newsics.com
ಕರಾವಳಿಯಿಂದ ಬೆಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಗಳೆಲ್ಲವೂ ಭೂಕುಸಿತದಿಂದ ಹಾನಿಗೀಡಾಗಿರುವ ಕಾರಣ ಬಸ್ಸುಗಳು ಯಾವ್ಯಾವುದೋ ಮಾರ್ಗದಲ್ಲಿ ಸಂಚರಿಸುತ್ತಿವೆ. ಕಾರುಗಳಲ್ಲಿ ಮಂಗಳೂರು –ಬೆಂಗಳೂರು ತಲುಪಲು ಕನಿಷ್ಠ 10 ಗಂಟೆ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಅನ್ಯಮಾರ್ಗ ಕಾಣದೆ ತುರ್ತು ಸಂದರ್ಭ ಸಂಚಾರ ಮಾಡಬೇಕಾದ ಹಿನ್ನೆಲೆಯಲ್ಲಿ ವಿಮಾನಗಳನ್ನು ಆಶ್ರಯಿಸುತ್ತಿದ್ದಾರೆ. ಒಂದೂವರೆ, ಎರಡು ಸಾವಿರ ರೂ ಇದ್ದ ವಿಮಾನಯಾನ ದರ ಈಗ ಒಂಭತ್ತು ಸಾವಿರದವರೆಗೆ ಬಂದಿದೆ.
ಇಷ್ಟೆಲ್ಲ ಸಮಸ್ಯೆಗಳಿರುವ ಕಾರಣ, ಸೀಮಿತ ಸಂಚಾರ ಇರುವ ಮಂಗಳೂರು ಬೆಂಗಳೂರು ರೈಲು ಮಾರ್ಗಕ್ಕೆ ಹೆಚ್ಚುವರಿ ರೈಲುಗಳನ್ನು ಹಾಕಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರ ಬರೆದಿದ್ದು, ಇದಕ್ಕೆ ಸ್ಪಂದನೆ ದೊರಕಿದೆ.
ರೈಲು ಸಂಖ್ಯೆ 06547 / 06548 ಮಂಗಳೂರು ಜಂಕ್ಷನ್ ಹಾಗೂ ಯಶವಂತಪುರ ಮಧ್ಯೆ ಸಂಚರಿಸಲಿದೆ. ರೈಲು ಸಂಖ್ಯೆ 06547 ಜುಲೈ 19 ರಂದು ಬೆಂಗಳೂರಿನಿಂದ ಮಂಗಳೂರಿಗೆ, ರೈಲು ಸಂಖ್ಯೆ 06548 ಜುಲೈ 20 ರಂದು ಮಂಗಳೂರಿನಿಂದ ಯಶವಂತಪುರಕ್ಕೆ ತೆರಳಲಿದೆ.
ರೈಲು ಸಂಖ್ಯೆ 06549 / 06550 ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ಮಧ್ಯೆ ಜುಲೈ 21 ಮತ್ತು 22 ರಂದು ಸಂಚರಿಸಲಿದೆ. ರೈಲು ಸಂಖ್ಯೆ 06549 ಜುಲೈ 21 ಮತ್ತು 22 ರಂದು ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ಮಧ್ಯೆ ಸಂಚರಿಸಲಿದ್ದು, ರೈಲು ಸಂಖ್ಯೆ 06550 ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ಮಧ್ಯೆ ಜುಲೈ 21 ಮತ್ತು 22 ರಂದು ಸಂಚರಿಸಲಿದೆ
ಮಂಗಳೂರು- ಬೆಂಗಳೂರು ಮಧ್ಯೆ 2 ವಿಶೇಷ ರೈಲು