newsics.com
ಬಿಹಾರ : ತಾಯಿ ನಿದ್ರೆಗೆ ಜಾರಿದಾಗ ಮಗುವೊಂದು ಆಟವಾಡುತ್ತಾ ತಲೆಗೆ ಹಾಕುವ ಕ್ಲಿಪ್ ನುಂಗಿದ ದುರ್ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ.
ತಕ್ಷಣ ಮಗುವಿನ ಸ್ಥಿತಿ ಗಮನಿಸಿ ಪೋಷಕರು ಮಗುವನ್ನು ಹತ್ತಿರದ ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಸಕಾಲಿಕ ಡಾಕ್ಟರ್ ಬಳಿ ಕೃದೋಯ್ದು ಚಿಕಿತ್ಸೆ ಕೊಡಿಸಿದ್ದರಿಂದ ಮಗು ಅಪಾಯದಿಂದ ಪಾರಾಗಿದೆ.
10 ತಿಂಗಳ ಮಗು ತಾಯಿ ನಿದ್ರೆಗೆ ಜಾರಿದಾಗ, ತನ್ನ ತಾಯಿಯು ಕೂದಲಿಗೆ ಹಾಕುವ ಕ್ಲಿಪ್ ಅನ್ನು ನುಂಗಿದೆ. ಬಳಿಕ ಪೋಷಕರು ತಕ್ಷಣ ಮಗುವನ್ನು ಪೂರ್ಣಿಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸುಮಾರು 3 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಹೊಟ್ಟೆಯಿಂದ ವೈದ್ಯರು ಕ್ಲಿಪ್ ಅನ್ನು ತೆಗೆದುಹಾಕಿದ್ದು ಮಗು ಈಗ ಆರೋಗ್ಯಕರವಾಗಿದೆ ಎನ್ನಲಾಗಿದೆ.