Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಟ್ಟಿಗಿತ್ತಿ ಸವಿತಕ್ಕನ ಮಗ ನೇಣಿಗೆ ಕೊರಳೊಡ್ಡಿದ್ದೇಕೆ? ತಲೆಬುಡವಿಲ್ಲದ ಡೆತ್‌ನೋಟ್ ಮರ್ಮವೇನು?
ಕರ್ನಾಟಕಪ್ರಮುಖಮನರಂಜನೆವಿದೇಶವೈರಲ್

ಗಟ್ಟಿಗಿತ್ತಿ ಸವಿತಕ್ಕನ ಮಗ ನೇಣಿಗೆ ಕೊರಳೊಡ್ಡಿದ್ದೇಕೆ? ತಲೆಬುಡವಿಲ್ಲದ ಡೆತ್‌ನೋಟ್ ಮರ್ಮವೇನು?

Share
2 Min Read
SHARE

newsics.com

ಬೆಂಗಳೂರು: ಬದುಕಿನಲ್ಲಿ ಕಷ್ಟ ಮೆಟ್ಟಿ ನಿಲ್ಲಬೇಕು. ಕಷ್ಟಗಳನ್ನು ಹೇಳಿಕೊಂಡು ಯಾಕೆ ಅಳಬೇಕು? ನಾವು ಎಲ್ಲವನ್ನೂ ಎದುರಿಸಬೇಕು ಎಂದು ಕಳೆದ ಹದಿನೈದು ದಿನಗಳ ಹಿಂದೆ ಸಂದರ್ಶನದಲ್ಲಿ ಹೇಳಿದ್ದ ಅಂತಾರಾಷ್ಟ್ರೀಯ ಜಾನಪದ ಗಾಯಕಿ ಸವಿತಕ್ಕನ ಬದುಕಲ್ಲಿ‌ ಮತ್ತೊಂದು ಸಂಕಷ್ಟ ಎದುರಾಗಿದೆ.

ಸವಿತಕ್ಕ ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗಲೇ ಅವರ ಎರಡನೇ ಮಗ ಆತ್ಮ*ಹತ್ಯೆಗೆ ಶರಣಾಗಿದ್ದಾನೆ.

ಸವಿತಕ್ಕನವರ 13 ವರ್ಷದ ಮಗ ಗಾಂಧಾರ್‌ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಡೆತ್‌ ನೋಟ್‌ ಬರೆದಿಟ್ಟು 7ನೇ ಕ್ಲಾಸ್‌ ಹುಡುಗ ಮನೆಯಲ್ಲಿ ರಾತ್ರಿ ನೇಣು ಹಾಕಿಕೊಂಡಿದ್ದಾನೆ.

ತಮ್ಮನನ್ನು ಎಬ್ಬಿಸು, ನಾಯಿಯನ್ನು ಕರೆದುಕೊಂಡು ಹೊರಗಡೆ ಹೋಗಿ ಬರಲಿ ಎಂದು ಮೊದಲ ಮಗನಿಗೆ ತಂದೆ ಹೇಳಿದ್ದಾರೆ. ಆಗಲೇ ಆತ್ಮ*ಹತ್ಯೆ ಸಂಗತಿ ಬೆಳಕಿಗೆ ಬಂದಿದೆ. ಗಾಂಧಾರ್ ತನ್ನ ರೂಮ್‌ನಲ್ಲಿ ಬೆಡ್‌ ಮೇಲೆ ಪಿಯಾನೋ ಇಟ್ಟು, ಅದರ ಮೇಲೆ ಬೆಡ್‌ಶೀಟ್‌ ಹೊದಿಸಿ, ಆಮೇಲೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.

ನಟಿ, ಬಿಗ್‌ ಬಾಸ್‌ ಸ್ಪರ್ಧಿ ಅಕ್ಷತಾ ಪಾಂಡವಪುರ ಅವರಿಗೆ 15 ದಿನಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸವಿತಕ್ಕ, ತಾವು ಪಟ್ಟ ಕಷ್ಟವನ್ನು ಎಲ್ಲಿಯೂ ಹೇಳಿಕೊಳ್ಳೋದಿಲ್ಲ. ರಿಯಾಲಿಟಿ ಶೋಗಳಲ್ಲಿ ಕಷ್ಟಗಳನ್ನು ಹೇಳಿಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳೋದಿಲ್ಲ ಎಂದಿದ್ದರು.

ನಾನು ಹತ್ತನೇ ಕ್ಲಾಸ್‌ನಲ್ಲಿದ್ದಾಗ ತಂದೆ ಮನೆ ಬಿಟ್ಟು ಹೋದರು. ನಾನು ಸೆಕೆಂಡ್‌ ಪಿಯುಸಿಯಲ್ಲಿದ್ದಾಗ ನನ್ನ ಅಣ್ಣ ಸನ್ಯಾಸತ್ವ ಸ್ವೀಕಾರ ಮಾಡಿದ. ಇದನ್ನು ನಾನು ವೇದಿಕೆ ಮೇಲೆ ಹೇಳಿಕೊಳ್ಳಬೇಕಿತ್ತು ಎಂದರು. ಇದನ್ನೆಲ್ಲ ನಾನು ಯಾಕೆ ಹೇಳಿಕೊಂಡು ಅಳಬೇಕು, ನಾನು ಚಾಲೆಂಜ್‌ ಆಗಿ ಸ್ವೀಕಾರ ಮಾಡಿ ಜೀವನ ಕಟ್ಟುಕೊಂಡಿದ್ದೀನಿ. ಎಲ್ಲರ ಜೀವನದಲ್ಲಿಯೂ ಒಂದಲ್ಲ ಒಂದು ಕಷ್ಟ ಇರುತ್ತದೆ. ಪ್ರತಿಯೊಬ್ಬರು ಒಂದಲ್ಲ ಒಂದು ಕಷ್ಟ ಅನುಭವಿಸಿ ಬಂದಿರುತ್ತಾರೆ. ಆ ಕಷ್ಟಗಳನ್ನೆಲ್ಲ ಮೆಟ್ಟಿಲಾಗಿ ಹತ್ತಿಕೊಂಡು ಹೋಗಬೇಕು. ಅದನ್ನೆಲ್ಲ ವೇದಿಕೆ ಮೇಲೆ ಹೇಳಿಕೊಳ್ಳೋದು ಇಷ್ಟ ಆಗಲ್ಲ ಎಂದಿದ್ದರು.

ನಾನು ನನ್ನ ಇಬ್ಬರು ಮಕ್ಕಳು ಹುಟ್ಟುವ ಹಿಂದಿನ ದಿನ ಮೂರು ಗಂಟೆ ಹಾಡಿ, ಆಸ್ಪತ್ರೆಗೆ ಅಡ್ಮಿಟ್‌ ಆಗುತ್ತಿದ್ದೆ. ಮೊದಲ ಮಗನಿಗೆ ಈಗ ಇಪ್ಪತ್ತೊಂದು ವರ್ಷ. ಒಂದೂವರೆ ತಿಂಗಳು ಬಾಣಂತಿಯಿದ್ದಾಗಲೇ ಮತ್ತೆ ಹಾಡಲು ಆರಂಭಿಸಿದ್ದೆ. ಆಗ ಒಂದೊಂದು ರೂಪಾಯಿಗೂ ಕಷ್ಟಪಡುತ್ತಿದ್ದೆ. ಇಂದು ನಾನು ವಿದೇಶಗಳಲ್ಲಿ ಹಾಡುತ್ತೇನೆ ಎಂದರೆ ಅದು ನನ್ನ ಸಾಮರ್ಥ್ಯದಿಂದ ಮಾತ್ರ ಎಂದು ಅವರು ಹೇಳಿದ್ದರು.

ಸದ್ಯ ಆಸ್ಟ್ರೇಲಿಯಾ ಕಾರ್ಯಕ್ರಮದಲ್ಲಿರುವ ಸವಿತಾ ಅವರು ಬೆಂಗಳೂರಿಗೆ ಬರಬೇಕಿದೆ. ಪುಟ್ಟ ಮಗ ಆತ್ಮ*ಹತ್ಯೆ ಮಾಡಿಕೊಂಡಿರೋದನ್ನು ಅವರು ಹೇಗೆ ಸಹಿಸಿಕೊಳ್ತಾರೆ. ಹೇಗೆ ತಾಳ್ಮೆಯಿಂದ ಇರುತ್ತಾರೆ ಎಂದು ಅವರ ಸ್ನೇಹಿತರು, ಕುಟುಂಬಸ್ಥರು ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ತಲೆಬುಡವಿಲ್ಲದ ಬರೆಹವುಳ್ಳ ಡೆತ್ ನೋಟ್ ಕೂಡ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾನೆ. ಬದುಕಿನ ಕಾಲು ಭಾಗವನ್ನೂ ಅನುಭವಿಸದ, ಈಗಷ್ಟೇ ಕಣ್ಣುಬಿಡುತ್ತಿದ್ದ ಗಾಂಧಾರ್, ತೃಪ್ತ ಜೀವನದ ಬಗ್ಗೆ ಬರೆದಿದ್ದಾನೆ. ನಾನೀಗಾಗಲೇ ಸ್ವರ್ಗದಲ್ಲಿದ್ದೇನೆ ಎಂದೆಲ್ಲ ಗೀಚಿದ್ದಾನೆ. ಏನಿದರ ಹಕೀಕತ್ತು?

ಗಟ್ಟಿಗಿತ್ತಿ ಸವಿತಕ್ಕನ ಹೊಟ್ಟೆಯಲ್ಲಿ ಹುಟ್ಟಿದ ಗಾಂಧಾರ್ ಯಾಕೆ ಬದುಕನ್ಜು ಎದುರಿಸಲಾರದೆ ನೇಣಿಗೆ ಕೊರಳೊಡ್ಡಿದ, ಸಾಯುವಂಥ ಕಷ್ಟ ಏನಿತ್ತು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಕಾಡುತ್ತದೆ.

ಒಂದೇ ಹಳ್ಳಿಯಲ್ಲಿ 47 ‘IAS, IPS ಅಧಿಕಾರಿಗಳು!; ‌ಇದು ಭಾರತದ UPSC ವಿಲೇಜ್

Tollywood news ತೆಲುಗು ಸಿನಿಮಾಗಳ ಚಿತ್ರೀಕರಣ ದಿಢೀರ್ ಬಂದ್: ಯಾಕೆ? ಏನಾಯ್ತು?

TAGGED:Why did Savita's son hang himself? What is the mystery of the meaningless Death Note?
Share This Article
Facebook Twitter Copy Link Print
Previous Article ಧರ್ಮಸ್ಥಳ ಕೇಸ್: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು
Next Article Prajwal Revanna: ಅಪರಾಧಿಯಾದ ಬಳಿಕ ಪ್ರಜ್ವಲ್ ರೇವಣ್ಣ ಮೊದಲ ಬರ್ತ್ ಡೇ ; ಬಿಕೋ ಎನ್ನುತ್ತಿದೆ ಮನೆ!

Popular Posts

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

You Might Also Like

ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read
ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?