newsics.com
ಯುಕೆಯಲ್ಲಿ ಒಂದು ಹಳ್ಳಿ ಇದೆ, ಅದನ್ನು ವಿಶ್ವದ ಅತ್ಯಂತ ಭಯಾನಕ ಹಳ್ಳಿ ಎಂದು ಕರೆಯಲಾಗುತ್ತದೆ. ಮಾನವರು ರಾತ್ರಿಯಲ್ಲಿ ಇಲ್ಲಿನ ಬೀದಿಗಳಲ್ಲಿ ತಿರುಗಾಡೋಕು ಹೆದರುತ್ತಾರೆ, ಯಾಕಂದ್ರೆ ಇಲ್ಲಿನ ಬೀದಿ ಬೀಡಿಗಳಲ್ಲಿ ಮನುಷ್ಯರ, ಪ್ರಾಣಿಗಳ ಆತ್ಮವೂ ಅಲೆದಾಡುತ್ತಿದೆಯಂತೆ.
ಲಂಡನ್ನಿಂದ ಕೇವಲ ಒಂದು ಗಂಟೆ ದೂರದಲ್ಲಿ ಪ್ಲಕ್ಲಿ ಎಂಬ ಹಳ್ಳಿ ಇದೆ. ಈ ಗ್ರಾಮವು ನೋಡೊದಕ್ಕೆ ತುಂಬಾನೆ ಸುಂದರವಿದೆ, ಸಾಮಾನ್ಯ ಊರಿನಂತೆ ಕಾಡುತ್ತದೆ. ಆದರೆ ಇಲ್ಲಿನ ಒಂದೊಂದು ಕಥೆ ಕೇಳಿದ್ರೆ, ಕೈ ಕಾಲು ನಡುಗೋಕೆ ಶುರುವಾಗುತ್ತೆ. ಈ ಹಳ್ಳಿಯ ಇತಿಹಾಸವನ್ನು ನೋಡಿದರೆ, ಭಯಂಕರ ಕೊಲೆಗಳು, ಭಯಾನಕ ಮುಖಗಳು ಮತ್ತು ಕಿರುಚಾಟಗಳಿಂದ ತುಂಬಿದ ಕಥೆ ಕೇಳಬಹುದು. ಇದು ಬ್ರಿಟನ್ನ ಅತಿ ಹೆಚ್ಚು ದೆವ್ವಗಳಿರುವ ಭಯಾನಕ ತಾಣಗಳಲ್ಲಿ ಒಂದಾಗಿದೆ ಮತ್ತು ಮಾಹಿತಿಯ ಪ್ರಕಾರ, ಇದು 1989 ರಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ.
ಪ್ಲಕ್ಲಿಯ ಇತಿಹಾಸವನ್ನ ನೋಡಿದ್ರೆ ಇಲ್ಲಿ ಹೆಚ್ಚಿನ ಜನರ ಕೊಲೆಗಳು ನಡೆದಿವೆ ಅನ್ನೋದು ತಿಳಿದು ಬಂದಿದೆ. ಹಾಗಾಗಿ ಈ ತಾಣ ಆತ್ಮಗಳ ಆವಾಸ ಸ್ಥಾನವಾಗಿ ಮಾರ್ಪಾಡು ಹೊಂದಿದೆ. ಸತ್ತ ಜನರ ಆತ್ಮಗಳು ಇಂದು ಬ್ರಿಟನ್ ನ ಈ ಒಂದು ಸಣ್ಣ ಹಳ್ಳಿಯ ಬೀದಿಗಳಲ್ಲಿ ಅಲೆದಾಡುತ್ತಲೆ ಇರುತ್ತದೆ, ಅಷ್ಟೇ ಅಲ್ಲ ಇಲ್ಲಿ ಪ್ರಾಣಿಗಳ ಆತ್ಮವೂ ಅಲೆದಾಡುತ್ತಿದೆ.
ಈ ಗ್ರಾಮದಲ್ಲಿ 12 ಸ್ಥಳಗಳಿವೆ, ಅಲ್ಲಿ ದೆವ್ವಗಳು ತಿರುಗಾಡುತ್ತಿರುವುದನ್ನ ಜನರು ಕಣ್ಣಾರೆ ಕಂಡಿದ್ದಾರೆ. ಹಾಗಂತ ಈ ಸ್ಥಳ ಖಾಲಿಯಾಗೇನೂ ಇಲ್ಲ. ಇದು ಹಾಲಿಡೇ ಎಂಜಾಯ್ ಮಾಡಲು ಜನರು ಹೆಚ್ಚಾಗಿ ಬರುವಂತಹ ತಾಣವಾಗಿದೆ. ಏಕೆಂದರೆ ಈ ಗ್ರಾಮವು ದೆವ್ವಗಳ ಕಾರಣದಿಂದಾಗಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಎಲ್ಲರೂ ದೆವ್ವಗಳಿಂದ ದೂರ ಇರಲು ಬಯಸಿದ್ರೆ, ಈ ತಾಣಕ್ಕೆ ದೆವ್ವಗಳ ಭೇಟಿಗೆಂದೇ ಜನ ಬರ್ತಾರೆ.