newsics.com
ಮುಂಬೈ: ಯುವನಟರನ್ನೂ ನಾಚಿಸುವ 81ರ ಹರೆಯದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅದ್ಭುತ ನಟ. ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರ ಆಗಲೇ 1,000 ಕೋಟಿ ರೂಪಾಯಿ ಬಾಚಿಕೊಂಡಿದೆ. ದೈತ್ಯ ಪ್ರತಿಭೆ ಅಮಿತಾಬ್ ಬಚ್ಚನ್ ಮುಂದೆ ನಟಿಸಲು ಹಲವರು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಅಮಿತಾಬ್ ಬಚ್ಚನ್ ಜೊತೆ ಲಿಪ್ ಲಾಕ್ ದೃಶ್ಯ ಸುಲಭದ ಮಾತಲ್ಲ. ಇದಕ್ಕಾಗಿ ಬಾಲಿವುಡ್ ನಟಿ ರಾಣಿ ಮುಖರ್ಜಿ ಎರಡೆರಡು ಬಾರಿ ಬ್ರಶ್ ಮಾಡಿ ರೆಡಿಯಾಗಿದ್ದರಂತೆ
ದೈತ್ಯ ಪ್ರತಿಭೆ ಅಮಿತಾಬ್ ಬಚ್ಚನ್ ಮುಂದೆ ನಟಿಸಲು ಹಲವರು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಅಮಿತಾಬ್ ಬಚ್ಚನ್ ಜೊತೆ ಲಿಪ್ ಲಾಕ್ ದೃಶ್ಯ ಸುಲಭದ ಮಾತಲ್ಲ. ಇದಕ್ಕಾಗಿ ಬಾಲಿವುಡ್ ನಟಿ ರಾಣಿ ಮುಖರ್ಜಿ ಎರಡೆರಡು ಬಾರಿ ಬ್ರಶ್ ಮಾಡಿ ರೆಡಿಯಾಗಿದ್ದರಂತೆ.
2005ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬ್ಲಾಕ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ನಡುವೆ ಚುಂಬನ ದೃಶ್ಯವಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ.ರಾಣಿ ಮುಖರ್ಜಿ ದೃಷ್ಟಿ ದೋಷದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ವಯಸ್ಸಿನ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಚಿತ್ರದ ಅಂತ್ಯದಲ್ಲಿ ರಾಣಿ ಮುಖರ್ಜಿ ಹಾಗೂ ಅಮಿತಾಬ್ ಬಚ್ಚನ್ ಲಿಪ್ ಲಾಕ್ ದೃಶ್ಯವಿದೆ.
ರಾಣಿ ಮುಖರ್ಜಿ ದೃಷ್ಟಿ ದೋಷದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ವಯಸ್ಸಿನ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಚಿತ್ರದ ಅಂತ್ಯದಲ್ಲಿ ರಾಣಿ ಮುಖರ್ಜಿ ಹಾಗೂ ಅಮಿತಾಬ್ ಬಚ್ಚನ್ ಲಿಪ್ ಲಾಕ್ ದೃಶ್ಯವಿದೆ.
ಹಿರಿಯ ಹಾಗೂ ದೈತ್ಯ ಪ್ರತಿಭೆ ಅಮಿತಾಬ್ ಬಚ್ಚನ್ ಕೂಡ ಕಿಸ್ ಮಾಡಲು ಒಂದು ಕ್ಷಣ ಭಯಗೊಂಡಿದ್ದರಂತೆ. ಧೈರ್ಯ ಮಾಡಿಕೊಂಡು ಈ ದೃಶ್ಯದಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಿದ್ದರಂತೆ.
53ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಬ್ಲಾಕ್ ಭಾಜನವಾಗಿತ್ತು. ಅತ್ಯುತ್ತಮ ಫೀಚರ್ ಫಿಲ್ಮ್ ಪ್ರಶಸ್ತಿಯನ್ನೂ ಪಡೆದುಕೊಂಡಿತ್ತು. ಅಲ್ಲದೆ 11 ವಿವಿಧ ಪ್ರಶಸ್ತಿಗೆ ಶಿಫಾರಸುಗೊಂಡಿತ್ತು. ಉತ್ತಮ ನಿರ್ದೇಶಕ, ಉತ್ತಮ ಚಿತ್ರ, ಉತ್ತಮ ನಟ ಸೇರಿದಂತೆ ಪ್ರಮುಖ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.
ಪತ್ನಿಯೆಂದು ಭಾವಿಸಿ ವೇದಿಕೆಯಲ್ಲೇ ಅನ್ಯ ಮಹಿಳೆಗೆ ಮುತ್ತಿಕ್ಕಲು ಹೋದ ಜೋ ಬೈಡೆನ್! ವಿಡಿಯೊ ನೋಡಿ
ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಮೊದಲ ಬಾರಿಗೆ ವಸ್ತ್ರ ಸಂಹಿತೆ ಜಾರಿ
ಮೊಬೈಲ್ ಪಾಸ್ವರ್ಡ್ ಕೇಳಿದ ಗರ್ಲ್ಫ್ರೆಂಡ್, ಸಮುದ್ರಕ್ಕೆ ಹಾರಿದ ಭೂಪ