newsics.com
ಗುಂಡ್ಲುಪೇಟೆ: ಲಿಂಗದೀಕ್ಷೆ ಪಡೆದು ಮಠಾಧೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಧರಿಸುವ ಟೋಪಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿರುವುದು, ಮದ್ಯ–ಮಾಂಸ ಸೇವನೆ ಮಾಡಿದ್ದಾರೆ ಎನ್ನಲಾದ ಫೋಟೊ ಹಾಗೂ ವಿಡಿಯೊಗಳು ಹರಿದಾಡಿವೆ.
ಯಾದಗಿರಿ ಜಿಲ್ಲೆಯ ಶಹಪುರ ಮೂಲದ ಮೊಹಮದ್ ನಿಸಾರ್ ತನ್ನ ಮೂಲ ಧರ್ಮ ಮರೆಮಾಚಿದ್ದನು. ಈ ವಿಷಯವನ್ನು ಯಾರಿಗೂ ತಿಳಿಸದೇ ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠಕ್ಕೆ ಮಠಾಧೀಶನಾಗಿದ್ದನು.
ಪೂರ್ವಾಶ್ರಮದಲ್ಲಿ ಇಸ್ಲಾಂ ಧರ್ಮದವರಾಗಿದ್ದರೆಂಬುದು ಬಯಲಾಗುತ್ತಿದ್ದಂತೆ, ತಾಲ್ಲೂಕಿನ ಚೌಡಹಳ್ಳಿಯ ಗುರು ಮಲ್ಲೇಶ್ವರ ಶಾಖಾ ಮಠದ ಪೀಠ ತ್ಯಾಗಮಾಡಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹಂಚಿಕೆಯಾಗಿರುವ ವಿಡಿಯೊ ಅವು ಸನ್ಯಾಸತ್ವಕ್ಕೆ ಮುಂಚಿನವೋ ಅಥವಾ ನಂತರದವೋ ಎಂಬುದು ಖಚಿತವಾಗಿಲ್ಲ.
₹ 139 ಬೆಲೆಯ ಟೋಪಿಯನ್ನು ನಿಜಲಿಂಗ ಸ್ವಾಮೀಜಿ ಹೆಸರಿನಲ್ಲಿ ಖರೀದಿಸಿರುವ ಬಿಲ್ ಪ್ರತಿ ಜಾಲತಾಣಗಳಲ್ಲಿ ಹರಿದಾಡಿದೆ. ಖರೀದಿಗೆ ಮಠದ ವಿಳಾಸವನ್ನೇ ನೀಡಲಾಗಿದೆ.

ಮೊಹಮದ್ ನಿಸಾರ್ ತನ್ನ ಕೋಣೆಯಲ್ಲಿ ಕುಡಿದು ತೂರಾಡುತ್ತಿರುವ ಮತ್ತು ಯುವಕನೋರ್ವನ ಜೊತೆ ಸರಸವಾಡುತ್ತಿರುವ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಹಾಗೆ ಕೋಣೆಯಲ್ಲಿ ಮದ್ಯಪಾನ ಮಾಡುತ್ತಿರುವ ಮತ್ತು ಮಾಂಸಾಹಾರ ಸೇವನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.ಮೂರು ದಿನಗಳ ಹಿಂದೆ ಮುಸ್ಲಿಮರು ಧರಿಸುವ ಟೋಪಿಯನ್ನು ಆನ್‌ಲೈನ್ ಮೂಲಕ ನಿಜಲಿಂಗಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ ತರಿಸಿಕೊಂಡಿದ್ದನು.
ಬಸವತತ್ವಕ್ಕೆ ಮನಸೋತಿದ್ದ ಯಾದಗಿರಿ ಜಿಲ್ಲೆಯ ಶಹಾಪುರದ ಮಹಮ್ಮದ್ ನಿಸಾರ್ (22) ನಿಜಲಿಂಗ ಸ್ವಾಮೀಜಿಯಾಗಿ ಹೆಸರು ಬದಲಾಯಿಸಿಕೊಂಡು ಶಾಖಾಮಠದ ಸ್ವಾಮೀಜಿಯಾಗಿದ್ದರು
ಈಚೆಗೆ ಭಕ್ತರು ಸ್ವಾಮೀಜಿ ಮೊಬೈಲ್ ಫೋನ್ ಗಮನಿಸುವಾಗ ಆಧಾರ್ ಕಾರ್ಡ್‌ನಲ್ಲಿ ಮಹಮ್ಮದ್ ನಿಸಾರ್ ಎಂದು ಇದ್ದದ್ದನ್ನು ಗಮನಿಸಿ ಗ್ರಾಮಸ್ಥರಿಗೆ ತಿಳಿಸಿದ್ದರು. ಮುಖಂಡರು, ಪೊಲೀಸರು ವಿಚಾರಿಸಿದಾಗ 2021ರಲ್ಲಿ ಲಿಂಗದೀಕ್ಷೆ ಪಡೆದಿದ್ದಾಗಿ ಸ್ವಾಮೀಜಿ ಸಮಜಾಯಿಷಿ ನೀಡಿದ್ದರು.
ಈಚೆಗೆ ಅವರ ಆಧಾರ್ ಕಾರ್ಡ್‌ನಲ್ಲಿ ಪೂರ್ವಾಶ್ರಮದ ಧರ್ಮ ಬಯಲಾದ ಬಳಿಕ ಭಕ್ತರ ವಿರೋಧಕ್ಕೆ ಮಣಿದು ಪೀಠ ತ್ಯಜಿಸಿ, ಮಠದಿಂದ ಹೊರ ನಡೆದಿದ್ದರು. ನಂತರ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
https://www.newsics.com/2025/08/06/heavy-rains-in-uttarakhand-kedarnath-yatra-suspended/