Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಹೆರಿಗೆ ಆದ್ಮೇಲೆ ಹೊಟ್ಟೆಗೆ ಬೆಲ್ಟ್, ಬಟ್ಟೆ ಕಟ್ಟಿಕೊಳ್ಳಲೇ ಬೇಕಾ?; ವೈದ್ಯರು ಹೇಳಿದ್ದೇನು?
ಆರೋಗ್ಯಲೈಫ್‌ಸ್ಟೈಲ್

ಹೆರಿಗೆ ಆದ್ಮೇಲೆ ಹೊಟ್ಟೆಗೆ ಬೆಲ್ಟ್, ಬಟ್ಟೆ ಕಟ್ಟಿಕೊಳ್ಳಲೇ ಬೇಕಾ?; ವೈದ್ಯರು ಹೇಳಿದ್ದೇನು?

Share
2 Min Read
SHARE

newsics.com

ಸಾಮಾನ್ಯವಾಗಿ ಮಗುವಾದ ಮೇಲೆ ಅದು ಸಾಮಾನ್ಯ ಹೆರಿಗೆಯೇ ಆಗಿರಲಿ ಅಥವಾ ಸಿಸರಿಯನ್ನೇ ಆಗಿರಲಿ ಮೊದಲೆಲ್ಲಾ ಬಟ್ಟೆಯನ್ನು ಹೊಟ್ಟೆಗೆ ಸುತ್ತುತ್ತಿದ್ದರು. ಅದನ್ನು ಸುತ್ತುವುದಕ್ಕೂ ಒಂದು ರೀತಿಯ ಕ್ರಮ ಇತ್ತು. ಎಲ್ಲರಿಗೂ ಬರದ ವಿಷಯವದು. ಇದೇ ಕಾರಣಕ್ಕೆ ಕ್ರಮೇಣ ಹೊಟ್ಟೆಗೆ ಬೆಲ್ಟ್ ಬರಲು ಶುರುವಾಯಿತು. ಈಗಂತೂ ಬೆಲ್ಟ್ ಹಾಕುವವರೇ ಹೆಚ್ಚು. ಹಳ್ಳಿಗಳಲ್ಲಿ ಅಜ್ಜಿಯಂದಿರು ಇದ್ದ ಮನೆಗಳಲ್ಲಿ ಬಟ್ಟೆಯಿಂದ ಈಗಲೂ ಹೊಟ್ಟೆ ಸುತ್ತಲಾಗುತ್ತದೆ. ಹೊಟ್ಟೆಗೆ ಶಕ್ತಿ ಬರಲಿ ಹಾಗೂ ಆಪರೇಷನ್ ಬಳಿಕ ಬೆನ್ನು ನೋವು ಕಾಣಿಸಿಕೊಳ್ಳುವುದು ಸಹಜವಾದ್ದರಿಂದ ಬೆನ್ನಿಗೂ ಶಕ್ತಿ ಬರಲಿ ಎನ್ನುವ ಕಾರಣಕ್ಕೆ ಇದನ್ನು ಹಾಕಲಾಗುತ್ತದೆ.

ಇದು ಹಾಕದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ಅದಕ್ಕೆ ಈಗ ಡಾ.ದೀಪ್ತಿ ಅವರು ಉತ್ತರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ತುಂಬಾ ಜನ ನನಗೆ ಈ ಪ್ರಶ್ನೆ ಕೇಳುತ್ತಿರುತ್ತಾರೆ. ಬೆಲ್ಟ್ ಅಥವಾ ಬಟ್ಟೆ ಹಾಕುವುದರಿಂದ ಏನೂ ಸಮಸ್ಯೆ ಇಲ್ಲ. ಆದರೆ ಕೆಲವರು ಇದನ್ನು ಕಟ್ಟುವುದರಿಂದ ಹೊಟ್ಟೆಯಲ್ಲಿ ಇರುವ ಬೊಜ್ಜು ಕರಗಿ ಹೋಗುತ್ತದೆ, ಹೊಟ್ಟೆ ಒಳಗೆ ಹೋಗುತ್ತದೆ ಎಂದುಕೊಳ್ಳುತ್ತಾರೆ. ಅದು ಇದು ಸರಿಯಲ್ಲ. ಇದನ್ನು ಕಟ್ಟುವ ಉದ್ದೇಶ spinal posture ಚೇಂಜ್ ಆಗಿ ಬೆನ್ನು, ಸೊಂಟ ನೋವು ಜಾಸ್ತಿ ಬರುವ ಕಾರಣ, ಇದನ್ನು ಸಪೋರ್ಟ್ ಆಗಿ ಕೊಡುತ್ತೇವೆ. ಇದು ಬೆನ್ನು ಮತ್ತು ಹೊಟ್ಟೆ ಭಾಗಕ್ಕೆ ಸಹಾಯ ಆಗುತ್ತದೆ ಎಂದಿದ್ದಾರೆ ಡಾ.ದೀಪ್ತಿ.
ಸೀಸರಿಯನ್ ಆದ ಬಳಿಕ ಬೆಲ್ಟ್ ಕಟ್ಟಿಕೊಳ್ಳಬಹುದಾ ಎನ್ನುವುದೂ ಹಲವರು ಪ್ರಶ್ನೆ. ಆದರೆ ಸೀಸರಿಯನ್ ಮಾಡಿದ ಬಳಿಕ ಆ ಜಾಗವನ್ನು ಕಟ್ ಮಾಡುವುದರಿಂದ scar ಮೇಲೆ ಕಟ್ಟಿಕೊಂಡರೆ ಕಟ್ ಮಾಡಿದ ಜಾಗಕ್ಕೆ ಇಡೀ ಒತ್ತಡ ಹೋಗುತ್ತದೆ. ಆದ್ದರಿಂದ ಸೀಸರಿಯನ್ ಆದವರು ಇದನ್ನು ಕಟ್ಟುಕೊಳ್ಳುವಾಗ ಕಟ್ ಮಾಡಿದ ಜಾಗಕ್ಕೆ ತಗಲದಂತೆ ಕಟ್ಟಿಕೊಳ್ಳುವುದು ಉತ್ತಮ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟಿಕೊಳ್ಳಲೇಬೇಕೆಂದೇನೂ ಇಲ್ಲ. ಬೆನ್ನು ನೋವು, ಹೊಟ್ಟೆ ಭಾಗಕ್ಕೆ (abdomen) support ಚೆನ್ನಾಗಿ ಸಿಗತಾ ಇದೆ ಎಂದರೆ ಕಟ್ಟಿಕೊಳ್ಳದೇ ಇದ್ದರೂ ಪರವಾಗಿಲ್ಲ ಎನ್ನುತ್ತಾರೆ ಅವರು. ಸಿಸರಿಯನ್ ಆದ ಸಮಯದಲ್ಲಿ ಬೆಲ್ಟ್ ಆಪರೇಷನ್ ಮಾಡಿದ ಜಾಗದಲ್ಲಿ ಚುಚ್ಚುವ ಕಾರಣ ಮತ್ತಷ್ಟು ಸಮಸ್ಯೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಬೆಲ್ಟ್ ಬದಲು ಬಟ್ಟೆಯನ್ನು ಸರಿಯಾದ ರೀತಿಯಲ್ಲಿ ಸುತ್ತಿಕೊಂಡರೆ (ಅದನ್ನು ಬಲ್ಲವರು ಇದ್ದರೆ) ಅದೇ ಒಳ್ಳೆಯದು ಎನ್ನುವುದು ಅನುಭವಸ್ಥರ ಮಾತು.

https://www.instagram.com/reel/DMuuQnEM-Fz/?igsh=MXF6OWplMzJia3BzYQ==

Nagamma Passed Away ವರನಟ ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ನಿಧನ

TAGGED:Do I have to wear a belt or clothes around my stomach after giving birth? Is this safe? Listen to the doctor...
Share This Article
Facebook Twitter Copy Link Print
Previous Article Nagamma Passed Away ವರನಟ ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ನಿಧನ
Next Article DHARMASTHALA CASE : ಧರ್ಮಸ್ಥಳ ಕೇಸ್ ; 6ನೇ ಪಾಯಿಂಟ್‌ ನಲ್ಲಿ ಮೂಳೆಗಳು ಪತ್ತೆ, ಇಂದು ಸಹ ಮುಂದುವರೆದ ಅಗೆತ!

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?