newsics.com
ಪ್ರಧಾನಿ ಮೋದಿ ಸರ್ಕಾರದ 3.0 ಕೇಂದ್ರ ಬಜೆಟ್ ಇಂದು ಮಂಡನೆ ಆಗಲಿದೆ. ಬಜೆಟ್ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಇದು 7ನೇ ಬಜೆಟ್ ಆಗಿದೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿರುವುದರಿಂದ ಸಾಕಷ್ಟು ಕುತೂಹಲ ಇದೆ.
ರೈತರ ಕಿಸಾನ್ ಸಮ್ಮಾನ್ ಸಹಾಯ ಧನವನ್ನ 6 ಸಾವಿರ ರೂಪಾಯಿಗೆ ಬದಲಾಗಿ 12 ಸಾವಿರ ರೂಪಾಯಿಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಅಲ್ಲದೆ ಬಿಬಿಎಲ್ ಕುಟುಂಬದ ಮಹಿಳೆಯರಿಗೆ 1 ಲಕ್ಷ ಹಣ ನೀಡುವ ಯೋಜನೆ ಘೋಷಣೆಯಾಗೋ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದಿಂದ ಮಧ್ಯಂತರ ಬಜೆಟ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹತ್ತು ಹಲವು ನಿರೀಕ್ಷೆಯಲ್ಲಿದೆ.
9 ಸಾವಿರ ಕೋಟಿ ರೂಪಾಯಿ ವೆಚ್ಚದ ಮೇಕೆದಾಟು ಯೋಜನೆಗೆ ಅನುಮತಿಸಿಗೋ ನಿರೀಕ್ಷೆಯಲ್ಲಿದೆ. ಅಲ್ಲದೆ ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ರೂಪಾಯಿ ಅನುದಾನ, ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಪರಿಸರ ಇಲಾಖೆಯಿಂದ ಗ್ರೀನ್ ಸಿಗ್ನಲ್, ರಾಯಚೂರಿಗೆ ಏಮ್ಸ್ ಮಂಜೂರಾತಿ, ಗುಜರಾತ್ ಗಿಫ್ಟ್ ಸಿಟಿ ಮಾದರಿಯಲ್ಲಿ ಬೆಂಗಳೂರಿಗೆ ಜಾಗತಿಕ ಹಣಕಾಸು, ಐಟಿ ಹಬ್, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮಾನ್ಯುಫ್ಯಾಕ್ಚರಿಂಗ್ ವಲಯ ಅಭಿವೃದ್ಧಿಗೆ ಅನುದಾನ ಹೀಗೆ ಹಲವು ನಿರೀಕ್ಷೆಗಳಿಗೆ ಮನ್ನಣೆ ಸಿಗುತ್ತಾ ಕಾದು ನೋಡಬೇಕಿದೆ.ಣೆ