newsics.com
ಬಿಹಾರಿಗಳು ಇಷ್ಟು ಮುಂದುವರಿದಿದ್ದರೂ, ಬಿಹಾರವೇಕೆ ಇಷ್ಟು ಹಿಂದುಳಿದಿದೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕ್ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅಭಿಪ್ರಾಯ ಪಟ್ಟಿದ್ದಾರೆ. ಬಿಹಾರಿಗಳು ರಾಜ್ಯದಿಂದ ವಲಸೆ ಹೋದ ನಂತರ, ಉನ್ನತ ಸರಕಾರಿ ಉದ್ಯೋಗಗಳಿಂದ ಹಿಡಿದು, ಖಾಸಗಿ ವಲಯದವರೆಗೆ ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.
ಅಪರಾಧ ಪ್ರಕರಣಗಳು ಹಾಗೂ ಇತ್ತೀಚೆಗೆ ಕುಸಿಯುತ್ತಿರುವ ಸೇತುವೆಗಳಿಗೆ ಸಂಬಂಧಿಸಿದಂತೆ ಪೂರ್ವನಿದರ್ಶನವಾಗುವಂತಹ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಬಿಹಾರ ಸರಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯವು ಪ್ರಗತಿಯ ಏಣಿಯೇರಲು ಮುನ್ನೋಟದ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
2025ರ ಅಂತ್ಯದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ