newsics.com/ಮ್ಯೂಸಿಕ್ ಎಸ್
ಸಾಲದಲ್ಲಿ ಮನೆ ಮಾರಿದ್ದ ಕುಟುಂಬ ಕೊನೆಗೆ ಐಪಿಎಲ್ ಮೂಲಕ ಮಿಂಚಿ ಇದೀಗ ಸಾಲ ತೀರಿಸುವ ಸಂಭ್ರಮದಲ್ಲಿದ್ದಾನೆ.
ಕೆಕೆಆರ್ ವಿರುದ್ದ 27 ಎಸೆತದಲ್ಲಿ ಮುಕುಲ್ ಚೌಧರಿ ಸಿಕ್ಸರ್ ಮೂಲಕ 57 ರನ್ ಸಿಡಿಸಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಈ ಮೂಲಕ ಯುವ ಕ್ರಿಕೆಟಿಗ ಕೆಚ್ಚೆದೆಯ ಹೋರಾಟಕ್ಕೆ ಎಲ್ಲರು ಮೆಚ್ಚುಗೆ ಸೂಚಿಸಿದ್ದರು. ಆದರೆ ಈ ಯವ ಕ್ರಿಕೆಟಿಗ ಹಾಗೂ ಆತನ ಕುಟುಂಬ ಸಾಲದಲ್ಲಿ ಮುಳುಗಿತ್ತು.
ಮುಕುಲ್ ಚೌಧರಿ ತಂದೆ ಶಿಕ್ಷಕ, ಅಜ್ಜ ನಿವೃತ್ತ ಸೈನಿಕ. ಸಾಲ ಹೆಚ್ಚಾದಾಗ ಇದ್ದ ಮನೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಬಳಿಕ ನಿವೃತ್ತ ಸೈನಿಕ ನೀಡಿದ ಹಣದಿಂದ ಸಣ್ಣ ನಿವೇಷನ ಖರೀದಿಸಿ ಸಾಲ ಮಾಡಿ ಮನೆ ಕಟ್ಟಿದ್ದರು. ಇದರ ಸಾಲ ತೀರಿಸಲು ಆಗದೆ ಮುಕುಲ್ ಚೌಧರಿ ಕುಟುಂಬ ಸಂಕಷ್ಟದಲ್ಲಿ ಸಿಲುಕಿತ್ತು. ಜಾಗ ಖರೀದಿ, ಮನೆ ಸಾಲ ಹೀಗೆ ಎಲ್ಲಾ ಸಾಲಗಳು ಕುಟುಂಬದ ಆತಂಕ ಹೆಚ್ಚಿಸಿತ್ತು.
ಸಾಲದ ನಡುವೆ ಮುಕುಲ್ ಚೌಧರಿ ಕ್ರಿಕೆಟ್ ಆಟ ಬಿಟ್ಟಿರಲಿಲ್ಲ. ಲಖನೌ ಸೂಪರ್ ಜೈಂಟ್ಸ್ 2.6 ಕೋಟಿಗೆ ಮುಕುಲ್ ಚೌಧರಿಯನ್ನು ಖರೀದಿಸಿತ್ತು. ಲಖನೌ ಸೂಪರ್ ಜೈಂಟ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ ಮುಕುಲ್ ಚೌಧರಿ ಹೋರಾಟ ಅತ್ಯುತ್ತಮವಾಗಿತ್ತು. ಇದೀಗ ಮುಕುಲ್ ಚೌಧರಿಗೆ ಲಖನೌ ತಂಡ ಸ್ಯಾಲರಿ ನೀಡಿದೆ.
ಐಪಿಎಲ್ ಮುಗಿಸಿ ಮನೆಗೆ ಮರಳಿದ ಮುಕುಲ್ ಚೌಧರಿ ಪ್ರದರ್ಶನ ಜೊತೆಗೆ ಕುಟುಂಬ ಸಾಲದಿಂದ ಮುಕ್ತಿಗೊಳ್ಳುತ್ತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಈಗ ನಾವು ಸಾಲದಿಂದ ಸಂಪೂರ್ಣ ಮುಕ್ತಿಯಾಗುತ್ತಿದ್ದೇವೆ. ಇದಕ್ಕಿಂದ ದೊಡ್ಡ ಖುಷಿ ಇನ್ನೇನಿದೆ ಎಂದು ಮುಕುಲ್ ಚೌಧರಿ ಹೇಳಿದ್ದಾರೆ.
ಐಪಿಎಲ್ ಟೂರ್ನಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ನಾನು ಯಾವತ್ತು ಋಣಿಯಾಗಿದ್ದೇನೆ. ನನ್ನ ಪ್ರತಿಭಗೆ ಅವಕಾಶ ನೀಡಿದರು. ಇದರಿಂದ ನನ್ನ ಹಾಗೂ ಕುಟುಂಬದ ಸಾಲವೂ ಮುಗಿಯುತ್ತಿದೆ. ಸಾಲದ ಹೊರೆಯಲ್ಲಿ ಸಂಕಷ್ಟದ ದಿನಗಳನ್ನು ಕಳೆದಿದ್ದೇನೆ ಎಂದಿದ್ದಾರೆ.
ಬಿಹಾರದ ಮುಜಾಫರ್ ಪುರ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 10 ರೋಗಿಗಳು ಸಜೀವ ದಹನ.!