newsics.com
ಮುಂಬೈ : ಅವಾರ್ಡ್ ಸ್ವೀಕರಿಸುತ್ತಲೇ ಬಾಲಿವುಡ್ ನಟಿ, ಹಿಂದಿ ಬಿಗ್ ಬಾಸ್ 17 ಖ್ಯಾತಿಯ ಸೋನಿಯಾ ಬನ್ಸಾಲ್ ಗೆ ಹೃದಯಾಘಾತವಾಗಿದೆ.
21 ರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸೋನಿಯಾ ಬಂದಿದ್ದರು. ಅಲ್ಲಿ ಚೆನ್ನಾಗಿಯೇ ಓಡಾಡಿಕೊಂಡಿದ್ದ ನಟಿಗೆ ಏಕಾಏಕಿ ಆರೋಗ್ಯ ಹದಗೆಟ್ಟಿತು. ನಂತರ ಹೃದಯಾಘಾತವಾಗಿರುವುದು ತಿಳಿದು ತಕ್ಷಣ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಸೋನಿಯಾ ನೋವಿನಿಂದ ನರಳಾಡುವ ವಿಡಿಯೋ ವೈರಲ್ ಆಗಿದೆ.
ಮೂಲಗಳ ಪ್ರಕಾರ, ಕಳೆದ ನಾಲ್ಕು ತಿಂಗಳಿನಿಂದ ಸೋನಿಯಾ ಅವರು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದಾರೆ. ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎನ್ನಲಾಗಿದೆ. ಈ ಮೊದಲು ಕೂಡ ಆರೋಗ್ಯ ಹದಗೆಡುತ್ತಿತ್ತು. ಆದರೆ ಇದೀಗ ಅದು ತೀವ್ರಗೊಂಡಿತು ಎಂದು ವರದಿಗಳು ಹೇಳುತ್ತಿವೆ.
ಬಿಗ್ ಬಾಸ್ 17′ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದ್ದ ಸೋನಿಯಾ ಬನ್ಸಾಲ್ ತಮ್ಮ ಕ್ಯೂಟ್‌ನೆಸ್ ಮತ್ತು ಸ್ಟೈಲ್‌ನಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದರು. ಸೋನಿಯಾ ಸ್ಥಿತಿ ತೀರ ಹದಗೆಟ್ಟಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೋನಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ನೋಡಬಹುದು. ವಿಡಿಯೋ ನೋಡಿದ ನಂತರ ನಟಿಯ ಅಭಿಮಾನಿಗಳು ಕೂಡ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
https://www.instagram.com/reel/C9u1CqfSGz2/?utm_source=ig_web_copy_link