Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Bajaj Electric vehicle ಚೀನಾ ನಿರ್ಧಾರಕ್ಕೆ ಇವಿ ಇಂಡಸ್ಟ್ರಿ ಕಕ್ಕಾಬಿಕ್ಕಿ: ಆಗಸ್ಟ್‌ನಲ್ಲಿ ಬಜಾಜ್ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಸ್ಥಗಿತ ಸಾಧ್ಯತೆ
ದೇಶಪ್ರಮುಖವಿದೇಶ

Bajaj Electric vehicle ಚೀನಾ ನಿರ್ಧಾರಕ್ಕೆ ಇವಿ ಇಂಡಸ್ಟ್ರಿ ಕಕ್ಕಾಬಿಕ್ಕಿ: ಆಗಸ್ಟ್‌ನಲ್ಲಿ ಬಜಾಜ್ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಸ್ಥಗಿತ ಸಾಧ್ಯತೆ

Share
2 Min Read
SHARE

newsics.com

ಈಗೇನಿದ್ದರೂ ಎಲೆಕ್ಟ್ರಿಕ್ ವಾಹನಗಳ ಭರಾಟೆ. ಬೇಡಿಕೆ ಇರುವಂತೆಯೇ ಅವುಗಳನ್ನು ತಯಾರಿಸುವ ಕಚ್ಚಾ ವಸ್ತುಗಳ ಕೊರತೆಯೂ ಹೆಚ್ಚಾಗುತ್ತಿದೆ.

ಚೀನಾ ಪೂರೈಕೆ ಮಾಡುವ ಕಚ್ಚಾವಸ್ತುವೊಂದು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿರುವ ಕಂಪನಿಗಳನ್ನೇ ನಡುಗಿಸುತ್ತಿದೆ.

ಈ ಕಚ್ಚಾವಸ್ತು ತೀವ್ರ ಕೊರತೆಯಿಂದಾಗಿ ಬಜಾಜ್ ಆಟೋ ತನ್ನ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸುವ ಹಂತ ತಲುಪಿದೆ.

ವಿದ್ಯುತ್ ಮೋಟಾರ್‌ಗಳಿಗೆ ಬಹಳ ಮುಖ್ಯವಾಗಿ ಬೇಕಾದ ಕಚ್ಚಾವಸ್ತು ರೇರ್ ಅರ್ಥ್ ಎಲಿಮೆಂಟ್ ಈಗ ಚೀನಾದಿಂದ ಪೂರೈಕೆಯಾಗುತ್ತಿಲ್ಲ. ಎಲ್ಲ ಕಚ್ಚಾವಸ್ತು ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿರುವುದೇ ಇದಕ್ಕೆ ಕಾರಣ. ರೇರ್ ಅರ್ಥ್ ಚೀನಾದಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಲಭ್ಯವಿದೆ. ಈಗ ಚೀನಾ ಇದನ್ನು ಯಾರಿಗೂ ಮಾರಾಟ ಮಾಡುತ್ತಿಲ್ಲ. ಇದು ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿಗಳಲ್ಲಿ ಕಳವಳ ಉಂಟುಮಾಡಿದೆ. ಅನೇಕ ಕಂಪನಿಗಳು ಈಗಾಗಲೇ ಚೀನಾವನ್ನು ಹೊರತುಪಡಿಸಿ ಇತರ ದೇಶಗಳಿಂದ ಈ ಕಚ್ಚಾ ವಸ್ತುವನ್ನು ಪಡೆಯಲು ಗಮನಹರಿಸಿವೆ.

ಈ ರೇರ್ ಅರ್ಥ್ ಕೊರತೆಯು ಬಜಾಜ್ ಆಟೋ ಕಂಪನಿಗೆ ತುಂಬಾ ತೊಂದರೆ ನೀಡಿದೆ. ಬಜಾಜ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಎಲೆಕ್ಟ್ರಿಕ್ ಆಟೋಗಳ ತಯಾರಿಕೆಯಲ್ಲಿ ಬಹಳ ಮುಂದಿದ್ದರೂ ಕಚ್ಚಾವಸ್ತುವಿನ ಕೊರತೆಯಿಂದ ಮುಗ್ಗರಿಸಿದೆ.
‘ಎಲೆಕ್ಟ್ರಿಕ್ ವಾಹನಗಳಿಗೆ ಭಾರವಾದ ರೇರ್ ಎಲೆಕ್ಟ್ರಿಕ್ ಮ್ಯಾಗ್ನೆಟ್ ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಿದೆ. ಪ್ರಸ್ತುತ, ನಾವು ಕಡಿಮೆ ಸಂಖ್ಯೆಯ ಆಯಸ್ಕಾಂತಗಳನ್ನು ತಯಾರಿಸುವ ತಯಾರಕರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. ಆದರೆ ಅವರು ನಮಗೆ ಅಗತ್ಯವಿರುವ ಸಂಖ್ಯೆಯ ಆಯಸ್ಕಾಂತಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಬಜಾಜ್ ಆಟೋ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದರು.
ಕಳೆದ ಜೂನ್‌ನಲ್ಲಿ ನಮ್ಮ ಎಲ್ಲಾ ಸ್ಟಾಕ್‌ಗಳು ಖಾಲಿಯಾಗಿದ್ದವು. ಈ ಜುಲೈನಲ್ಲಿ ನಾವು ಉತ್ಪಾದನೆಯನ್ನು ಅರ್ಧದಷ್ಟು ಕಡಿಮೆ ಮಾಡಬೇಕಾಯಿತು. ಮುಂದಿನ ಆಗಸ್ಟ್ ವೇಳೆಗೆ ನಾವು ಒಂದೇ ಒಂದು ವಿದ್ಯುತ್ ವಾಹನವನ್ನು ತಯಾರಿಸಲು ಸಾಧ್ಯವಾಗದಿರಬಹುದು. ಇದು ನಿಜವಾದರೆ ಮಾರುಕಟ್ಟೆಯಲ್ಲಿ ನಮ್ಮ ಮಾರುಕಟ್ಟೆ ಪಾಲನ್ನು ನಾವು ಬಹಳಷ್ಟು ಕಳೆದುಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.

ಬಜಾಜ್ ಪ್ರಸ್ತುತ ‘ಚೇತಕ್’ ಬ್ರಾಂಡ್ ಹೆಸರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮತ್ತು ಕೊಕೊ ಬ್ರಾಂಡ್ ಹೆಸರಿನಲ್ಲಿ ಎಲೆಕ್ಟ್ರಿಕ್ ಆಟೋಗಳನ್ನು ತಯಾರಿಸುತ್ತಿದೆ. ಕಚ್ಚಾ ವಸ್ತುಗಳ ಈ ಕೊರತೆಯಿಂದಾಗಿ ಈ ಎರಡೂ ಬ್ರಾಂಡ್‌ಗಳ ಉತ್ಪಾದನೆಯೂ ನಿಲ್ಲುವ ಸಾಧ್ಯತೆಯಿದೆ.

ಬಿಲಿಯನೇರ್ ಆಗಬಹುದಾದ ಅವಕಾಶ ನಿರಾಕರಣೆ; ಬರೋಬ್ಬರಿ 10,000 ಕೋಟಿ ರೂ ಜಾಬ್ ಆಫರ್ ಬೇಡವೆಂದ ವ್ಯಕ್ತಿ

TAGGED:Electric vehicle production across the country likely to stop in August
Share This Article
Facebook Twitter Copy Link Print
Previous Article Health Tips: ಅತಿಯಾಗಿ ಯೋಚನೆ ಮಾಡ್ತಿರಾ? ಹಾಗಾದ್ರೆ ಎಚ್ಚರಿಕೆ
Next Article ಧರ್ಮಸ್ಥಳದಿಂದಲೇ ತನಿಖೆ ಶುರು; SIT ಅಧಿಕಾರಿಗಳಿಗೆ ಫೈಲ್ ಹಸ್ತಾಂತರ,ಅನಾಮಿಕನನ್ನ ವಶಕ್ಕೆ ಪಡೆಯೋ ಸಾಧ್ಯತೆ

Popular Posts

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

2 Min Read

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read

ಪ್ರಮಾಣ ವಚನ ಬಳಿಕ ಪರಮೇಶ್ವರ್, ಎಂಬಿ ಪಾಟೀಲ್ ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

1 Min Read

You Might Also Like

ಪ್ರಮುಖ

ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ

1 Min Read
ದೇಶಪ್ರಮುಖ

ಬಿಹಾರದ ಮುಜಾಫರ್ ಪುರ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 10 ರೋಗಿಗಳು ಸಜೀವ ದಹನ.!

1 Min Read
ಕರ್ನಾಟಕಪ್ರಮುಖ

ಬರ್ತಡೇಯಂದು ಕೇಕ್ ಕಟ್‌ ಮಾಡಿಸಿ, ಪತ್ನಿಯನ್ನೇ ಕತ್ತರಿಸಿದ ಪಾಪಿ ಪತಿ

2 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?