Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Liechtenstein‌ ಈ ಪುಟ್ಟ ದೇಶದಲ್ಲಿ ಜನಸಂಖ್ಯೆಗಿಂತ ಕಂಪನಿಗಳೇ ಹೆಚ್ಚು; ಇಲ್ಲಿ ಎಲ್ಲರೂ ಅತಿ ಶ್ರೀಮಂತರೇ!
ಪ್ರಮುಖವಿದೇಶ

Liechtenstein‌ ಈ ಪುಟ್ಟ ದೇಶದಲ್ಲಿ ಜನಸಂಖ್ಯೆಗಿಂತ ಕಂಪನಿಗಳೇ ಹೆಚ್ಚು; ಇಲ್ಲಿ ಎಲ್ಲರೂ ಅತಿ ಶ್ರೀಮಂತರೇ!

Share
2 Min Read
SHARE

newsics.com

ವಿಶ್ವದ ಅತಿ ಶ್ರೀಮಂತ ದೇಶಗಳಲ್ಲಿ ಲಿಕ್ಟನ್ಸ್ಟೇನ್ ಕೂಡ ಹೌದು ಎಂದು ಹೆಚ್ಚಿನ ಮಂದಿಗೆ ತಿಳಿದಿಲ್ಲ. ಇದು ವಿಶ್ವದಲ್ಲೇ ಅತಿಹೆಚ್ಚು ತಲಾದಾಯ ಹೊಂದಿರುವ ದೇಶಗಳ ಸಾಲಿಗೆ ಬರುತ್ತದೆ.
ಈ ಪುಟ್ಟ ದೇಶದ ಬಗ್ಗೆ ಅಚ್ಚರಿ ಎನಿಸುವ ಹತ್ತು ಹಲವು ಅಂಶಗಳಿವೆ. ಈ ದೇಶದ ಬಗ್ಗೆ ಈಗ ಇಲ್ಲಿ ಬರೆಯಲು ಕಾರಣ, ಒಂದು ಸೋಷಿಯಲ್ ಮೀಡಿಯಾ ಪೋಸ್ಟ್. ಈ ದೇಶ ದೊಡ್ಡ ಶ್ರೀಮಂತ ದೇಶವಾದರೂ ಒಂದು ಏರ್ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ ಎಂದು ಕೆಲ ಅಚ್ಚರಿಯ ಸಂಗತಿಗಳನ್ನು ಆ ಪೋಸ್ಟ್ನಲ್ಲಿ ಬರೆಯಲಾಗಿತ್ತು.
ಲಿಕ್ಟನ್ಸ್ಟೈನ್ನಲ್ಲಿ ಏರ್ಪೋರ್ಟ್ ಇಲ್ಲ ಎಂಬುದು ನಿಜ. ಅದರದ್ದೇ ಸ್ವಂತ ಕರೆನ್ಸಿ ಎಂಬುದೂ ಇಲ್ಲ. ನೆರೆಯ ದೇಶಗಳ ಕರೆನ್ಸಿಯನ್ನೇ ಬಳಸಲಾಗುತ್ತದೆ. ಆದರೂ ಕೂಡ ಇಲ್ಲಿಯ ಜನರು ಶ್ರೀಮಂತರೋ ಶ್ರೀಮಂತರು. ಹಾಗಂತ ಇಲ್ಲಿ ಅಪರಾಧ ಬಹಳ ಕಡಿಮೆ. ಮೋಸ ವಂಚನೆ, ದಗಾ ಇಲ್ಲ. ಇಡೀ ದೇಶದಲ್ಲಿ ಇರೋದು ಕೇವಲ 300 ಪೊಲೀಸರು. ಜೈಲಿನಲ್ಲಿ ಸದ್ಯ ಕಂಬಿ ಎಣಿಸುತ್ತಿರುವವರ ಸಂಖ್ಯೆ ಏಳು ಮಾತ್ರವಂತೆ. ಇದು ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದು ಎನಿಸಿರುವುದು ಮಾತ್ರವಲ್ಲ, ಅತ್ಯಂತ ಸುರಕ್ಷಿತ ದೇಶಗಳಲ್ಲೂ ಒಂದಾಗಿದೆ.
ಅಂದಹಾಗೆ ಲಿಕ್ಟನ್ಸ್ಟೈನ್ ಯೂರೋಪ್ನಲ್ಲಿರುವ ಒಂದು ಪುಟ್ಟ ದೇಶ. ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ದೇಶಗಳ ನಡುವೆ ಇದೆ. ಇಲ್ಲಿಯ ಜನಸಂಖ್ಯೆ ಸುಮಾರು 39,000 ಇರಬಹುದು. ಬೆಂಗಳೂರಿನ ಒಂದು ಪುಟ್ಟ ಪ್ರದೇಶದ ಒಂದು ಲೇ ಔಟ್ನಲ್ಲಿ ಇರುವಷ್ಟು ಜನಸಂಖ್ಯೆ ಮಾತ್ರವೇ. ಆದರೆ, ಅಚ್ಚರಿ ಎಂದರೆ ಇಲ್ಲಿ ನೊಂದಾಯಿಲ್ಪಟ್ಟಿರುವ ಕಂಪನಿಗಳ ಸಂಖ್ಯೆ 70,000 ಕ್ಕೂ ಅಧಿಕ.
ಜಿಡಿಪಿ ತಲಾದಾಯದಲ್ಲಿ ಇದು ಬಹಳ ಎತ್ತರದಲ್ಲಿದೆ. ಒಂದೂವರೆ ಲಕ್ಷ ಡಾಲರ್‌ಗೂ ಅಧಿಕ ತಲಾದಾಯ ಇದೆ. ಅಮೆರಿಕದಕ್ಕಿಂತ ಬಹುತೇಕ ಎರಡು ಪಟ್ಟು ಹೆಚ್ಚು ಹೊಂದಿದೆ.
ಲಿಕ್ಟನ್ಸ್ಟೈನ್ ದೇಶಕ್ಕೆ ಆದಾಯ ಮೂಲ?
ಲಿಕ್ಟನ್ಸ್ಟೈನ್ ದೇಶಕ್ಕೆ ಪ್ರಮುಖ ಆದಾಯವೇ ಅದರಲ್ಲಿರುವ ಕೈಗಾರಿಕೆಗಳು ಮತ್ತು ಉದ್ದಿಮೆಗಳು. ಇಲ್ಲಿ ಆರ್ ಅಂಡ್ ಡಿಗೆ ಹೆಚ್ಚು ಒತ್ತುಕೊಡಲಾಗುತ್ತದೆ. ಹೀಗಾಗಿ, ಉತ್ಕೃಷ್ಟ ತಂತ್ರಜ್ಞಾನ ಇರುವ ಉದ್ದಿಮೆಗಳು ನೆಲಸಿವೆ. ಈ ದೇಶದ ಜನಸಂಖ್ಯೆಯ ಅರ್ಧದಷ್ಟು ಜನರು ಇಲ್ಲಿ ದಿನವೂ ಬಂದು ಕೆಲಸ ಮಾಡಿ ಹೋಗುತ್ತಾರೆ. ಇದರ ಫಲವಾಗಿ ಸಾಕಷ್ಟು ಆದಾಯ ಈ ದೇಶಕ್ಕೆ ಇದೆ.
ಈ ದೇಶದಲ್ಲಿ ಉತ್ಕೃಷ್ಟ ಶಿಕ್ಷಣ ವ್ಯವಸ್ಥೆ ಇದೆ. ಆದರೆ, ಪೂರ್ಣ ಉಚಿತ. ಶ್ರೀಮಂತರೇ ಅಧಿಕ ಇರುವ ಈ ದೇಶದಲ್ಲಿ ಏರ್ಪೋರ್ಟ್ ಇಲ್ಲ. ಇಲ್ಲಿನ ಜನರು ನೆರೆಯ ದೇಶಗಳಿಗೆ ಹೋಗಿ ವಿಮಾನ ಹತ್ತುತ್ತಾರೆ.

ಹನಿಟ್ರ್ಯಾಪ್ ಹೆಸರಲ್ಲಿ ದರೋಡೆ : ಓರ್ವ ಯುವತಿ ಸೇರಿ 6 ಆರೋಪಿಗಳು ಅರೆಸ್ಟ್

TAGGED:but it doesn't have an airport.Liechtenstein has more companies than population
Share This Article
Facebook Twitter Copy Link Print
Previous Article ಹನಿಟ್ರ್ಯಾಪ್ ಹೆಸರಲ್ಲಿ ದರೋಡೆ : ಓರ್ವ ಯುವತಿ ಸೇರಿ 6 ಆರೋಪಿಗಳು ಅರೆಸ್ಟ್
Next Article ನಟ ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್: ಬೆಂಗಳೂರು ಕಮಿಷನರ್‌ಗೆ ದೂರು ಕೊಟ್ಟ ನಟಿ ರಮ್ಯಾ

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?