newsics.com
ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಲೇ ಇದೆ. ಇದೀಗ ಆರನೇ ಪಾಯಿಂಟ್ ಅಲ್ಲಿ 12ಕ್ಕೂ ಹೆಚ್ಚು ಮೂಳೆಗಳು ಪತ್ತೆಯಾಗಿದ್ದು, ಉಳಿದ ಪಾಯಿಂಟ್ ಗಳಲ್ಲಿ ಇಂದು ಉತ್ಖನನ ಆರಂಭಿಸಲಿದ್ದಾರೆ.
ಗುರುವಾರ ನಡೆಸಿದ ಕಾರ್ಯಾಚರಣೆಯ ವೇಳೆ ಆರನೇ ಪಾಯಿಂಟ್ ನಲ್ಲಿ ಮೃತದೇಹ ಪತ್ತೆಯಾಗಿದ್ದು, ಇದೀಗ ಅದೇ ಪಾಯಿಂಟ್ ನಲ್ಲಿ ಮನುಷ್ಯನ 12 ಮೂಳೆಗಳು ಪತ್ತೆಯಾಗಿದೆ. ಅದರಂತೆ ಇಂದು ಉಳಿದ ಪಾಯಿಂಟ್ಸ್ ಗಳಲ್ಲಿ ಅಧಿಕಾರಿಗಳು ಹುಡುಕಾಟ ನಡೆಸಲಿದ್ದಾರೆ.
ಈಗಾಗಲೇ ಆರನೇ ಪಾಯಿಂಟ್ ನಲ್ಲಿ ಸಿಕ್ಕ ಮುಳೆಗಳನ್ನು ಮಣಿಪಾಲದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ವೈಜ್ಞಾನಿಕ ಕ್ರಮ, ತಂತ್ರಜ್ಞಾನಗಳ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಮೃತರ ವಯಸ್ಸು, ಏಷ್ಟು ವರ್ಷದ ಹಿಂದೆ ಸತ್ತಿದ್ದಾರೆ, ಕಾರಣ ಏನು ಎಂದು ಪರಿಶೀಲನೆ ನಡೆಸಲಾಗಿದೆ.
ಅಸ್ಥಿಪಂಜರ ಸಿಗ್ತಿದ್ದಂತೆ ಎಸ್ಐಟಿ ಟೀಮ್ ತನಿಖೆಯನ್ನ ಹೆಚ್ಚಿಸಿದೆ. 1985 ರಿಂದ 2000 ವರೆಗೂ ಅನಾಥ ಶವಗಳ ಹೂತಿರೋ ಬಗ್ಗೆ ವರದಿ ನೀಡುವಂತೆ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಎಸ್ಐಟಿ ತಂಡ ಸೂಚನೆ ನೀಡಿದೆ. ಅನಾಥ ಶವಗಳನ್ನ ಎಲ್ಲೆಲ್ಲಿ ಹೂತಲಾಗಿದೆ. ಯಾವ ಸಂದರ್ಭದಲ್ಲಿ ಎಷ್ಟು ಶವ ಹೂತಲಾಗಿದೆ ಎಂಬ ಎಲ್ಲಾ ದಾಖಲೆಯನ್ನು ನೀಡುವಂತೆ ಕೇಳಿದೆ.
ಅಷ್ಟೇ ಅಲ್ಲದೆ ಧರ್ಮಸ್ಥಳದಲ್ಲಿ ರುದ್ರಭೂಮಿ ಮಂಜೂರಾಗಿದ್ದು ಯಾವಾಗ ಎಂಬ ದಾಖಲೆಯನ್ನು ಕೇಳಿದ್ದು, ಅದಕ್ಕೂ ಮುನ್ನ ಕಂದಾಯ ಇಲಾಖೆಯಿಂದ ಯಾವ ಸ್ಥಳಗಳಲ್ಲಿ ಹೆಣಗಳನ್ನು ಹೂಳಲಾಗುತ್ತಿತ್ತು ಎಂಬ ಸಂಪೂರ್ಣ ಮಾಹಿತಿ ನೀಡುವಂತೆ ಗ್ರಾಮ ಪಂಚಾಯತ್ ನ ಪಿಡಿಒಗೆ ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಹೆರಿಗೆ ಆದ್ಮೇಲೆ ಹೊಟ್ಟೆಗೆ ಬೆಲ್ಟ್, ಬಟ್ಟೆ ಕಟ್ಟಿಕೊಳ್ಳಲೇ ಬೇಕಾ?; ವೈದ್ಯರು ಹೇಳಿದ್ದೇನು?