಸ್ಸನ್ನೂ ಪ್ರಫುಲ್ಲಗೊಳಿಸುತ್ತದೆ.
ಫಸ್ಟ್ ನೈಟ್
ಮದುವೆಯ ಮೊದಲ ರಾತ್ರಿಯಂದು ನವದಂಪತಿಗಳ ಕೋಣೆಯನ್ನು ಮಲ್ಲಿಗೆ ಹೂಗಳಿಂದ ಅಲಂಕರಿಸುವ ಪದ್ಧತಿಯು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಇದು ಗಂಡ- ಹೆಂಡತಿಯ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಸಹಕಾರಿ. ಈ ಹೂಗಳನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಕೇವಲ ಸೌಂದರ್ಯ ಹೆಚ್ಚಾಗದೆ ಹಲವು ಮಾನಸಿಕ ಹಾಗೂ ದೈಹಿಕ ಪ್ರಯೋಜನಗಳು ಲಭಿಸುತ್ತವೆ.
ಮಲ್ಲಿಗೆಯ ಸುಗಂಧವು ದೇಹದ ಆಯಾಸವನ್ನು ದೂರ ಮಾಡಿ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ವಿಶೇಷವಾಗಿ ನವದಂಪತಿಗಳಿಗೆ ಇದು ಅತ್ಯುತ್ತಮ ವಾತಾವರಣ ಸೃಷ್ಟಿಸಿ, ಅವರ ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಸಂತೋಷದ ಭಾವನೆ ವೃದ್ಧಿ
ಮಲ್ಲಿಗೆಯ ಸುವಾಸನೆಯನ್ನು ಪದೇ ಪದೇ ಸೇವಿಸುವುದರಿಂದ ಸಂತೋಷದ ಭಾವನೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ಹೂವು ಪತಿ- ಪತ್ನಿಗೆ ಪ್ರಯೋಜನಕಾರಿಯಾಗಿದೆ. ಮೆದುಳಿನಲ್ಲಿ ಸಿರೊಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಮಲ್ಲಿಗೆಯ ಪರಿಮಳ ಉತ್ತೇಜಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ಬಹಿರಂಗಪಡಿಸಿವೆ. ಈ ಹಾರ್ಮೋನ್ ಸಂತೋಷ, ಉಲ್ಲಾಸ ಮತ್ತು ಪ್ರೀತಿಯ ಭಾವನೆಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ, ಮದುವೆಯ ಮೊದಲ ರಾತ್ರಿ ಮಲ್ಲಿಗೆ ಹೂವುಗಳನ್ನು ಮಲಗುವ ಕೋಣೆಯಲ್ಲಿ ಇಡುವುದು ಕೇವಲ ಸಾಂಪ್ರದಾಯಿಕ ಆಚರಣೆ ಮಾತ್ರವಲ್ಲ, ಮನೋವೈಜ್ಞಾನಿಕವಾಗಿಯೂ ಮಹತ್ವ ಹೊಂದಿದೆ.
ದೇಹಕ್ಕೆ ತಂಪು
ಮಲ್ಲಿಗೆ ಹೂವು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೆ, ಆರೋಗ್ಯಕ್ಕೂ ಉತ್ತಮ. ಇದನ್ನು ತಲೆಗೆ ಮುಡಿಯುವುದರಿಂದ ದೇಹದ ತಾಪಮಾನ ಸಮತೋಲನದಲ್ಲಿರುತ್ತದೆ. ಮಲ್ಲಿಗೆಗೆ ನೆತ್ತಿಯ ಶಾಖವನ್ನು ಹೀರಿಕೊಳ್ಳುವ ಅದ್ಭುತ ಸಾಮರ್ಥ್ಯವಿದೆ. ಈ ಗುಣದಿಂದಾಗಿ ತಲೆನೋವು ಕಡಿಮೆಯಾಗುತ್ತವೆ. ವಿಶೇಷವಾಗಿ ಮದುವೆ ಸಮಾರಂಭಗಳಂತಹ ಒತ್ತಡದ ಸಂದರ್ಭಗಳಲ್ಲಿ, ಮಲ್ಲಿಗೆ ಹೂವುಗಳನ್ನು ಧರಿಸುವುದು ಮನಸ್ಸನ್ನು ಶಾಂತಗೊಳಿಸಲು ಮತ್ತು ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ.
ಆದರೆ, ಸುವಾಸನೆ ಸಂಬಂಧಿ ಮೈಗ್ರೇನ್ ಇರುವವರು ಈ ಹೂವಿನ ಬಳಕೆಯಿಂದ ದೂರ ಇರುವುದೇ ಉತ್ತಮ.
Physical Relationship ದೈಹಿಕ ಸಂಬಂಧಕ್ಕೂ ಮುನ್ನ ಹೀಗೆ ಮಾಡದಿದ್ರೆ..ಈ ರೋಗಗಳು ಗ್ಯಾರಂಟಿ ಬರುತ್ತೆ