newsics.com
ದಿನನಿತ್ಯದ ಅಡುಗೆಗೆ ಟೊಮೆಟೊ ಬೇಕೇ ಬೇಕು. ಆದರೆ ಸದ್ಯ ಬೆಲೆ ಮಾತ್ರ ಕೇಳೋ ಹಾಗಿಲ್ಲ.
ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಮತ್ತೆ ನೂರು ರೂ.ಗಡಿ ದಾಟಿದೆ.ಅದರಲ್ಲೂ ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳಲ್ಲಿ ದರ ಕೊಂಚ ಕಡಿಮೆ ಎಂದರೆ ಅಲ್ಲಿಯೂ ದರ ಗಗನಕ್ಕೆ ಏರಿದೆ.
ಬೆಂಗಳೂರಿನ ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆ ಮತ್ತು ಕಡಿಮೆ ಇಳುವರಿಯಿಂದಾಗಿ ಆನ್ ಲೈನ್ ದಿನಸಿ ಪ್ಲಾಟ್‌ಫಾರ್ಮ್‌ಗಳಲ್ಲಿ ಟೊಮೆಟೊ ಬೆಲೆ 100 ರೂ.ಗಿಂತ ಹೆಚ್ಚಾಗಿದೆ. 79 ರಿಂದ 90 ರೂ.ಗಳಷ್ಟಿದ್ದ ಟೊಮೆಟೊ ಬೆಲೆ ಈಗ ಆನ್ ಲೈನ್ ದಿನಸಿ ಪ್ಲಾಟ್‌ಫಾರ್ಮ್‌ಗಳಲ್ಲಿ 100 ರೂ.ಗಳ ಗಡಿ ದಾಟಿದೆ.
ಬೆಂಗಳೂರು ಸುತ್ತಮುತ್ತಲಿನ ಟೊಮೆಟೊ ಉತ್ಪಾದಿಸುವ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ, ಬೆಲೆಗಳು ಇನ್ನೂ ಹೆಚ್ಚಾಗಬಹುದು ಎಂಬ ಆತಂಕವಿದೆ.