newsics.com
ಬೆಂಗಳೂರಿನಲ್ಲಿ ನಡೆದ ‘ಮುಖ್ಯಮಂತ್ರಿ ಕಪ್’ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದ ಸ್ಟ್ಯಾಂಡ್ನ ಒಂದು ಭಾಗ ಕುಸಿದಿದ್ದು, ಅಲ್ಲಿ ಕುಳಿತು ಆಟ ನೋಡುತ್ತಿದ್ದ ಪ್ರೇಕ್ಷಕರು ಕೆಳಗೆ ಬಿದ್ದಿದ್ದಾರೆ.
ಶಾಂತಿನಗರ ಶಾಸಕರ ಕ್ಷೇತ್ರ ಮತ್ತು ಸಿ.ವಿ. ರಾಮನ್ನಗರ ಶಾಸಕರ ಕ್ಷೇತ್ರಗಳ ನಡುವಿನ ಫುಟ್ಬಾಲ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ತಂಡವೊಂದರ ಡಗೌಟ್ ಮೇಲಿನ ಸ್ಟ್ಯಾಂಡ್ನ ಒಂದು ಭಾಗವು ಕುಸಿದು ಬಿದ್ದಿದೆ.
ಮುಖ್ಯಮಂತ್ರಿ ಕಪ್’ ಫುಟ್ಬಾಲ್ ಪಂದ್ಯವು ಪೂರ್ಣಗೊಂಡಿದ್ದು, ಶಾಂತಿನಗರ ಶಾಸಕರ ಕ್ಷೇತ್ರವು ಚಾಂಪಿಯನ್ ಆಗಿ ಹೊರಹೊಮ್ಮಿತು. ಮುಖ್ಯ ಅತಿಥಿಯಾಗಿದ್ದ ಕೆಎಸ್ಎಫ್ಎ ಅಧ್ಯಕ್ಷ ಹಾಗೂ ಎಐಎಫ್ಎಫ್ ಉಪಾಧ್ಯಕ್ಷ ಎನ್.ಎ.ಹ್ಯಾರಿಸ್ ಬಹುಮಾನ ವಿತರಿಸಿದರು.
ಮೈದಾನದಲ್ಲಿ ಸಾವಿರಕ್ಕೂ ಅಧಿಕ ಫುಟ್ಬಾಲ್ ಪ್ರೇಮಿಗಳು ಹಾಜರಿ ಹಾಕಿದ್ದರು. ಆದರೆ ಕುಸಿದ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಗದಿಗಿಂತ ಹೆಚ್ಚು ಮಂದಿ ಕಿಕ್ಕಿರಿದು ತುಂಬಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಹೇಳಿದೆ. ಆದರೆ ಯಾರಿಗೂ ದೊಡ್ಡ ಗಾಯಗಳಾಗಿಲ್ಲ ಎಂದು ತಿಳಿಸಿದೆ ಎಂದು ವರದಿಯಾಗಿದೆ.