newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
28-08-2025, ಗುರುವಾರ
ವಿಶ್ವಾವಸು ಸಂವತ್ಸರ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸ ಶುಕ್ಲಪಕ್ಷದ ಪಂಚಮಿ.
ದಿನ ವಿಶೇಷ:
* ಋಷಿಪಂಚಮಿ
* ಗರ್ಗಋಷಿ ಜಯಂತಿ
* ವಿಶ್ವಾಮಿತ್ರಋಷಿ ಜಯಂತಿ
🌷🌺🙏🌺🌷
ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ದಕ್ಷಿಣಾಯನ
ಋತು – ವರ್ಷ
ದಿನಾಂಕ – 28/08/2025
ತಿಂಗಳು – ಆಗಸ್ಟ್
ಬಣ್ಣ – ಹಳದಿ
ವಾರ – ಗುರುವಾರ
ತಿಥಿ – ಪಂಚಮಿ 17:56:19
ಪಕ್ಷ – ಶುಕ್ಲ
ನಕ್ಷತ್ರ – ಚಿತ್ತ 08:42:37
ಯೋಗ – ಶುಕ್ಲ 13:17:01
ಕರಣ – ಬಾಳವ 17:56:19
ತಿಂಗಳು (ಅಮಾವಾಸ್ಯಾಂತ್ಯ) ಭಾದ್ರಪದ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ – ತುಲಾ
ಸೂರ್ಯ ರಾಶಿ – ಸಿಂಹ
ಸೂರ್ಯೋದಯ 06:09:30
ಸೂರ್ಯಾಸ್ತ 18:31:54
ಹಗಲಿನ ಅವಧಿ 12:22:24
ರಾತ್ರಿಯ ಅವಧಿ 11:37:37
ಚಂದ್ರೋದಯ 09:59:49
ಚಂದ್ರಾಸ್ತ 21:48:51
ರಾಹು ಕಾಲ 13.54 – 15:26 ಅಶುಭ
ಯಮಘಂಡ ಕಾಲ 06:10 – 07:42 ಅಶುಭ
ಗುಳಿಕ ಕಾಲ 09:15 – 10:48
ಅಭಿಜಿತ್ 11.56 – 12:45 ಶುಭ
ದುರ್ಮುಹೂರ್ತ 10:17 – 11:06 ಅಶುಭ
ದುರ್ಮುಹೂರ್ತ 15:14 – 16:03 ಅಶುಭ
—–
ಇಂದಿನ ಸುಭಾಷಿತ
ನ ತೇ ರೂಪಂ ನ ಚಾಕಾರೋ
ನಾಯುಧಾನಿ ನ ಚಾಸ್ಪದಮ್ |
ತಥಾಪಿ ಪುರುಷಾಕಾರೋ
ಭಕ್ತಾನಾಂ ತ್ವಂ ಪ್ರಕಾಶಸೇ ॥
—-
ನೀರಿಗೆ ಯಾವ ಆಕಾರವೂ ಸ್ವರೂಪತಃ ಇಲ್ಲದಿದ್ದರೂ ಅದು ಮಂಜಿನ ಗೆಡ್ಡೆಯ ರೂಪವನ್ನು ತಳೆದಾಗ ಅದರಲ್ಲಿ ನಾನಾ ಆಕಾರಗಳು ಬರುತ್ತವೆ. ಈ ಎರಡು ಸ್ಥಿತಿಗಳಲ್ಲೂ ನೀರನ್ನು ಗಮನಿಸಿ ನೋಡಿರುವವರಿಗೆ ನೀರು ಮತ್ತು ಮಂಜಿನಗಡ್ಡೆ ಎರಡರಲ್ಲಿ ಸ್ವರೂಪಭೇದವೇನೂ ಕಂಡುಬರುವುದಿಲ್ಲ. ನೀರಿಗೆ ಆಕಾರವುಂಟು ಆಕಾರವಿಲ್ಲ ಎಂಬ ಎರಡು ಹೇಳಿಕೆಗಳೂ ಅದರ ಸ್ಥಿತಿ ವಿಶೇಷಗಳಿಗೆ ಅನುಗುಣವಾಗಿ ಸತ್ಯವೇ ಆಗಿವೆ. ಅವುಗಳಲ್ಲಿ ವಾಸ್ತವವಾದ ವಿರೋಧವೇನೂ ಇಲ್ಲ. ಗಣೇಶನ ನಿರಾಕಾರ ಮತ್ತು ಸಾಕಾರ ವರ್ಣನೆಗಳೂ ಇದೇ ರೀತಿಯವು ಎಂದು ನಾವು ತಿಳಿಯಬೇಕು.
🪷🪷
—–
ಇಂದಿನ ಮಾತು
ಬದುಕಿಗೆ ನಾಳೆಗಳು ಎಷ್ಟು ಮುಖ್ಯವೋ ಈ ದಿನವೂ, ಈ ಕ್ಷಣವೂ ಅಷ್ಟೇ ಮುಖ್ಯ. ಪ್ರತಿ ಕ್ಷಣವನ್ನೂ ಆನಂದದಿಂದ ಜೀವಿಸೋಣ.
💐