Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Tollywood news ತೆಲುಗು ಸಿನಿಮಾಗಳ ಚಿತ್ರೀಕರಣ ದಿಢೀರ್ ಬಂದ್: ಯಾಕೆ? ಏನಾಯ್ತು?
ದೇಶಪ್ರಮುಖಮನರಂಜನೆ

Tollywood news ತೆಲುಗು ಸಿನಿಮಾಗಳ ಚಿತ್ರೀಕರಣ ದಿಢೀರ್ ಬಂದ್: ಯಾಕೆ? ಏನಾಯ್ತು?

Share
2 Min Read
SHARE

newsics.com

ಹೈದರಾಬಾದ್: ರಾಜಮೌಳಿಯ ಸಿನಿಮಾ ಸೇರಿದಂತೆ ತೆಲುಗಿನ ಎಲ್ಲ ಸಿನಿಮಾಗಳ ಚಿತ್ರೀಕರಣ ಸೋಮವಾರದಿಂದ (ಆ.4) ದಿಢೀರ್ ಸ್ಥಗಿತಗೊಂಡಿದೆ.

ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ (ತೆಲುಗು ಸಿನಿಮಾ ಕಾರ್ಮಿಕರ ಒಕ್ಕೂಟ) ಬಂದ್‌ಗೆ ಕರೆ ನೀಡಿದೆ. 24 ವಿವಿಧ ವಿಭಾಗಗಳ ಸಿನಿಮಾ ಕಾರ್ಮಿಕರುಗಳ ಒಕ್ಕೂಟ ಇದಾಗಿದ್ದು, ತನ್ನ ಸುಪರ್ದಿಗೆ ಬರುವ 24 ವಿಭಾಗದ ಕಾರ್ಮಿಕರುಗಳಿಗೆ ಏಕಾ ಏಕಿ ಸಿನಿಮಾ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ಸೋಮವಾರದಿಂದ ತೆಲುಗಿನ ಎಲ್ಲ ಸಿನಿಮಾ, ವೆಬ್ ಸಿರೀಸ್‌ಗಳ ಚಿತ್ರೀಕರಣಗಳು ಬಂದ್ ಆಗಿವೆ.

ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್, ತೆಲುಗು ಸಿನಿಮಾ ಕಾರ್ಮಿಕರ ದಿನಗೂಲಿ ಮೊತ್ತ ಹೆಚ್ಚಿಸುವಂತೆ ನಿರ್ಮಾಪಕರ ಸಂಘದೊಂದಿಗೆ ಕೆಲ ತಿಂಗಳುಗಳಿಂದಲೂ ಸಭೆ ನಡೆಸುತ್ತಲೇ ಇತ್ತು. ಸಿನಿಮಾ ನಾಯಕರ ಸಂಭಾವನೆ ಹೆಚ್ಚಾಗಿದೆ. ನಟ-ನಟಿಯರ ಸಂಭಾವನೆ ಹೆಚ್ಚಾಗಿದೆ. ಒಟಿಟಿ ಇನ್ನಿತರೆ ಕಾರಣಕ್ಕೆ ಸಿನಿಮಾ ನಿರ್ಮಾಪಕರಿಗೆ ಬರುವ ಲಾಭ ಹತ್ತು ಪಟ್ಟಾಗಿದೆ. ಆದರೆ ಸಿನಿಮಾ ಕಾರ್ಮಿಕರ ದಿನಗೂಲಿ ವರ್ಷಗಳಿಂದಲೂ ಏರಿಕೆ ಆಗಿಲ್ಲ. ಹಾಗಾಗಿ ಕಾರ್ಮಿಕರ ದಿನಗೂಲಿಯನ್ನು 30% ಹೆಚ್ಚಳ ಮಾಡುವಂತೆ ಒತ್ತಾಯ ಮಾಡಲಾಗಿತ್ತು. ಇದಕ್ಕೆ ನಿರ್ಮಾಪಕ ಸಂಘ ಒಪ್ಪಿಲ್ಲ.
ಇದೇ ಕಾರಣಕ್ಕೆ ಹೈದರಾಬಾದ್ನಲ್ಲಿ ಸಭೆ ನಡೆಸಿದ ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ ಮುಖಂಡರು, ಸೋಮವಾರದಿಂದಲೇ ಸಿನಿಮಾಗಳ ಚಿತ್ರೀಕರಣ ಬಂದ್ ಮಾಡುವಂತೆ ಕರೆ ನೀಡಿದ್ದಾರೆ. ಆದರೆ ಯಾವ ನಿರ್ಮಾಣ ಸಂಸ್ಥೆ ಹೊಸ ದಿನಗೂಲಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹೆಚ್ಚುವರಿ ಕೂಲಿ ನೀಡುತ್ತಿದೆಯೋ ಆ ಸಿನಿಮಾಗಳ ಕೆಲಸಗಳು ಮಾತ್ರವೇ ಮುಂದುವರಿದಿವೆ. ಹಳೆ ದಿನಗೂಲಿ ವ್ಯವಸ್ಥೆ ಹೊಂದಿರುವ ಸಿನಿಮಾಗಳ ಚಿತ್ರೀಕರಣಗಳು ಬಂದ್ ಆಗಿವೆ.

ಹಬ್ಬಗಳ ಸಮಯ ಹತ್ತಿರವಿದ್ದು ಹಲವು ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿ ಲಘು-ಬಗೆಯಲ್ಲಿ ಚಿತ್ರೀಕರಣ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸಿನಿಮಾ ಕಾರ್ಮಿಕರ ಈ ಪ್ರತಿಭಟನೆ ಸಿನಿಮಾ ತಂಡಗಳಿಗೆ ಭಾರೀ ಹೊಡೆತ ನೀಡಲಿದೆ. ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ.

ರಾಜಮೌಳಿ-ಮಹೇಶ್ ಬಾಬು ಸಿನಿಮಾ, ಪ್ರಭಾಸ್ ನಟನೆಯ ಎರಡು ಸಿನಿಮಾ, ಚಿರಂಜೀವಿ ನಟನೆಯ ಎರಡು ಸಿನಿಮಾ, ಜೂ ಎನ್ಟಿಆರ್ ನಟನೆಯ ಪ್ರಶಾಂತ್ ನೀಲ್ ಜತೆಗಿನ ಸಿನಿಮಾ, ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಹೀಗೆ ಹಲವು ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಈಗ ಈ ಎಲ್ಲ ಸಿನಿಮಾಗಳ ಚಿತ್ರೀಕರಣ ಬಂದ್ ಆಗಿದೆ.

ಮತ್ತೊಂದು ವಿವಾದ ಸೃಷ್ಟಿಸಿದ ಕಮಲ್ ಹಾಸನ್: ಶಿಕ್ಷಣದ ಬಗ್ಗೆ ನಟ ಹೇಳಿದ್ದೇನು?

Actress ಖ್ಯಾತ ಕಿರುತೆರೆ ನಟಿಯ ಮಗನ ಮೈಬಣ್ಣಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ – ಟ್ರೋಲರ್ಸ್ ವಿರುದ್ಧ FIR

Actress Anasuya Bharadwaj ತೋಳಿಲ್ಲದ ಬ್ಲೌಸ್ ಧರಿಸಿ ಸೀರೆಯಲ್ಲಿ ಮಿಂಚಿದ ನಟಿ ಅನಸೂಯಾ ಭಾರಧ್ವಾಜ್

TAGGED:Telugu movie shooting suddenly stopped: Why? What happened?
Share This Article
Facebook Twitter Copy Link Print
Previous Article ಶಾಲೆಯಲ್ಲಿ ದ್ವೇಷ ಮಾಡ್ತಿದ್ದವನೇ ಗಂಡನಾಗಿ ಬಂದ
Next Article GOOD MORNING | Today’s prediction ಇಂದಿನ ರಾಶಿ ಭವಿಷ್ಯ, 05-08-2025, ಮಂಗಳವಾರ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?